Daily Astrology Kannada Panchanga Rasi Phala ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ ಫಾಲ್ಗುಣ ಮಾಸದ ಶುಕ್ಲ ಪಕ್ಷದ ಬಿದಿಗೆಯ ದಿನ ಇವತ್ತು. ರಾಹುಕಾಲ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದ್ದು, ಅಮೃತ ಘಳಿಗೆ ಮಧ್ಯಾಹ್ನ 1.54 ರಿಂದ 3.27 ರವರೆಗೆ ಇರಲಿದೆ.. ಇಂದಿನ ನಕ್ಷತ್ರ ಪೂರ್ವಾಭಾಧ್ರ. ರಾತ್ರಿ 9.58ರ ನಂತರ ಉತ್ತರಾಭಾಧ್ರ ನಕ್ಷತ್ರ ಆರಂಭವಾಗಲಿದೆ.
ಸಾಗರ: ಸಾಲಬಾಧೆ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ
ಸಂಪೂರ್ಣ ರಾಶಿಫಲ/Daily Astrology Kannada Panchanga Rasi Phala
ಮೇಷ / ಹಳೆಯ ಸ್ನೇಹಿತರ ಭೇಟಿ, ಗಣ್ಯ ವ್ಯಕ್ತಿಗಳ ಒಡನಾಟ. ಶುಭ ಕಾರ್ಯಗಳಿಗೆ ಆಹ್ವಾನ, ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು.ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರದಲ್ಲಿರುವವರಿಗೆ ಹೆಚ್ಚಿನ ಅನುಕೂಲಕರ ವಾತಾವರಣ ಇರಲಿದೆ.
ವೃಷಭ / ಸಮಾಜದಲ್ಲಿ ವಿಶೇಷ ಸ್ಥಾನಮಾನ, ಉದ್ಯೋಗಕ್ಕಾಗಿ ಪ್ರಯತ್ನ, ದಿನದ ಶ್ರಮ ಅನುಕೂಲಕ್ಕೆ ಬರಲಿದೆ. ಹೊಸ ಅವಕಾಶ, ಸಂದರ್ಶನಗಳಿಗೆ ಬುಲಾವ್ ಬರಲಿದ್ದು, ಉದ್ಯೋಗ ಹಾಗೂ ವ್ಯಾಪಾರ ಯಾವುದೇ ಅಡೆತಡೆಯಿಲ್ಲದೆ ಸುಗಮವಾಗಿ ಸಾಗಲಿವೆ.
ಮಿಥುನ / ದೂರ ಪ್ರಯಾಣ. ಕೆಲಸಗಳಲ್ಲಿ ಕೆಲವು ಅಡೆತಡೆ ಎದುರಾಗಬಹುದು. ಅನಿರೀಕ್ಷಿತ ಖರ್ಚು, ದೈಹಿಕ ಹಾಗೂ ಮಾನಸಿಕ ಆಯಾಸ. ಸಂಬಂಧಿಕರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಾಧಾರಣ ದಿನ
ಕರ್ಕಾಟಕ / ಒತ್ತಡವನ್ನು ಎದುರಿಸಬೇಕಾಗುತ್ತದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಸಣ್ಣಪುಟ್ಟ ಕಿರಿಕಿರಿ. ಅಂದುಕೊಂಡ ಕೆಲಸಗಳಲ್ಲಿ ವಿಳಂಬ, ದೂರದ ಸಂಬಂಧಿಕರ ಭೇಟಿ. ಆಧ್ಯಾತ್ಮಿಕ ಕಾರ್ಯಗಳತ್ತ ಮನಸ್ಸು ವಾಲಲಿದೆ.
ಸಿಂಹ / ಪರಿಸ್ಥಿತಿಗಳು ಅತ್ಯಂತ ಅನುಕೂಲಕರವಾಗಿದೆ. ಸಂತೋಷದ ದಿನ. ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ,ವಿವಾದ ಬಗೆಹರಿಯಲಿವೆ. ಉದ್ಯೋಗ ಮತ್ತು ವ್ಯಾಪಾರದದಲ್ಲಿ ಅತ್ಯುತ್ತಮವಾದ ದಿನ

ಕನ್ಯಾ / ವ್ಯಾಪಾರ ವಹಿವಾಟು ಇಂದು ಚೇತರಿಕೆ ಕಾಣಲಿದೆ. ಉದ್ಯೋಗಿಗಳಿಗೆ ಕೆಲಸದ ಮೇಲಿನ ಒತ್ತಡ ಕಡಿಮೆಯಾಗಲಿದೆ. ಹಿತೈಷಿಗಳ ಸಲಹೆ ಸ್ವೀಕರಿಸಿ, ಉತ್ತಮ ಮನ್ನಣೆ ಸಿಗಲಿದೆ.
ತುಲಾ / ದೈನಂದಿನ ಕೆಲಸಗಳು ಕೊಂಚ ನಿಧಾನಗತಿಯಲ್ಲಿ ಸಾಗಲಿವೆ. ದೇವಸ್ಥಾನಗಳಿಗೆ ಭೇಟಿ. ಕುಟುಂಬದಲ್ಲಿ ಸಣ್ಣಪುಟ್ಟ ಗೊಂದಲ ಉಂಟಾಗಬಹುದು. ವ್ಯಾಪಾರದಲ್ಲಿ ನಿರಾಸೆ ಮತ್ತು ಉದ್ಯೋಗದಲ್ಲಿ ಒತ್ತಡ, ದೂರದ ಊರುಗಳಿಗೆ ಪ್ರಯಾಣ
ವೃಶ್ಚಿಕ/ ಕುಟುಂಬ ಸದಸ್ಯರೊಂದಿಗೆ ವಾದ ವಿವಾದ. ಅನಿರೀಕ್ಷಿತ ವೆಚ್ಚ, ಉದ್ಯೋಗದಲ್ಲಿ ಹೊಸ ಜವಾಬ್ದಾರಿ. ವ್ಯಾಪಾರಸ್ಥರಿಗೆ ಸಾಧಾರಣ ದಿನ , ಅಂದುಕೊಂಡ ಕೆಲಸ ಕಷ್ಟಪಟ್ಟು ಮಾಡಬೇಕಾದೀತು.
Daily Astrology Kannada Panchanga Rasi Phala
ಧನುಸ್ಸು / ಕೈಗೊಂಡ ಕಾರ್ಯಗಳು ಯಾವುದೇ ವಿಘ್ನವಿಲ್ಲದೆ ಪೂರ್ಣಗೊಳ್ಳಲಿವೆ. ಸಮಾಜದಲ್ಲಿ ಗೌರವ, ಪ್ರಮುಖ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಶುಭ ಕಾರ್ಯ, ಹೊಸ ವಾಹನ ಖರೀದಿ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಉತ್ತಮ ಲಾಭ ಸಿಗಲಿದೆ.
ಮಕರ / ಪ್ರಯತ್ನ ಸಾಗಲಿವೆ. ಖರ್ಚು ವೆಚ್ಚ ಮಿತಿ ಮೀರುವ ಸಾಧ್ಯತೆ ಇದ್ದು, ಅತಿಯಾದ ಶ್ರಮ. ಸಂಬಂಧಿಕರೊಂದಿಗೆ ವಾಗ್ವಾದ. ಆದಾಯಕ್ಕಿಂತ ಖರ್ಚುಜಾಸ್ತಿ, ಉದ್ಯೋಗ ಮತ್ತು ವ್ಯಾಪಾರ ವಹಿವಾಟು ಸಾಮಾನ್ಯ
ಕುಂಭ / ಹೊಸ ಉದ್ಯೋಗಾವಕಾಶ. ಹೊಸ ವ್ಯಕ್ತಿಗಳ ಪರಿಚಯ, ಕಾರ್ಯಕ್ರಮಗಳಿಗೆ ಆಹ್ವಾನ ಸಿಗಲಿದೆ. ಆಸ್ತಿ ಪಾಸ್ತಿಗೆ ಸಂಬಂಧಿಸಿದ ವಿವಾದ ಇತ್ಯರ್ಥವಾಗಲಿವೆ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಈ ದಿನ ಸಾಮಾನ್ಯ ಗತಿಯಲ್ಲಿ ಸಾಗಲಿವೆ.
ಮೀನ / ದೈನಂದಿನ ಕೆಲಸ ಸುಲಭವಾಗಿ ಮುಂದುವರೆಯುವುದಿಲ್ಲ. ಉದ್ಯೋಗಸ್ಥರಿಗೆ ಕೆಲಸದ ಒತ್ತಡ. ಅತಿಯಾದ ಆಯಾಸ,ಹೆಚ್ಚು ಶ್ರಮವಹಿಸಿ ಕೆಲಸ ಮಾಡಬೇಕಾದ ಅನಿವಾರ್ಯತೆ

ಶಿವಮೊಗ್ಗ ವಿಮಾನ ನಿಲ್ದಾಣ ನೈಟ್ ಲ್ಯಾಂಡಿಂಗ್ ವಿಚಾರವಾಗಿ ಹೊಸ ಅಪ್ಡೇಟ್: ನಂಜಯ್ಯನ ಮಠ ಹೇಳಿದ್ದೇನು
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
