ಶಿವಮೊಗ್ಗ: 5 ಪರ್ಸೆಂಟ್​​ ಕಮಿಷನ್​ ಕೇಳಿದಾಗ ಬಯಲಾಯ್ತು ವಂಚನೆಯ ಜಾಲ, ಲಾಭಾಂಶದ ಆಸೆಗೆ ಕಳೆದುಕೊಂಡಿದ್ದು 22 ಲಕ್ಷ

ಹಂಚಿಕೊಳ್ಳಿ
WhatsApp Facebook X Telegram
YouTube Shimoga Cyber Crime Lokayukta Officer Scam Shimoga Investment Fraud  Bank Account ಅಧಿಕ ಲಾಭದ ಆಸೆಗೆ ಬಿದ್ದು ವ್ಯಕ್ತಿಯೊಬ್ಬರು  ಬರೋಬ್ಬರಿ 22.71 ಲಕ್ಷ ರೂಪಾಯಿಗಳನ್ನು ಕಳೆದುಕೊಂಡ ಘಟನೆಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.MisuseShivamogga CyberShimoga Cyber Fraud Man Loses 12 Lakhs Shimoga CEN Police Man Shows Private Parts Shimoga Investment Scamacebook Shimoga Businessman
YouTube Lokayukta Officer Scam Shimoga Investment Fraud Bank Account Shimoga Cyber Crime Misuse  Shimoga Cyber Fraud Shimoga CEN Police Man Shows Private Parts Shimoga Investment Scam Shimoga Businessman Cheated of ₹7.84 Lakh in Fake Investment Scheme.

ಶಿವಮೊಗ್ಗ: ಅಧಿಕ ಲಾಭದ ಆಸೆಗೆ ಬಿದ್ದು ವ್ಯಕ್ತಿಯೊಬ್ಬರು  ಬರೋಬ್ಬರಿ 22.71 ಲಕ್ಷ ರೂಪಾಯಿಗಳನ್ನು ಕಳೆದುಕೊಂಡ ಘಟನೆ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆಯ ವಿವರ ಹೀಗಿದೆ 

ಕಳೆದ ಡಿಸೆಂಬರ್‌ನಲ್ಲಿ ಸಂತ್ರಸ್ತ ವ್ಯಕ್ತಿಯನ್ನು ಅಪರಿಚಿತರು D83 R.B.K Market parivar’ ಎಂಬ ವಾಟ್ಸಾಪ್ ಗ್ರೂಪ್‌ಗೆ ಸೇರಿಸಿದ್ದರು. ಈ ಗುಂಪಿನಲ್ಲಿ ಸ್ಟಾಕ್ ಮಾರ್ಕೆಟ್ ಹೂಡಿಕೆಯಿಂದ ಅಲ್ಪಾವಧಿಯಲ್ಲಿ ಕೋಟ್ಯಂತರ ರೂಪಾಯಿ ಗಳಿಸಬಹುದು ಎಂದು ನಂಬಿಸಲಾಗಿತ್ತು. ಆರೋಪಿಗಳು ಸಂತ್ರಸ್ತರಿಗೆ ಕರೆ ಮಾಡಿ ನಂಬಿಕೆ ಹುಟ್ಟಿಸಿ, RBK PMS ಎಂಬ ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವಂತೆ ಹೇಳಿದ್ದರು.

ಆರಂಭದಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಆಪ್‌ನಲ್ಲಿ ಲಾಭ ತೋರಿಸುತ್ತಿದ್ದ ವಂಚಕರು, ನಂತರ ಇಂಟರ್ನಲ್ ಮೆಂಬರ್‌ಶಿಪ್ ಮತ್ತು ಕ್ರೆಡಿಟ್ ಇನ್ವೆಸ್ಟ್‌ಮೆಂಟ್ ಹೆಸರಿನಲ್ಲಿ ಹಂತ ಹಂತವಾಗಿ ಹಣ ಪೀಕಿದ್ದಾರೆ. ಒಂದು ಹಂತದಲ್ಲಿ ಟ್ರೇಡಿಂಗ್ ಖಾತೆ ಮೈನಸ್‌ಗೆ ಹೋಗಿದೆ ಎಂದು ಹೆದರಿಸಿ, ಅದನ್ನು ಸರಿಪಡಿಸಲು ಮತ್ತೆ ಹಣ ಹಾಕಿಸಿಕೊಂಡಿದ್ದಾರೆ. ಹೀಗೆ ಸಂತ್ರಸ್ತರು ಒಟ್ಟು 22,71,400 ರೂಪಾಯಿಗಳನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದರು.

ವಂಚನೆಯ ಅಸಲಿ ಮುಖ ಬಯಲಾಗಿದ್ದು ಸಂತ್ರಸ್ತರು ತಮ್ಮ ಲಾಭಾಂಶದ ಹಣವನ್ನು ವಿತ್‌ಡ್ರಾ ಮಾಡಲು ಪ್ರಯತ್ನಿಸಿದಾಗ. ಆಗ ಆರೋಪಿಗಳು ಲಾಭದ ಮೊತ್ತದ ಮೇಲೆ ಶೇ. 5 ರಷ್ಟು ಕಮಿಷನ್ ಮೊದಲು ಪಾವತಿಸುವಂತೆ ಡಿಮ್ಯಾಂಡ್ ಮಾಡಿದ್ದಾರೆ. ಇದರಿಂದ ಅನುಮಾನಗೊಂಡ ಸಂತ್ರಸ್ತರು ತಮ್ಮ ಸ್ನೇಹಿತರ ಬಳಿ ಚರ್ಚಿಸಿದಾಗ, ತಾವು ಮೋಸ ಹೋಗಿರುವುದು ದೃಢಪಟ್ಟಿದೆ. ತಕ್ಷಣವೇ ಅವರು ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Shimoga Investment Fraud Man Loses 22 Lakhs

Shimoga Investment Fraud  Bank Account ಅಧಿಕ ಲಾಭದ ಆಸೆಗೆ ಬಿದ್ದು ವ್ಯಕ್ತಿಯೊಬ್ಬರು  ಬರೋಬ್ಬರಿ 22.71 ಲಕ್ಷ ರೂಪಾಯಿಗಳನ್ನು ಕಳೆದುಕೊಂಡ ಘಟನೆಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.MisuseShivamogga CyberShimoga Cyber Fraud Man Loses 12 Lakhs Shimoga CEN Police Man Shows Private Parts Shimoga Investment Scamacebook Shimoga Businessman
Shimoga Investment Fraud
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor