ಭದ್ರಾವತಿ: ಪತಿ ಆತ್ಮಹತ್ಯೆ ಮಾಡಿಕೊಂಡ ಕೇವಲ ಐದು ದಿನಗಳ ಅಂತರದಲ್ಲಿ ಪತ್ನಿಯೂ ಸಹ ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಹೊಸ ಸಿದ್ದಾಪುರದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಸ್ವಾತಿ (26) ಎಂದು ಗುರುತಿಸಲಾಗಿದ್ದು, ಸಾವಿಗೂ ಮುನ್ನ ಆಕೆ ತನ್ನ ತಾಯಿಗೆ ಕಳುಹಿಸಿದ ವಾಟ್ಸಾಪ್ ಸಂದೇಶವು ಈಗ ಪ್ರಕರಣಕ್ಕೆ ಹೊಸ ಆಯಾಮ ನೀಡಿದೆ.
ಶಿವಮೊಗ್ಗ ವಿಮಾನ ನಿಲ್ದಾಣ ನೈಟ್ ಲ್ಯಾಂಡಿಂಗ್ ವಿಚಾರವಾಗಿ ಹೊಸ ಅಪ್ಡೇಟ್: ನಂಜಯ್ಯನ ಮಠ ಹೇಳಿದ್ದೇನು
Bhadravati ಪತಿ ಸಾವಿನ ಬೆನ್ನಲ್ಲೇ ಪತ್ನಿ ಆತ್ಮಹತ್ಯೆ
ಕೆಎಸ್‌ಐಎಸ್‌ಎಫ್ (KSISF) ನಲ್ಲಿ ಡಿ ದರ್ಜೆ ನೌಕರರಾಗಿದ್ದ ಜಗದೀಶ್ ಎಂಬುವವರು ಕಳೆದ ಮಹಾಶಿವರಾತ್ರಿಯಂದು ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಭದ್ರಾವತಿಯ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪತಿಯ ಅಗಲಿಕೆಯ ಬೆನ್ನಲ್ಲೇ ಸ್ವಾತಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಾಯಿಗೆ ವಾಟ್ಸ್ಪ್ ಸಂದೇಶ
ಸ್ವಾತಿ ಸಾವಿಗೂ ಮುನ್ನ ತನ್ನ ತಾಯಿಗೆ ಕಳುಹಿಸಿರುವ ವಾಟ್ಸಪ್ ಸಂದೇಶ ಪೊಲೀಸರಿಗೆ ಸಿಕ್ಕಿದ್ದು, ಶಿವಮೊಗ್ಗದ ಪೊಲೀಸ್ ಠಾಣೆಯೊಂದರ ದಫೇದಾರ್ ಒಬ್ಬರು, ನಿನ್ನ ಪತಿಯ ಸಾವಿಗೆ ನೀನೇ ಕಾರಣ ಎಂದು ಸ್ವಾತಿ ಮೇಲೆ ಗಂಭೀರ ಆರೋಪ ಮಾಡಿದ್ದರು ಎನ್ನಲಾಗಿದೆ. ಈ ಮಾನಸಿಕ ಕಿರುಕುಳ ಮತ್ತು ಆರೋಪದಿಂದ ನೊಂದ ಸ್ವಾತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
Bhadravati ಡೆತ್ ನೋಟ್ನಲ್ಲಿ ಏನಿದೆ
ಡೆತ್ ನೋಟ್ನಲ್ಲಿಅಮ್ಮ sry ಅಮ್ಮ ನನ್ನ ಬಗ್ಗೆ ಇಲ್ದೆ ಇರೋದೆಲ್ಲ ಕೆಟ್ಟದಾಗಿ ಜನಗಳ ಹತ್ತಿರ ಹೇಳಿದ್ದಾರೆ. …… ಅಂತ ನಂಗೆ ತಡಿಯೋಕೆ ಆಗ್ತಿಲ್ಲ, ನನ್ನ ಗಂಡ ಸತ್ತಿದ್ದು ಫುಲ್ ಡ್ರಿಂಕ್ಸ್ ಮಾಡಿದ್ರು, ಹೆದ್ರುಸೋಕೆ ಹೋಗಿ ಹಾಗೆ ಮಾಡ್ಕೊಂಡಿದ್ರು, But ಈ ಪೊಲೀಸ್ ನನ್ ಬಗ್ಗೆ ಕೆಟ್ಟದಾಗಿ ಏನೇನೋ ಜನಗಳ ಹತ್ತಿರ ಹೇಳಿರೋದು ನಂಗೆ ವಿಷಯ ಗೊತಾಯ್ತು, ಆವ್ನುನ್ನ ಮಾತ್ರ ಸುಮ್ನೆ ಬಿಡ್ಬೇಡಿ, ಅವ್ರು ಯಾರು ಅಂತಾನೆ ನಂಗೆ ಗೊತ್ತಿಲ್ಲ, Fb ಲಿ ಮೆಸೇಜ್ ಮೆಸೇಜ್ ಮಾಡ್ತಿದ್ರು, ನಾನು ಬ್ಲಾಕ್ ಮಾಡ್ದೆ ಆ ಏನೇನೋ ಹೇಳಿದ್ದಾರೆ. ನನ್ನ ಮಕ್ಳುನ ಚೆನ್ನಾಗಿ ನೋಡ್ಕೊಳಿ ಪ್ಲೀಸ್ ಎಂದು ಬರೆದಿದ್ದಾರೆ.
ಇನ್ನೂ ಮೃತ ಮಹಿಳೆಯ ತಾಯಿ ಮಾತನಾಡಿ, ಮಗಳು ಸ್ವಾತಿ ನನಗೆ ಯಾರೋ ಪೊಲೀಸ್ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದಾನೆ ಎಂದು ನನ್ನ ಮೊಬೈಲ್ಗೆ ಮೆಸೇಜ್ ಮಾಡಿದ್ದಳು.. ಆ ಪೊಲೀಸ್ನ್ನು ಮಾತ್ರ ಸುಮ್ಮನೆ ಬಿಡಬೇಡಿ. ನನ್ನ ಮಗಳು ಹೋದ ಜಾಗಕ್ಕೆ ಅವನು ಹೋಗಬೇಕು. ಆ ಪೊಲೀಸ್ ಇದೇ ಊರಿನವನಂತೆ ನನ್ನ ಮಗಳಿಗೆ ಅವನು ಪರಿಚಯನೇ ಇಲ್ಲ ನನ್ನ ಮಗಳು ಎಲ್ಲಾ ವಿಚಾರವನ್ನು ನನ್ನ ಬಳಿ ಹೇಳಿಕೊಳ್ಳುತ್ತಿದ್ಲು. ಆತ ನನ್ನ ಮಗಳಿಗೆ ಏನೇನೋ ಮೆಸೇಜ್ ಹಾಕಿದ್ದಾನೆ. ಅವನನ್ನು ಸುಮ್ಮನೆ ಬಿಡಬೇಡಿ ಎಂದು ನೋವನ್ನು ತೋಡಿಕೊಂಡಿದ್ದಾರೆ.

Bhadravati Woman Suicide After Husband Death



