ಭದ್ರಾವತಿ: ಮನೆ ಮುಂದೆ ನಿಲ್ಲಿಸಿದ್ದ 3 ಬೈಕ್‌ಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು!

Bhadravathi Arson ಭದ್ರಾವತಿ :  ಭದ್ರಾವತಿಯ ನೆಹರೂ ನಗರದಲ್ಲಿ ತಡರಾತ್ರಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದು, ಮನೆಯ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಮೂರು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ.  ಈ ಹಿನ್ನೆಲೆ ಸುಮಾರು 1.85 ಲಕ್ಷ ಮೌಲ್ಯದ ಬೈಕ್‌ಗಳು ಸಂಪೂರ್ಣವಾಗಿ ಭಸ್ಮವಾಗಿವೆ ಎಂದು ತಿಳಿದುಬಂದಿದೆ.

ನೆಹರೂ ನಗರದ ನಿವಾಸಿ ಆದಿಲ್ ಎಂಬುವವರು ಫೆಬ್ರವರಿ 16ರ ರಾತ್ರಿ ಕೆಲಸ ಮುಗಿಸಿ ಮನೆಗೆ ಮರಳಿದ್ದರು. ಅವರು ತಮ್ಮ ಹಾಗೂ ತಮ್ಮ ಸಹೋದರರಿಗೆ ಸೇರಿದ ಬಜಾಜ್ ಡಿಸ್ಕವರ್, ಪಲ್ಸರ್ ಮತ್ತು ಪ್ಲಾಟಿನಾ ಬೈಕ್‌ಗಳನ್ನು ಕಾಂಪೌಂಡ್ ಒಳಗೆ ನಿಲ್ಲಿಸಿ ಮಲಗಿದ್ದರು. ಆದರೆ, ಫೆಬ್ರವರಿ 17ರ ಬೆಳಗಿನ ಜಾವ ಸುಮಾರು 2 ಗಂಟೆಯ ಹೊತ್ತಿಗೆ ಸ್ಫೋಟದ ಶಬ್ದ ಕೇಳಿ ಮನೆಯವರು ಹೊರಬಂದು ನೋಡಿದಾಗ ಬೈಕ್‌ಗಳು ಬೆಂಕಿಯ ಜ್ವಾಲೆಯಲ್ಲಿ ಹೊತ್ತಿ ಉರಿಯುತ್ತಿದ್ದವು. 

ತಕ್ಷಣವೇ ಮನೆಯವರು ಮತ್ತು ನೆರೆಹೊರೆಯವರು ನೀರು ಹಾಕಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಸಹ, ಅಷ್ಟರಲ್ಲಾಗಲೇ ಮೂರೂ ಬೈಕ್‌ಗಳು ಸುಟ್ಟು ಕರಕಲಾಗಿದ್ದವು. ಈ ಕುರಿತು ಭದ್ರಾವತಿಯ ಹಳೆನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Bhadravathi Arson Anandapura Shivamogga Shivaratri Rules Swathantryada Ota Court Orders Walk-in Interview Shivamogga Court KFD Fatality Shivamogga Round up

Bhadravathi Arson Three Bikes Set on Fire

shivamogga car decor sun control house
shivamogga car decor sun control house