Shimoga Kote Marikamba Jatre 2026 ಶಿವಮೊಗ್ಗ : ನಗರದ ಕೋಟೆ ಶ್ರೀ ಮಾರಿಕಾಂಬ ಜಾತ್ರೆ ನಾಳೆಯಿಂದ ಅಂದರೆ ಫೆ 24 ರಿಂದ ನಡೆಯುತ್ತಿದ್ದು, ಈಗಾಗಲೇ ಜಾತ್ರೆಗೆ ಭರದ ಸಿದ್ದತೆ ನಡೆಯುತ್ತಿದೆ. ಇದರ ನಡುವೆ ಜಾತ್ರೆಗೆ ನಾನಾ ಕಡೆಯಿಂದ ಸಾವಿರಾರು ಭಕ್ತರು ಕಾರು, ಬೈಕ್ ಹಾಗೂ ಬಸ್ಗಳಿಂದ ಆಗಮಿಸುವುದರಿಂದ ಸಾಮಾನ್ಯವಾಗಿ ವಾಹನ ಸಂಚಾರ ದಟ್ಟಣೆ ಉಂಟಾಗುತ್ತದೆ. ಈ ಹಿನ್ನೆಲೆ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಮತ್ತು ವಾಹನ ದಟ್ಟಣೆ ನಿಯಂತ್ರಿಸಲು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಸಂಚಾರ ಮಾರ್ಗಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿ ಆದೇಶಿಸಿದ್ದಾರೆ.
1 ಸಂಚಾರ ಹಾಗೂ ನಿಲುಗಡೆ ನಿಷೇಧಿತ ಪ್ರದೇಶಗಳು
ಜಾತ್ರೆಯ ಪ್ರಮುಖ ದಿನಗಳಲ್ಲಿ ದೇವಸ್ಥಾನದ ಸುತ್ತಮುತ್ತಲಿನ ರಸ್ತೆಗಳಲ್ಲಿ ಜನದಟ್ಟಣೆ ಇರುವುದರಿಂದ ಈ ಕೆಳಗಿನ ನಿರ್ಬಂಧಗಳನ್ನು ವಿಧಿಸಲಾಗಿದೆ
ಕೋಟೆ ಶ್ರೀ ಮಾರಿಕಾಂಬಾ ದೇವಸ್ಥಾನದ 500 ಮೀಟರ್ ವ್ಯಾಪ್ತಿಯಲ್ಲಿರುವ ಎಲ್ಲಾ ರಸ್ತೆಗಳಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಫೆಬ್ರವರಿ 24 ರಿಂದ 28 ರವರೆಗೆ ಹೊಳಬಸ್ ಸ್ಟಾಪ್‌ನಿಂದ ಬೆಕ್ಕಿನ ಕಲ್ಮಠ ಮಾರ್ಗವಾಗಿ ರಾಮಣ್ಣ ಶ್ರೇಷ್ಠಿ ಪಾರ್ಕ್‌ವರೆಗೆ ವಾಹನ ಸಂಚಾರ ಮತ್ತು ಪಾರ್ಕಿಂಗ್ ಇರುವುದಿಲ್ಲ.
ಫೆಬ್ರವರಿ 24 ರಂದು ಮುಂಜಾನೆ 3.00 ರಿಂದ ರಾತ್ರಿ 11.00 ರವರೆಗೆ ಶಿವಪ್ಪ ನಾಯಕ ಸರ್ಕಲ್ ಮತ್ತು ಗಾಂಧಿ ಬಜಾರ್ ಸುತ್ತಮುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ.
Shimoga Kote Marikamba Jatre 2026 ಬಸ್ ಹಾಗೂ ಭಾರಿ ವಾಹನಗಳ ಪರ್ಯಾಯ ಮಾರ್ಗಗಳು
ಹೊರ ಜಿಲ್ಲೆ ಮತ್ತು ತಾಲ್ಲೂಕುಗಳಿಂದ ಬರುವ ಬಸ್ಸುಗಳು ಹಾಗೂ ಲಾರಿಗಳಿಗೆ ಈ ಕೆಳಗಿನಂತೆ ಮಾರ್ಗ ಬದಲಾವಣೆ ಮಾಡಲಾಗಿದೆ:
ಬೆಂಗಳೂರು/ಭದ್ರಾವತಿ ಕಡೆಯಿಂದ: ಎಂ.ಆರ್.ಎಸ್ ಸರ್ಕಲ್ ಬೈಪಾಸ್ ಮೂಲಕ ನಗರ ಪ್ರವೇಶಿಸಬೇಕು.
ಚಿತ್ರದುರ್ಗ/ಹೊಳೆಹೊನ್ನೂರು ಕಡೆಯಿಂದ: ವಿದ್ಯಾನಗರ – ಎಂ.ಆರ್.ಎಸ್ ಬೈಪಾಸ್ ಮೂಲಕ ಬರಬೇಕು.
ಹೊನ್ನಾಳಿ/ಹೊಳಲೂರು ಕಡೆಯಿಂದ ಸಂಗೊಳ್ಳಿ ರಾಯಣ್ಣ ಸರ್ಕಲ್ – ಕೆಇಬಿ ಸರ್ಕಲ್ – ರೈಲ್ವೆ ಸ್ಟೇಷನ್ – 100 ಅಡಿ ರಸ್ತೆ ಮೂಲಕ ಸಂಚರಿಸಬೇಕು.
ಶಿಕಾರಿಪುರ/ಸವಳಂಗ ಕಡೆಯಿಂದ ಉಷಾ ನರ್ಸಿಂಗ್ ಹೋಂ – ಪೊಲೀಸ್ ಚೌಕಿ – ಆಲ್ಕೋಳ ಮಾರ್ಗವಾಗಿ ಸಾಗರ ರಸ್ತೆಯನ್ನು ತಲುಪಬೇಕು.
3 ಬಸ್ ನಿಲ್ದಾಣದಿಂದ ನಿರ್ಗಮಿಸುವ ವಾಹನಗಳಿಗೆ ಸೂಚನೆ
ಬೆಂಗಳೂರು ಕಡೆಗೆ ಹೋಗುವ ವಾಹನಗಳು ಸಂದೇಶ್ ಮೋಟಾರ್ಸ್ ಬೈಪಾಸ್ ರಸ್ತೆ ಬಳಸಬೇಕು.
ಸವಳಂಗ, ಶಿಕಾರಿಪುರ, ದಾವಣಗೆರೆ ಕಡೆಗೆ ಹೋಗುವ ವಾಹನಗಳು ಸಾಗರ ರಸ್ತೆ – ಆಲ್ಕೋಳ -ಉಷಾ ನರ್ಸಿಂಗ್ ಹೋಂ ಸರ್ಕಲ್ ಮೂಲಕ ಸಾಗಬೇಕು.
ತುರ್ತು ಸೇವೆಗಳಾದ ಅಂಬುಲೆನ್ಸ್, ಪೊಲೀಸ್ ವಾಹನಗಳು ಹಾಗೂ ಅತಿ ಗಣ್ಯ ವ್ಯಕ್ತಿಗಳ ವಾಹನಗಳಿಗೆ ಈ ನಿಯಮಗಳಿಂದ ವಿನಾಯಿತಿ ನೀಡಲಾಗಿದ್ದು, ಸಂದರ್ಭಕ್ಕೆ ಅನುಗುಣವಾಗಿ ಅವುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ.
Shimoga Kote Marikamba Jatre 2026 Traffic Diversion


