ನಿನ್ನೆ 12 ಲಕ್ಷ ಇವತ್ತು 11 ಲಕ್ಷ, ಆದಿತ್ಯ ಬಿರ್ಲಾ ಕ್ಯಾಪಿಟಲ್​ ಹೆಸರಿನಲ್ಲಿ ಸೈಬರ್​ ವಂಚಕರ ಖತರ್ನಾಕ್​ ಪ್ಲಾನ್

ಹಂಚಿಕೊಳ್ಳಿ
WhatsApp Facebook X Telegram
CEN police station ಶಿವಮೊಗ್ಗ
CEN police station ಶಿವಮೊಗ್ಗ

ಶಿವಮೊಗ್ಗ: ಜಿಲ್ಲೆಯಲ್ಲಿ ಪ್ರತಿಷ್ಠಿತ ಆದಿತ್ಯ ಬಿರ್ಲಾ ಕ್ಯಾಪಿಟಲ್​​ ಕಂಪನಿಯ ಹೆಸರನ್ನು ದುರುಪಯೋಗಪಡಿಸಿಕೊಂಡು ಕೇವಲ ಎರಡೇ ದಿನಗಳಲ್ಲಿ ಇಬ್ಬರು ವ್ಯಕ್ತಿಗಳಿಗೆ ಬರೋಬ್ಬರಿ 23 ಲಕ್ಷ ರೂಪಾಯಿ ವಂಚಿಸಲಾಗಿದೆ.  ಈ ಘಟನೆ ಹಿನ್ನೆಲೆ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿವೆ.

ವಿಶ್ವ ಎಐ ಸಮ್ಮೇಳನದಲ್ಲಿ ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿಗಳ ಕರಾಮತ್ತು!

Shivamogga Cyber ಪ್ರಕರಣ 1: ಜಾಹೀರಾತು ನಂಬಿ 12 ಲಕ್ಷ ಕಳೆದುಕೊಂಡ ವ್ಯಕ್ತಿ

ಮೊಬೈಲ್‌ನಲ್ಲಿ ಸ್ಟಾಕ್ ಟ್ರೇಡಿಂಗ್ ಮತ್ತು ಆದಿತ್ಯ ಬಿರ್ಲಾ ಕ್ಯಾಪಿಟಲ್ ಹೆಸರಿನಲ್ಲಿ ಹೂಡಿಕೆ ಮಾಡಿದರೆ ಭಾರಿ ಲಾಭಾಂಶ ಸಿಗಲಿದೆ ಎಂಬ ಜಾಹೀರಾತನ್ನು ನೋಡಿ ವ್ಯಕ್ತಿಯೊಬ್ಬರು ವಂಚಕರ ಬಲೆಗೆ ಬಿದ್ದಿದ್ದಾರೆ. ಜನವರಿ 26 ರಿಂದ ಫೆಬ್ರವರಿ 10 ರ ಅವಧಿಯಲ್ಲಿ ಹಂತ ಹಂತವಾಗಿ ಸುಮಾರು 12.15 ಲಕ್ಷ ರೂಪಾಯಿಗಳನ್ನು ವಂಚಕರು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ. ತಾವು ಹೂಡಿಕೆ ಮಾಡಿದ ಹಣದಲ್ಲಿ 10 ಲಕ್ಷ ರೂ. ಹಿಂಪಡೆಯಲು ಪ್ರಯತ್ನಿಸಿದಾಗ ತಾಂತ್ರಿಕ ದೋಷದ ನೆಪ ಹೇಳಿದ ವಂಚಕರು, ಹಣ ಬಿಡುಗಡೆಗೆ ಶೇ. 30 ರಷ್ಟು ಹ್ಯಾಂಡ್ಲಿಂಗ್ ಚಾರ್ಜ್ ಪಾವತಿಸುವಂತೆ ಬೇಡಿಕೆಯಿಟ್ಟಿದ್ದಾರೆ. ಇದರಿಂದ ಅನುಮಾನಗೊಂಡು ವಿಚಾರಿಸಿದಾಗ ವಂಚನೆ ಬೆಳಕಿಗೆ ಬಂದಿದೆ.

Shivamogga Cyber ಪ್ರಕರಣ 2: ಕುವೆಂಪು ನಗರದ ವ್ಯಕ್ತಿಗೆ 11.25 ಲಕ್ಷ ರೂಪಾಯಿ ಮರುಳು

ಇನ್ನೊಂದು ಪ್ರಕರಣದಲ್ಲಿ, ಕುವೆಂಪು ನಗರದ ನಿವಾಸಿಯೊಬ್ಬರು ‘LIQUIDE APP’ ನಲ್ಲಿ ಶೇರು ಮಾರುಕಟ್ಟೆಯ ಮಾಹಿತಿ ನೋಡುತ್ತಿದ್ದಾಗ ‘ABSL-Elite gathering’ ಹೆಸರಿನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಲಾಗಿದೆ. ಇದನ್ನು ಸತ್ಯವೆಂದು ಭಾವಿಸಿದ ದೂರುದಾರರು ದಿನಾಂಕ 29-01-2026 ರಿಂದ 11-02-2026 ರವರೆಗೆ ಒಟ್ಟು 11.25 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ. ನಂತರ ತಮ್ಮ ಖಾತೆಯಲ್ಲಿದ್ದ 8 ಲಕ್ಷ ರೂ. ವಿತ್ ಡ್ರಾ ಮಾಡಲು ಹೋದಾಗ ಸಾಧ್ಯವಾಗಿಲ್ಲ. ಕಂಪನಿಯವರನ್ನು ವಿಚಾರಿಸಿದಾಗ ಐಪಿಒ ಶೇರ್ ಅಲಾಟ್ ಆಗಿದೆ ಎಂದು ಹೇಳಿ ಮತ್ತೆ 9.34 ಲಕ್ಷ ರೂ. ಪಾವತಿಸುವಂತೆ ಒತ್ತಾಯಿಸಿದ್ದಾರೆ. ಆಗ ತಾವು ಮೋಸ ಹೋಗಿರುವುದು ತಿಳಿದು ಸಂತ್ರಸ್ತರು ಪೋಲೀಸರ ಮೊರೆ ಹೋಗಿದ್ದಾರೆ.

 Shivamogga CyberShimoga Cyber Fraud Man Loses 12 Lakhs Shimoga CEN Police Man Shows Private Parts Shimoga Investment Scamacebook Shimoga Businessman
 Shimoga Cyber Fraud

ವಿಶೇಷವೆಂದರೆ ಈ ಎರಡೂ ಕೃತ್ಯಕ್ಕೆ ಸೈಬರ್​ ವಂಚಕರು ಬಳಿಸಿಕೊಂಡಿದ್ದು, ಆದಿತ್ಯ ಬಿರ್ಲಾ ಕ್ಯಾಪಿಟಲ್​ ಹೆಸರನ್ನು. ಆದ್ದರಿಂದ ಸಾರ್ವಜನಿಕರು ಅಪರಿಚಿತ ಲಿಂಕ್‌ಗಳು ಹಾಗೂ ಅಧಿಕ ಲಾಭದ ಆಮಿಷವೊಡ್ಡುವ ಇಂತಹ ಆ್ಯಪ್‌ಗಳ ಬಗ್ಗೆ ಎಚ್ಚರದಿಂದಿರಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ. 

Shivamogga Cyber Fraud 23 Lakh Scammed

shivamogga car decor sun control house
shivamogga car decor sun control house
ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor