Today Zodiac Predictions / ಮಲೆನಾಡು ಟುಡೆ ಸುದ್ದಿ / ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ ಪೌರ್ಣಮಿ ತಿಥಿಯು ಸಂಜೆ 5.01 ರವರೆಗೆ ಇರಲಿದ್ದು, ತದನಂತರ ಬಹುಳ ಪಾಡ್ಯಮಿ ಆರಂಭವಾಗಲಿದೆ. ಅಮೃತ ಘಳಿಗೆ ರಾತ್ರಿ 1.12 ರಿಂದ 2.50 ರವರೆಗೆ ಒದಗಿಬರಲಿದೆ. ವಿಶೇಷವೆಂದರೆ ಇಂದು ಹೋಳಿ ಹಬ್ಬ, ಇದರ ಜೊತೆಗೆ ಪಾಕ್ಷಿಕ ಚಂದ್ರಗ್ರಹಣವೂ ಸಂಭವಿಸಲಿದೆ. ರಾಹುಕಾಲ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇದ್ದರೆ, ಯಮಗಂಡ ಕಾಲ ಬೆಳಿಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.
ಶಿವಮೊಗ್ಗಕ್ಕೆ ಮಣ್ಣು ಸಾಗಿಸ್ತಿದ್ದಾಗ ಮೇಲೆ ಕೆಳಗಾಗಿ ರಸ್ತೆ ಬದಿ ಬಿದ್ದ ಲಾರಿ!
ಇವತ್ತಿನ ರಾಶಿಫಲ
ಮೇಷ / ಕೈಗೊಳ್ಳುವ ಕೆಲಸದಲ್ಲಿ ಅಡೆತಡೆ ನಿವಾರಣೆ. ಮನೆಯ ಒಳಗೆ ಹಾಗೂ ಹೊರಗೆ ವಿವಿಧ ಸವಾಲು. ದಿಢೀರ್ ಪ್ರಯಾಣ. ಒತ್ತಡ ಜಾಸ್ತಿ ಇರಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಸಾಮಾನ್ಯ ದಿನ, ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆ.
ವೃಷಭ / ದೂರ ಪ್ರಯಾಣ. ಆಸ್ತಿಗೆ ಸಂಬಂಧಿಸಿದ ವಿವಾದ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ. ಸಂಬಂಧಿಕರೊಂದಿಗೆ ವಿನಾಕಾರಣ ವೈಷಮ್ಯ. ವ್ಯಾಪಾರದಲ್ಲಿ ಲಾಭ. ಉದ್ಯೋಗಿಗಳಿಗೆ ಕೆಲಸದ ಒತ್ತಡ.
ಮಿಥುನ /ಸೂಕ್ತ ಸಮಯದಲ್ಲಿ ಸಹಾಯ. ಅನಿರೀಕ್ಷಿತವಾಗಿ ಧನಲಾಭ. ಪ್ರಯತ್ನಗಳಲ್ಲಿ ಯಶಸ್ಸು ಸಾಧಿಸುವಿರಿ. ಬೆಲೆಬಾಳುವ ವಸ್ತು ಖರೀದಿಸುವಿರಿ.ವ್ಯಾಪಾರ ಹಾಗೂ ಉದ್ಯೋಗ ಎರಡರಲ್ಲೂ ಉತ್ಸಾಹದಿಂದ ಮುನ್ನುಗ್ಗುವಿರಿ.
ಕರ್ಕಾಟಕ / ಭಿನ್ನಾಭಿಪ್ರಾಯಗಳನ್ನು ಎದುರಿಸಬೇಕಾಗಬಹುದು. ಆದಾಯಕ್ಕಿಂತ ಖರ್ಚು ಹೆಚ್ಚು. ದೂರ ಪ್ರಯಾಣ. ವ್ಯಾಪಾರದಲ್ಲಿ ಕೆಲವು ಸಮಸ್ಯೆ. ಉದ್ಯೋಗ ಕ್ಷೇತ್ರದಲ್ಲಿ ಮಾಡುವ ಹೊಸ ಪ್ರಯತ್ನಕ್ಕೆ ಅಡ್ಡಿ.

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ 89 ಹುದ್ದೆಗಳಿಗೆ ನೇರ ನೇಮಕಾತಿ! ಇಲ್ಲಿದೆ ವಿವರ
ಸಿಂಹ / ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ. ಹೊಸ ಜನರ ಪರಿಚಯ, ಆದಾಯ ಗಳಿಸುವ ಅವಕಾಶ. ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ತೃಪ್ತಿದಾಯಕ ವಾತಾವರಣ.
ಕನ್ಯಾ / ಸಾಲ ಆಗಬಹುದು. ಅನಿರೀಕ್ಷಿತ ಪ್ರಯಾಣ. ವ್ಯಾಪಾರ ವ್ಯವಹಾರ ಕೊಂಚ ಮಂದಗತಿಯಲ್ಲಿ ಸಾಗಲಿವೆ. ಖರ್ಚು ವೆಚ್ಚ ಜಾಸ್ತಿ. ಉದ್ಯೋಗದ ಸ್ಥಳದಲ್ಲಿ ಹೊಸ ಜವಾಬ್ದಾರಿ.

ತುಲಾ / ವ್ಯಾಪಾರ ಕ್ಷೇತ್ರದಲ್ಲಿ ಪ್ರಗತಿ. ಆಸ್ತಿ ವಿಚಾರವಾಗಿ ಇದ್ದ ವಿವಾದ ಬಗೆಹರಿಯಲಿವೆ. ಶುಭ ಸುದ್ದಿ ಕೇಳುವಿರಿ. ಹೊಸ ವಾಹನ ಖರೀದಿ. ಪುಣ್ಯಕ್ಷೇತ್ರಗಳಿಗೆ ಭೇಟಿ. ಉದ್ಯೋಗಸ್ಥರಿಗೆ ಉತ್ತಮ ಮನ್ನಣೆ.
ವೃಶ್ಚಿಕ/ ಹೊಸ ಸಂಪರ್ಕ. ದೇವಸ್ಥಾನಗಳಿಗೆ ಭೇಟಿ ನೀಡಿ, ಕುಟುಂಬದಲ್ಲಿ ಶುಭ ಕಾರ್ಯ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಅಡೆತಡೆಗಳಿಲ್ಲದೆ ಮುನ್ನಡೆಯುವಿರಿ.
ಧನುಸ್ಸು / ಜವಾಬ್ದಾರಿಗಳ ಹೊರೆ. ವ್ಯಾಪಾರದಲ್ಲಿ ಕೆಲವು ತೊಡಕು. ಕೈಗೊಳ್ಳುವ ಕೆಲಸದಲ್ಲಿ ಅಡೆತಡೆ. ಬೆಲೆಬಾಳುವ ವಸ್ತು ಜಾಗ್ರತೆ. ಅನಾರೋಗ್ಯ, ಉದ್ಯೋಗದಲ್ಲಿ ಮೌನವೇ ಲಕ್ಷಣ
ಶಿವಮೊಗ್ಗದಲ್ಲಿ ಹುಲಿ ಚರ್ಮದ ಚರ್ಚೆ ತಾರಕಕ್ಕೆ!? ಏನಿದು ವಿನಯ್ ಗುರೂಜಿ ವಿಚಾರ!?
ಮಕರ / ಕುಟುಂಬದ ಸದಸ್ಯರಿಂದಲೇ ವಿರೋಧ, ಆದಾಯ ಕೈಸೇರುವುದಿಲ್ಲ. ದೂರ ಪ್ರಯಾಣ. ವ್ಯಾಪಾರವು ಮಂದಗತಿಯಲ್ಲಿ ಸಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಸಮಸ್ಯೆ ಎದುರಾಗಲಿದೆ.
ಕುಂಭ / ಹೊಸ ಕೆಲಸಗಳಿಗೆ ಚಾಲನೆ. ಹೊಸ ಅವಕಾಶ. ಪ್ರಭಾವಿ ವ್ಯಕ್ತಿಗಳ ಪರಿಚಯ. ಸಂತೋಷದ ಸುದ್ದಿಯನ್ನು ಕೇಳುವಿರಿ. ಆರ್ಥಿಕವಾಗಿ ಲಾಭ. ವ್ಯಾಪಾರವು ಚೇತರಿಕೆ ಕಾಣಲಿದ್ದು, ಉದ್ಯೋಗದಲ್ಲಿ ಯಶಸ್ಸು ನಿಮ್ಮದಾಗಲಿದೆ.
ಮೀನ / ಸಮಾಜದಲ್ಲಿ ಗೌರವ ವೃದ್ಧಿಯಾಗಲಿದೆ. ಲಾಭ ಒಲಿದು ಬರಲಿದೆ. ವಿವಾದ ಸುಖಾಂತ್ಯ ಕಾಣಲಿವೆ. ಹೊಸ ಮನೆ ಅಥವಾ ವಾಹನ ಖರೀದಿ. ವ್ಯಾಪಾರದಲ್ಲಿ ಅಧಿಕ ಲಾಭ. ಉದ್ಯೋಗದಲ್ಲಿ ಮನ್ನಣೆ.

ಶಿವಮೊಗ್ಗ: ರಾಗಿಗುಡ್ಡದ 15 ವರ್ಷದ ಬಾಲಕ ನಾಪತ್ತೆ; ಸುಳಿವು ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡಿ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
