ಬೆಂಗಳೂರು | ಕೆ.ಆರ್. ಪುರಂನ ಎಸ್ಇಎ (SEA) ಪ್ರೌಢಶಾಲೆಯಲ್ಲಿ ಇಂದು ನಡೆದ ಎಸ್ಎಸ್ಎಲ್ಸಿ 3ನೇ ಪೂರ್ವ ಸಿದ್ಧತಾ ಪರೀಕ್ಷಾ ಕೇಂದ್ರಕ್ಕೆ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಅವರು ಭೇಟಿ ನೀಡಿದರು. ಪರೀಕ್ಷಾ ಕೊಠಡಿಯಲ್ಲಿದ್ದ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ಮಕ್ಕಳಲ್ಲಿ ಕಂಡುಬಂದ ಸಾಧನೆಯ ಛಲ ಹಾಗೂ ಆತ್ಮವಿಶ್ವಾಸವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ದಾವಣಗೆರೆ, ಶಿವಮೊಗ್ಗ, ಸಾಗರ, ಶಿರಸಿ, ಮಂಗಳೂರು ಅಡಿಕೆ ರೇಟು ಎಷ್ಟಿದೆ? ಇಲ್ಲಿದೆ ಪೂರ್ಣ ಪಟ್ಟಿ
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಪೂರ್ವ ಸಿದ್ಧತಾ ಪರೀಕ್ಷೆಯು ಕೇವಲ ಅಂಕಗಳಿಕೆಯ ಸಾಧನವಲ್ಲ, ಬದಲಾಗಿ ಇದು ನಿಮ್ಮ ದೌರ್ಬಲ್ಯಗಳನ್ನು ಅರಿತು ತಪ್ಪುಗಳನ್ನು ತಿದ್ದಿಕೊಳ್ಳಲು ಸಿಕ್ಕಿರುವ ಅತ್ಯುತ್ತಮ ವೇದಿಕೆಯಾಗಿದೆ ಎಂದು ಕಿವಿಮಾತು ಹೇಳಿದರು. ವಾರ್ಷಿಕ ಪರೀಕ್ಷೆಯ ಮೊದಲು ಎದುರಾಗುವ ಈ ಹಂತವು ನಿಮ್ಮನ್ನು ಪರಿಪೂರ್ಣಗೊಳಿಸಲು ಸಹಾಯ ಮಾಡುತ್ತದೆ ಎಂದು ಅವರು ವಿಶ್ಲೇಷಿಸಿದರು.
ಪರೀಕ್ಷೆಯ ಸಂದರ್ಭದಲ್ಲಿ ಗೊಂದಲಕ್ಕೊಳಗಾಗಬೇಡಿ; ವರ್ಷವಿಡೀ ನೀವು ಮಾಡಿದ ಕಠಿಣ ಪರಿಶ್ರಮ ನಿಮ್ಮ ಕೈಹಿಡಿಯಲಿದೆ. ಪಶ್ನೆಗಳಿಗೆ ಉತ್ತರಿಸುವ ಮುನ್ನ ಸ್ವಲ್ಪ ಸಮಯ ಯೋಚಿಸಿ, ನಿಖರವಾದ ಉತ್ತರಗಳನ್ನು ಬರೆಯುವತ್ತ ಗಮನಹರಿಸಿ ಎಂದು ಅವರು ಸಲಹೆ ನೀಡಿದರು.
SSLC Exams Minister Madhu Bangarappa Inspires Students


