SHIVAMOGGA NEWS TODAY

ನೇಣು ಬಿಗಿದುಕೊಂಡು ಯುವಕ ಆತ್ಮ*ಹತ್ಯೆ

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ರಿಪ್ಪನ್‌ಪೇಟೆ: ತಾಲೂಕಿನ ಗರ್ತಿಕೆರೆ ಸಮೀಪದ ಗಂದ್ರಳ್ಳಿ ಗ್ರಾಮದಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ. 

ಶಿವಮೊಗ್ಗ : ಪ್ರಿಪೇಯ್ಡ್ ಆಟೋ ಕೌಂಟರ್ ಬುಕ್ ಮಾಡುತ್ತಿದ್ದೀರಾ? ಹಾಗಾದ್ರೆ ಈ ವಿಚಾರ ತಿಳಿದಿರಲಿ.

ಮೃತನನ್ನು 26 ವರ್ಷದ ಶ್ರೀಜಿತ್ ನಾಯ್ಕ ಎಂದು ಗುರುತಿಸಲಾಗಿದೆ. ಮಾರ್ಚ್ 7ರ ಶನಿವಾರ ರಾತ್ರಿ ಸುಮಾರು 10.30ರ ಸುಮಾರಿಗೆ ಮನೆಗೆ ಬಂದಿದ್ದ ಶ್ರೀಜಿತ್ ಅವರಿಗೆ ತಾಯಿ ಮತ್ತು ಸಹೋದರರು ಊಟಕ್ಕೆ ಕರೆದಿದ್ದಾರೆ. ಆದರೆ ನಾನು ಈಗಾಗಲೇ ಊಟ ಮಾಡಿದ್ದೇನೆ ಎಂದು ಹೇಳಿ ಮಲಗಲು ತೆರಳಿದ್ದರು. ಮರುದಿನ ಅಂದರೆ ಮಾರ್ಚ್ 8ರ ಭಾನುವಾರ ಬೆಳಿಗ್ಗೆ 5.30ಕ್ಕೆ ನೋಡಿದಾಗ ಶ್ರೀಜಿತ್ ಮನೆಯಲ್ಲಿ ಇರಲಿಲ್ಲ. ಆತಂಕಗೊಂಡ ಕುಟುಂಬಸ್ಥರು ಸುತ್ತಮುತ್ತ ಹುಡುಕಾಡಿದಾಗ, ಮನೆಯ ಮುಂದಿನ ಜಾಗದಲ್ಲಿದ್ದ ಮರಕ್ಕೆ ಲುಂಗಿಯಿಂದ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿರುವುದು ಕಂಡುಬಂದಿದೆ. 

ಹಳೆಯ ಪ್ರೇಮ ಪ್ರಕರಣದ ನೋವು ಹಾಗೂ ಮದ್ಯಪಾನದ ಅಮಲಿನಲ್ಲಿ ಈ ಆತ್ಮಹತ್ಯೆ ಸಂಭವಿಸಿರಬಹುದು ಎಂದು ಮೃತನ ಸಂಬಂಧಿಕರು ಸಂಶಯ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ripponpete Young Man committed Suicide

Ripponpete  Shivamogga Unknown Body Found Near Tuppur Hybrid Vegetable Seeds Shikaripura Laborer Dies Shivamogga Court Bhadravati Court Unidentified Man Soraba Ghana Detains Bhadravathi Arson Anandapura Shivamogga Shivaratri Rules Swathantryada Ota Court Orders Walk-in Interview Shivamogga Court KFD Fatality Shivamogga Round up
Ripponpete
shivamogga car decor sun control house
shivamogga car decor sun control house
END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.