ಶಿವಮೊಗ್ಗ : Sslc ಕಂಪ್ಲೀಟ್​ ಆಗಿದ್ಯಾ, ಉದ್ಯೋಗ ಹುಡುಕ್ತಿದ್ದೀರಾ, ಹಾಗಾದ್ರೆ ಸುದ್ದಿ ಓದಿ 

This Article Written by / Prathapa thirthahalli / ಫೆಬ್ರವರಿ 18, 2026

Job Fair in Shivamogga Job Fair 2026 Post Office Recruitment ಶಿವಮೊಗ್ಗ ಅಂಚೆ ಇಲಾಖೆಯಲ್ಲಿ 57 ಹುದ್ದೆಗಳ ಭರ್ತಿShimoga Home Guards Recruitment 2026 RRB Group D RecruitmentRRB Group D RecruitmentAlvas Udyoga Mela ಶಿಕಾರಿಪುರದಲ್ಲಿ ಫೆ.20, 21ಕ್ಕೆ ಆಳ್ವಾಸ್​ ಬೃಹತ್ ಉದ್ಯೋಗ ಮೇಳ 75 ಕ್ಕೂ ಹೆಚ್ಚು ಕಂಪನಿ ಭಾಗಿ Alvas Udyoga Mela in Shikaripura on Feb 20, 21: Alvas Foundation & Vivekananda Institution

ಶಿವಮೊಗ್ಗ: ಜಿಲ್ಲೆಯ ನಿರುದ್ಯೋಗಿ ಯುವಜನತೆಗೆ ಖಾಸಗಿ ವಲಯದ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಉತ್ತಮ ಅವಕಾಶವೊಂದು ಒದಗಿ ಬಂದಿದೆ. ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ವತಿಯಿಂದ ಇದೇ ಫೆಬ್ರವರಿ 21 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಸಾಗರ ರಸ್ತೆಯಲ್ಲಿರುವ ಉದ್ಯೋಗ ವಿನಿಮಯ ಕಚೇರಿ ಆವರಣದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. 

ಶಿವಮೊಗ್ಗ ವಿಮಾನ ನಿಲ್ದಾಣ ನೈಟ್ ಲ್ಯಾಂಡಿಂಗ್ ವಿಚಾರವಾಗಿ ಹೊಸ ಅಪ್ಡೇಟ್​: ನಂಜಯ್ಯನ ಮಠ ಹೇಳಿದ್ದೇನು

Job Fair 2026 ಈ ಮೇಳದಲ್ಲಿ ವಿವಿಧ ಪ್ರತಿಷ್ಠಿತ ಕಂಪನಿಗಳು ಪಾಲ್ಗೊಳ್ಳಲಿದ್ದು, ನೇರ ಸಂದರ್ಶನ ಪ್ರಕ್ರಿಯೆಯ ಮೂಲಕ ಅರ್ಹ ಅಭ್ಯರ್ಥಿಗಳನ್ನು ತಕ್ಷಣವೇ ಆಯ್ಕೆ ಮಾಡಿಕೊಳ್ಳಲಿವೆ .

ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮೋ ಸೇರಿದಂತೆ ಯಾವುದೇ ಪದವಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. 18 ರಿಂದ 35 ವರ್ಷದ ವಯೋಮಿತಿಯೊಳಗಿನ ಯುವಕ-ಯುವತಿಯರು ತಮ್ಮ ಇತ್ತೀಚಿನ ಬಯೋಡೆಟಾ ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು. ಈ ಮೇಳಕ್ಕೆ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೋರಲಾಗಿದೆ 
ನೇಮಕಾತಿ ಪ್ರಕ್ರಿಯೆಯ ಬಗ್ಗೆ ಹೆಚ್ಚಿನ ಮಾಹಿತಿ ಬಯಸುವವರುಶಿವಮೊಗ್ಗದ ಸಾಗರ ರಸ್ತೆಯ ಪಂಪನಗರದ 2ನೇ ಕ್ರಾಸ್‌ನಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಖುದ್ದಾಗಿ ಸಂಪರ್ಕಿಸಬಹುದು. ಅಥವಾ ಇಲಾಖೆಯ ಮೊಬೈಲ್ ಸಂಖ್ಯೆ 9901914601 ಗೆ ಕರೆ ಮಾಡಿ ವಿವರಗಳನ್ನು ಪಡೆಯಬಹುದಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳು ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ತಿಳಿಸಿದ್ದಾರೆ.

Job Fair 2026 Post Office Recruitment ಶಿವಮೊಗ್ಗ ಅಂಚೆ ಇಲಾಖೆಯಲ್ಲಿ 57 ಹುದ್ದೆಗಳ ಭರ್ತಿShimoga Home Guards Recruitment 2026 RRB Group D RecruitmentRRB Group D RecruitmentAlvas Udyoga Mela ಶಿಕಾರಿಪುರದಲ್ಲಿ ಫೆ.20, 21ಕ್ಕೆ ಆಳ್ವಾಸ್​ ಬೃಹತ್ ಉದ್ಯೋಗ ಮೇಳ 75 ಕ್ಕೂ ಹೆಚ್ಚು ಕಂಪನಿ ಭಾಗಿ Alvas Udyoga Mela in Shikaripura on Feb 20, 21: Alvas Foundation & Vivekananda Institution
Job Fair 2026 Post

Job Fair 2026 Direct Interview on Feb 21 

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Employment Exchange,Job Fair,SHIVAMOGGA,Udyoga Mela

ಮುಂದಿನ ಸುದ್ದಿ ಒದಿ