Ripponpete / ಮಲೆನಾಡು ಟುಡೆ ಸುದ್ದಿ / ರಿಪ್ಪನ್‌ಪೇಟೆ / ಇಲ್ಲಿನ ಗರ್ತಿಕೆರೆ ಸಮೀಪದ ಗಂದ್ರಳ್ಳಿ ಗ್ರಾಮದಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾನೆ. ಮೃತ ಯುವಕನನ್ನು 26 ವರ್ಷದ ಶ್ರೀಜಿತ್ ನಾಯ್ಕ ಎಂದು ಗುರುತಿಸಲಾಗಿದೆ. 3 ವರ್ಷಗಳ ಹಿಂದೆ ನಡೆದ ಪ್ರೇಮ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅವರು ಜೈಲುವಾಸ ಅನುಭವಿಸಿದ್ದ ಈತ ಆನಂತರ ಮಾನಸಿಕವಾಗಿ ಕುಗ್ಗಿಹೋಗಿದ್ದ ಎನ್ನಲಾಗಿದ್ದು, ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅನುಮಾನಿಸಲಾಗಿದೆ.

ಸಾಗರ : ಇಮ್ರಾನ್ ಮತ್ತು ಇಮ್ತಿಯಾಜ್ಗೆ 3 ವರ್ಷ ಶಿಕ್ಷೆ | ಶಿವಮೊಗ್ಗ ಕೋರ್ಟ್ ತೀರ್ಪು
ಇನ್ನೂ ಘಟನೆ ನಡೆದ ದಿನ ಅಂದರೆ, ಮಾರ್ಚ್ 7 ರಂದು ರಾತ್ರಿ 10.30 ರ ಸುಮಾರಿಗೆ ಶ್ರೀಜಿತ್ ಅವರು ಮನೆಗೆ ವಾಪಸ್ಸಾಗಿದ್ದರು. ಈ ವೇಳೆ ಅವರ ತಾಯಿ ಮತ್ತು ಸಹೋದರರು ಊಟ ಮಾಡುವಂತೆ ತಿಳಿಸಿದ್ದಾರೆ.ಇದಕ್ಕೆ ಈಗಾಗಲೇ ಊಟ ಮಾಡಿರುವುದಾಗಿ ಹೇಳಿ ಅವರು ನಿದ್ರೆಗೆ ಜಾರಿದ್ದ ಶ್ರಿಜಿತ್ ಬೆಳಗ್ಗೆ ಶವಾವಾಗಿ ಪತ್ತೆಯಾಗಿದ್ಧಾರೆ.
ಮಾರ್ಚ್ 8 ರಂದು ಮುಂಜಾನೆ ಸುಮಾರು 5.30 ರ ವೇಳೆಗೆ ಶ್ರೀಜಿತ್ ಮನೆಯಲ್ಲಿ ಇಲ್ಲದಿರುವುದು ಗಮನಿಸಿದ ಮನೆಯವರು ಹುಡುಕಾಡಿದಾಗ ಮನೆಯ ಮುಂಭಾಗದಲ್ಲಿರುವ ಮರಕ್ಕೆ ಲುಂಗಿಯ ಸಹಾಯದಿಂದ ನೇಣು ಬಿಗಿದುಕೊಂಡಿರುವುದು ಗೊತ್ತಾಗಿದೆ. ಘಟನೆಗೆ ಸಂಬಂಧಿಸಿದಂತೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
Ripponpete Depressed Over Love Affair Youth Dies by Suide ರಿಪ್ಪನ್‌ಪೇಟೆ ಸಮೀಪದ ಗಂದ್ರಳ್ಳಿ ಗ್ರಾಮದಲ್ಲಿ 26 ವರ್ಷದ ಶ್ರೀಜಿತ್ ನಾಯ್ಕ ಎಂಬ ಯುವಕ ಮರಕ್ಕೆ ನೇಣು ಬಿಗಿದುಕೊಂಡಿರುವ ಘಟನೆ ನಡೆದಿದೆ
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್ಸ್ಕ್ರೈಬ್ ಮಾಡಿ.