ಶಿವಮೊಗ್ಗ: ಜಾತ್ರೆಯಲ್ಲಿ ತಪ್ಪಿಸಿಕೊಂಡಿದ್ದ 80 ವರ್ಷದ ವೃದ್ಧೆಯ ರಕ್ಷಣೆ

ಹಂಚಿಕೊಳ್ಳಿ
WhatsApp Facebook X Telegram
Shimoga Police Rescue 80-Year-Old Woman
Shimoga Police Rescue 80-Year-Old Woman

ಶಿವಮೊಗ್ಗ: ನಗರದ ಕೋಟೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ಜನಸಂದಣಿಯಲ್ಲಿ ನಾಪತ್ತೆಯಾಗಿದ್ದ 80 ವರ್ಷದ ವೃದ್ಧೆಯನ್ನು ಶಿವಮೊಗ್ಗ ಪೊಲೀಸರು  ಪತ್ತೆಹಚ್ಚಿ ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ.

ಶಿವಮೊಗ್ಗ: ಮಾ. 1 ರಂದು ನಗರದ ಈ ಪ್ರದೇಶಗಳಲ್ಲಿ ಕರೆಂಟ್​​ ಇರಲ್ಲ 

ಘಟನೆಯ ವಿವರ

ಫೆಬ್ರವರಿ 27ರಂದು ವೃದ್ಧೆಯೊಬ್ಬರು ತಮ್ಮ ಕುಟುಂಬಸ್ಥರೊಂದಿಗೆ ಮಾರಿಕಾಂಬಾ ಜಾತ್ರೆಗೆ ಬಂದಿದ್ದರು. ಆದರೆ ಮಧ್ಯರಾತ್ರಿ ಸುಮಾರು 12:30ರ ಸುಮಾರಿಗೆ  ಜನ ಸಂದಣಿ ಹೆಚ್ಚಿದ್ದ ಕಾರಣ ಅವರು ಕುಟುಂಬದಿಂದ ಬೇರ್ಪಟ್ಟು ನಾಪತ್ತೆಯಾಗಿದ್ದರು. ಈ ಹಿನ್ನೆಕಲೆ ಕುಟುಂಬದವರು ಕೂಡಲೇ ಇ ಆರ್​​​ವಿ ಪೊಲೀಸರಿಗೆ ಕರೆ ಮಾಡಿ  ದೂರನ್ನು ನೀಡಿದ್ದಾರೆ.

ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಇ.ಆರ್.ವಿ ಸಿಬ್ಬಂದಿಗಳಾದ ಕೋಟೆ ಪೊಲೀಸ್ ಠಾಣೆಯ ಸಿಪಿಸಿ ಗಿರೀಶ್ ಹಾಗೂ ಡಿಎಆರ್ ವಿಭಾಗದ ಎ.ಹೆಚ್.ಸಿ ಚರಣ್ ಅವರು ಕೂಡಲೇ ಸ್ಥಳಕ್ಕೆ ಧಾವಿಸಿದರು. ಜಾತ್ರಾ ಮೈದಾನದ ಸುತ್ತಮುತ್ತ ಹುಡುಕಾಡಿ ವೃದ್ಧೆಯನ್ನು ಪತ್ತೆಹಚ್ಚಿದರು.

ಬಳಿಕ ಅವರ ವಿಳಾಸವನ್ನು  ತಿಳಿದುಕೊಂಡ ಪೊಲೀಸ್ ಸಿಬ್ಬಂದಿ, ಇ.ಆರ್.ವಿ ವಾಹನದಲ್ಲಿಯೇ ಅವರನ್ನು ಕರೆದುಕೊಂಡು ಹೋಗಿ ಅವರ ಮನೆಗೆ ಬಿಟ್ಟು ಬಂದಿದ್ದಾರೆ.

Shimoga Police Rescue 80-Year-Old Woman

Shimoga Police Rescue 80-Year-Old Woman
Shimoga Police Rescue 80-Year-Old Woman
shivamogga car decor sun control house
shivamogga car decor sun control house

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor