Shimoga Tagaru Kalaga 2026: Win 30kg Sheep

ಶಿವಮೊಗ್ಗ : ಫೆಬ್ರವರಿ 15ರಂದು ನಗರದ ಅಲ್ಲಮಪ್ರಭು ಮೈದಾನದಲ್ಲಿ ನಮ್ಮೂರ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿರುವ ರಾಷ್ಟ್ರ ಮಟ್ಟದ ಟಗರು ಕಾಳಗದಲ್ಲಿ ಸಮಿತಿಯು ವಿಶೇಷ ಲಕ್ಕಿ ಡ್ರಾ ಒಂದನ್ನು ಘೋಷಿಸಿದೆ.
ಈ ಕುರಿತು ನಮ್ಮೂರು ಬಳಗದ ಸಮಿತಿಯ ಪ್ರಮುಖರಾದ ನಾಗರಾಜ್ ಕಂಕಾರಿ ಅವರು ಮಾಹಿತಿ ನೀಡಿ ಈ ಟಗರು ಕಾಳಗದ ಹಿನ್ನೆಲೆಯಲ್ಲಿ ಪ್ರೇಕ್ಷಕರಿಗಾಗಿ ಕೇವಲ 100 ರೂಪಾಯಿ ಲಕ್ಕಿ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಈ ಟಿಕೆಟ್ ಖರೀದಿಸುವ ಮೂಲಕ ಸಾರ್ವಜನಿಕರು ಬಹುಮಾನ ಗೆಲ್ಲುವ ಅವಕಾಶ ಪಡೆಯಬಹುದಾಗಿದೆ. ಲಕ್ಕಿ ಡ್ರಾದಲ್ಲಿ ವಿಜೇತರಾದ ಮೂವರು ಅದೃಷ್ಟಶಾಲಿಗಳಿಗೆ ತಲಾ 30 ಕೆಜಿ ತೂಕದ ಮೂರು ಕುರಿಗಳನ್ನು ಬಹುಮಾನವಾಗಿ ನೀಡಲಾಗುವುದು ಎಂದು ತಿಳಿಸಿದರು.
Shimoga Tagaru Kalaga 2026 Win 30kg Sheep



