ಊರುಗಡೂರು ಪ್ರಕರಣ, ಕ್ರಿಕೇಟ್​ ಆಟದಲ್ಲಿ ಆದ ಗಲಾಟೆ ಕೊಲೆಯಲ್ಲಿ ಅಂತ್ಯ, ಎಸ್​ಪಿ ಹೇಳಿದ್ದೇನು

ಶಿವಮೊಗ್ಗ: ಊರುಗಡೂರಿನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 7 ಮಂದಿ ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ  ನಿಖಿಲ್ ಬಿ. ಅವರು ತಿಳಿಸಿದ್ದಾರೆ. ಕೇವಲ ಕ್ರಿಕೆಟ್ ಆಟದ ವಿಚಾರವಾಗಿ ನಡೆದ ಕ್ಷುಲ್ಲಕ ಗಲಾಟೆಯು ಹತ್ಯೆಯಲ್ಲಿ ಅಂತ್ಯವಾಗಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 

ಶಿವಮೊಗ್ಗ ಮಾರಿಜಾತ್ರೆ ಹೇಗಿದೆ ವ್ಯವಸ್ಥೆ ಪೂರ್ತಿ ವಿವರ ಇವತ್ತಿನ ಇ-ಪೇಪರ್​ ಓದಿ

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್‌.ಪಿ ನಿಖಿಲ್,  ಮೃತ ಬಾಲಕನ ಜೊತೆ ಆರೋಪಿಗಳು ಕಳೆದ ಎರಡು ದಿನಗಳ ಹಿಂದೆಯೇ ಕ್ರಿಕೆಟ್ ಆಟದ ವಿಚಾರವಾಗಿ ಜಗಳವಾಡಿದ್ದರು. ಘಟನೆಯ ದಿನ  ಬೇರೊಬ್ಬನ ಮೇಲೆ ಹಲ್ಲೆ ನಡೆಯುತ್ತಿದ್ದಾಗ ಜಗಳ ಬಿಡಿಸಲು ಹೋದ  ಮೃತ ಬಾಲಕನ ಮೇಲೆ ಆರೋಪಿಗಳು ಕೈಯಿಂದ ತೀವ್ರವಾಗಿ ಗುದ್ದಿದ್ದಾರೆ. ಇದರಿಂದ ಗಂಭೀರ ಪೆಟ್ಟು ಬಿದ್ದು ಬಾಲಕ ಮೃತಪಟ್ಟಿದ್ದಾನೆ, ಎಂದು ವಿವರಿಸಿದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ, ಕೃತ್ಯ ಎಸಗಿದ ಅಪ್ರಾಪ್ತ ಬಾಲಕರು ಗಾಂಜಾ ಸೇವನೆ ಮಾಡಿದ್ದರೇ ಎಂಬ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಲು ಮುಂದಾಗಿದೆ. ಒಂದು ವೇಳೆ ಮಾದಕ ವಸ್ತುಗಳ ನಂಟು ಕಂಡುಬಂದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. 

SP Action 7 Arrested Shivamogga Murder Case

SP Action 7 Arrested Shivamogga Murder Case
SP Action 7 Arrested Shivamogga Murder Case
shivamogga car decor sun control house
shivamogga car decor sun control house