ಶಿವಮೊಗ್ಗ: ಭದ್ರಾವತಿಯ ಸರ್ಕಾರಿ ಬಸ್ ನಿಲ್ದಾಣದಲ್ಲಿ ಅಸ್ವಸ್ಥಗೊಂಡು ಬಿದ್ದಿದ್ದ ಸುಮಾರು 45 ರಿಂದ 50 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬಸ್ ನಿಲ್ದಾಣದಲ್ಲಿ ಸುಸ್ತಾಗಿ ಬಿದ್ದಿದ್ದ ಇವರನ್ನು ಈ ಮೊದಲು ಬೊಮ್ಮಕಟ್ಟೆಯ ವೃದ್ಧಾಶ್ರಮಕ್ಕೆ ದಾಖಲಿಸಲಾಗಿತ್ತು. ಆದರೆ, ಫೆಬ್ರವರಿ 23 ರಂದು ಈ ವ್ಯಕ್ತಿಯು ವೃದ್ಧಾಶ್ರಮದಲ್ಲಿ ಮಲಗಿದ್ದ ಸ್ಥಿತಿಯಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
Unidentified Man ಮೃತರ ಚಹರೆ ಹೀಗಿದೆ
ಸುಮಾರು 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದಾರೆ. ಇವರ ಬಲಗೈ ಮುಂಗೈ ಮೇಲೆ ‘ರಂಗಮ್ಮ’ ಎಂದು ಹಚ್ಚೆ ಹಾಕಿಕೊಂಡಿದ್ದಾರೆ. ಮೃತದೇಹದ ಮೇಲೆ ಬಿಳಿ ಮತ್ತು ಕಂದು ಬಣ್ಣದ ಮಿಶ್ರಿತ ತುಂಬು ತೋಳಿನ ಚೆಕ್ಸ್ ಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಇರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ವ್ಯಕ್ತಿಯ ಬಗ್ಗೆ ಅಥವಾ ಇವರ ವಾರಸುದಾರರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿದ್ದಲ್ಲಿ ತಕ್ಷಣವೇ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ. ಮಾಹಿತಿ ನೀಡಲು ಇಚ್ಛಿಸುವವರು ಪೊಲೀಸ್ ಇಲಾಖೆಯ ದೂರವಾಣಿ ಸಂಖ್ಯೆಗಳಾದ 9480803355 ಅಥವಾ 9480803381 ಗೆ ಕರೆ ಮಾಡಬಹುದು. ನಿಮ್ಮ ಒಂದು ಸಣ್ಣ ಮಾಹಿತಿ ಅಗಲಿದ ಜೀವಕ್ಕೆ ಸಂಸ್ಕಾರ ನೀಡಲು ಹಾಗೂ ಅವರ ಕುಟುಂಬವನ್ನು ಪತ್ತೆಹಚ್ಚಲು ಸಹಕಾರಿಯಾಗಬಹುದು.
Unidentified Man Found Dead in Bhadravathi


