ವಿಶ್ವ ಎಐ ಸಮ್ಮೇಳನದಲ್ಲಿ ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿಗಳ ಕರಾಮತ್ತು!

ಹಂಚಿಕೊಳ್ಳಿ
WhatsApp Facebook X Telegram
ವಿಶ್ವ ಎಐ ಸಮ್ಮೇಳನದಲ್ಲಿ ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿಗಳ ಕರಾಮತ್ತು!

World AI Conference / ಮಲೆನಾಡು ಟುಡೆ ಸುದ್ದಿ /  ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಎಐArtificial Intelligence ಜಾಗತಿಕ ಸಮ್ಮೇಳನದಲ್ಲಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಇಬ್ಬರು ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ ಎಂಬುದು ಹೆಮ್ಮೆಯ ವಿಷಯ.

ಈ ಬಗ್ಗೆ ಇನ್ನಷ್ಟು ತಿಳಿಯುವುದಾಯ್ತು ಎಂದರೆ, ಎಐ  ತಂತ್ರಜ್ಞಾನ ಹಾಗೂ ಅದರ ಪರಿಣಾಮಗಳ ಕುರಿತು ಆಯೋಜಿಸಲಾಗಿರುವ ಪ್ರತಿಷ್ಠಿತ ವಿಶ್ವ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಶಿಕಾರಿಪುರ ಪಟ್ಟಣದ ಅಕ್ಷರ ವಸತಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಅಕ್ಷರ ವಸತಿ ಶಾಲೆಯಲ್ಲಿ ಸಿಐಎಸ್‌ಸಿಇ (CISCE) ಪಠ್ಯಕ್ರಮದ ಅಡಿಯಲ್ಲಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಜಿ. ಸಂಭ್ರಮ್ ಹಾಗೂ ಧ್ರುವ ಮಲ್ಲಾಡದ ಫೆಬ್ರವರಿ 20 ರವರೆಗೆ ನಡೆಯಲಿರುವ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.

shikaripura Students in World AI Conference ನವದೆಹಲಿಯಲ್ಲಿ ನಡೆಯುತ್ತಿರುವ ವಿಶ್ವ ಎಐ ಸಮ್ಮೇಳನದಲ್ಲಿ ಶಿಕಾರಿಪುರದ ಅಕ್ಷರ ವಸತಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಎಐ ಆ್ಯಪ್ ಕಾರ್ಯನಿರ್ವಹಣೆ ಕುರಿತು ಇವರು ವಿಷಯ ಮಂಡಿಸಲಿದ್ದಾರೆ.

ಅಷ್ಟೆ ಅಲ್ಲದೆ ಈ ಇಬ್ಬರು ವಿದ್ಯಾರ್ಥಿಗಳು ಎಐ ಆ್ಯಪ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ಅವುಗಳ ತಾಂತ್ರಿಕ ಹಿನ್ನೆಲೆ ಏನು ಎಂಬುದರ ಕುರಿತು ವಿಶೇಷವಾದ ಮಾದರಿಯೊಂದನ್ನು ಸ್ವತಃ ರೂಪಿಸಿದ್ದಾರೆ. ದೆಹಲಿಯ ಸಮ್ಮೇಳನದಲ್ಲಿ ಈ ಮಾದರಿಯನ್ನು ಪ್ರದರ್ಶಿಸುವುದರ ಜೊತೆಗೆ, ಕೃತಕ ಬುದ್ಧಿಮತ್ತೆಯ ಕಾರ್ಯವೈಖರಿಯ ಕುರಿತು ವಿಷಯ ಮಂಡನೆಯನ್ನೂ ಮಾಡಲಿದ್ದಾರೆ. ಇವರ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪೋಷಕರು ಹಾಗೂ ಸಹಪಾಠಿಗಳು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

 ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

shikaripura Students in World AI Conference ನವದೆಹಲಿಯಲ್ಲಿ ನಡೆಯುತ್ತಿರುವ ವಿಶ್ವ ಎಐ ಸಮ್ಮೇಳನದಲ್ಲಿ ಶಿಕಾರಿಪುರದ ಅಕ್ಷರ ವಸತಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಎಐ ಆ್ಯಪ್ ಕಾರ್ಯನಿರ್ವಹಣೆ ಕುರಿತು ಇವರು ವಿಷಯ ಮಂಡಿಸಲಿದ್ದಾರೆ.
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor