ಮಾಲೀಕನ ಸಾಲಕ್ಕೆ ಬಾಡಿಗೆದಾರರು ಬೀದಿಗೆ, ಏನಿದು ಸುದ್ದಿ 

This Article Written by / Prathapa thirthahalli / ಫೆಬ್ರವರಿ 18, 2026

Shivamogga Bommanakatte Home Eviction

ಶಿವಮೊಗ್ಗ: ಮನೆ ಮಾಲೀಕ ಮಾಡಿದ ಸಾಲದ ಸುಳಿಗೆ ಸಿಲುಕಿ ಅಮಾಯಕ ಬಾಡಿಗೆದಾರರು ಬೀದಿಗೆ ಬಿದ್ದಿರುವ ಘಟನೆ ನಗರದಬೊಮ್ಮನಕಟ್ಟೆ ಸಿ-ಬ್ಲಾಕ್ ಬಡಾವಣೆಯಲ್ಲಿ ನಡೆದಿದೆ. ಖಾಸಗಿ ಫೈನಾನ್ಸ್ ಸಂಸ್ಥೆಯೊಂದುಪೊಲೀಸರ ನೆರವಿನೊಂದಿಗೆ ಭೋಗ್ಯಕ್ಕೆ ಇದ್ದ ಮಹಿಳೆಯ ಮನೆಯ ಸಾಮಗ್ರಿಗಳನ್ನು ಏಕಾಏಕಿ ರಸ್ತೆಗೆ ಎಸೆಯುವ ಮೂಲಕ ಅಮಾನವೀಯವಾಗಿ ವರ್ತಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 

ಶಿವಮೊಗ್ಗ, ಅವೈಜ್ಞಾನಿಕ ಹಂಪ್​​ನಿಂದ ಭೀಕರ ಅಪಘಾತ, ಬೈಕ್​ ಸವಾರ ಸಾವು

Shivamogga ಘಟನೆ ವಿವರ

ಮಮತಾ ಎಂಬ ಮಹಿಳೆ ಕುಮಾರ್ ಎಂಬುವವರ ಮನೆಯನ್ನು 4.50 ಲಕ್ಷ ರೂಪಾಯಿಗಳಿಗೆ ಭೋಗ್ಯಕ್ಕೆ ಪಡೆದು ಮಗನೊಂದಿಗೆ ವಾಸವಾಗಿದ್ದರು. ಆದರೆ, ಮಾಲೀಕ  ಮನೆಯ ಮೇಲೆ ಖಾಸಗಿ ಫೈನಾನ್ಸ್‌ನಲ್ಲಿ ಭಾರಿ ಸಾಲ ಮಾಡಿದ್ದು, ಕಳೆದ ಮೂರು ತಿಂಗಳ ಕಂತುಗಳನ್ನು ಬಾಕಿ ಉಳಿಸಿಕೊಂಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಪೊಲೀಸರೊಂದಿಗೆ ಬಂದ ಫೈನಾನ್ಸ್ ಸಿಬ್ಬಂದಿ, ಬಾಡಿಗೆದಾರರ ಸ್ಥಿತಿಯನ್ನು ಲೆಕ್ಕಿಸದೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎನ್ನಲಾಗಿದೆ.

ಮಾಲೀಕ ತನಗೆ ಫೈನಾನ್ಸ್‌ನಿಂದ ನೋಟಿಸ್ ಬಂದಿದ್ದರೂ ಆ ವಿಷಯವನ್ನು ಭೋಗ್ಯಕ್ಕೆ ಇದ್ದ ಮಹಿಳೆಗೆ ತಿಳಿಸಿರಲಿಲ್ಲ. ಒಂದು ವೇಳೆ ಮುಂಚಿತವಾಗಿಯೇ ಮಾಹಿತಿ ನೀಡಿ ಹಣ ವಾಪಸ್ ನೀಡಿದ್ದರೆ ಅವರು ಮನೆ ಖಾಲಿ ಮಾಡುತ್ತಿದ್ದರು. ಆದರೆ, ಯಾವುದೂ ತಿಳಿಯದ ಮಮತಾ ಅವರು ಇಂದು ಏಕಾಏಕಿ ನಡೆದ ಈ ಘಟನೆಯಿಂದ ಕಂಗಾಲಾಗಿದ್ದಾರೆ. 

Shivamogga Bommanakatte Home Eviction
shivamogga car decor sun control house
shivamogga car decor sun control house

Shivamogga Bommanakatte Home Eviction

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Bommanakatte News,House Eviction,SHIVAMOGGA

ಮುಂದಿನ ಸುದ್ದಿ ಒದಿ