ಶಿವಮೊಗ್ಗ : ಮಹಿಳಾ ಕಲಾವಿದರಿಗೆ ಇಲ್ಲಿದೆ ನೋಡಿ ಸುವರ್ಣಾವಕಾಶ, ಪ್ರಥಮ ಬಹುಮಾನ 8 ಸಾವಿರ, ಏನಿದು ಸ್ಪರ್ಧೆ

ಶಿವಮೊಗ್ಗ :  ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮದ ಅಂಗವಾಗಿ ಶಿವಮೊಗ್ಗ ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾಡಳಿತದ ವತಿಯಿಂದ ಮಹಿಳೆಯರಿಗಾಗಿ ವಿಶೇಷ ಚಿತ್ರಕಲಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. 

indian post office : ತೀರ್ಥಹಳ್ಳಿ ಹಾಗೂ ಶಿವಮೊಗ್ಗ ವ್ಯಾಪ್ತಿಯ ಅಂಚೆ ಕಚೇರಿಗಳ ವಹಿವಾಟು ತಾತ್ಕಾಲಿಕ ಸ್ಥಗಿತ | ಕಾರಣವೇನು

ಮಾರ್ಚ್ 15ರಂದು ಶಿವಮೊಗ್ಗ ಜಿಲ್ಲಾ ಪಂಚಾಯತ್ ಆವರಣದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಈ ಸ್ಪರ್ಧೆ ನಡೆಯಲಿದ್ದು, ಪ್ರಕೃತಿಯ ಸೌಂದರ್ಯವನ್ನು ಕುಂಚದಲ್ಲಿ ಬಿಡಿಸಲು  ಶಿವಮೊಗ್ಗದ ಮಹಿಳಾ ಕಲಾವಿದರಿಗೆ ಮುಕ್ತ ಅವಕಾಶ ನೀಡಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಆಕರ್ಷಕ ನಗದು ಬಹುಮಾನಗಳನ್ನು ಘೋಷಿಸಲಾಗಿದ್ದು, ಪ್ರಥಮ ಬಹುಮಾನವಾಗಿ 8,000 ರೂಪಾಯಿ, ದ್ವಿತೀಯ 6,000 ರೂಪಾಯಿ ಹಾಗೂ ತೃತೀಯ ಬಹುಮಾನವಾಗಿ 4,000 ರೂಪಾಯಿಗಳನ್ನು ನೀಡಲಾಗುವುದು. ಜೊತೆಗೆ 2,000 ರೂಪಾಯಿಗಳ ಪ್ರಶಂಸಾ ಬಹುಮಾನವೂ ಇರಲಿದೆ. 

ಆಸಕ್ತ ಮಹಿಳಾ ಕಲಾವಿದರು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಗೂಗಲ್ ಲಿಂಕ್ (https://forms.gle/rgYDA7gTqo1KsUoJ8) ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು 7760932206 ಅಥವಾ 9483815226 ಸಂಖ್ಯೆಗಳನ್ನು ಸಂಪರ್ಕಿಸಬಹುದು.

Zilla Panchayat organises a drawing competition

 Zilla Panchayat organises a drawing competition
Zilla Panchayat organises a drawing competition
 Zilla Panchayat organises a drawing competition
organises a drawing competition