ನಂಜಪ್ಪ ಆಸ್ಪತ್ರೆಗೆ ಬಂತು ಚಿರತೆ ! ಭದ್ರಾನ ಆರೋಗ್ಯ ತಪಾಸಣೆಗೆ ಎಂಆರ್‌ಐ ಸ್ಕ್ಯಾನಿಂಗ್

ಹಂಚಿಕೊಳ್ಳಿ
WhatsApp Facebook X Telegram
Leopard MRI Scan at Nanjappa Hospital Shimoga
Leopard MRI Scan at Nanjappa Hospital Shimoga

ಶಿವಮೊಗ್ಗ : ನಗರದ ನಂಜಪ್ಪ ಆಸ್ಪತ್ರೆಗೆ ಚಿಕಿತ್ಸೆಗೆಂದು ಪ್ರತಿನಿತ್ಯ ನಾನಾ ರೀತಿಯ ರೋಗಿಗಳು ಬಂದು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಾರೆ. ಆದರೆ ವಿಶೇಷ ಎಂಬಂತೆ ಇದೇ ಮೊದಲ ಬಾರಿಗೆ  ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಅಧಿಕಾರಿಗಳು ಚಿರತೆಯೊಂದನ್ನು ತಂದು ನಂಜಪ್ಪ ಆಸ್ಪತ್ರೆಯಲ್ಲಿ ಎಂ ಆ ಐ ಸ್ಕ್ಯಾನಿಂಗ್​ ಮಾಡಿಸಿದ್ದಾರೆ. 

ಹೌದು ವಿಚಾರ ಏನೆಂದ್ರೆ ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಭದ್ರಾ ಎಂಬ ಹೆಸರಿನ  15 ವರ್ಷದ ಚಿರತೆಯೊಂದು  ಕಳೆದ 2 ದಿನಗಳಿಂದ ಅಸ್ವಸ್ಥಗೊಂಡಿತ್ತು,  ಮೊದಲ ದಿನ ಕುಂಟುತ್ತಾ ಓಡಾಡುತ್ತಿದ್ದ ಭದ್ರಾ ಚಿರತೆ ನಂತರ ಕಾಲುಗಳ ಸ್ವಾಧೀನ ಕಳೆದುಕೊಂಡು, ನಡೆಯಲು ಪರದಾಡುತ್ತಿತ್ತು. 

ಚಿರತೆಯ ಅನಾರೋಗ್ಯದ ಗಂಭೀರತೆಯನ್ನು ಅರಿತ ಅಧಿಕಾರಿಗಳು ಚಿರತೆಗೆ ಪ್ಯಾರಾಲಿಸಿಸ್​ ಆಗಿರಬಹುದೆಂದು ಭಾವಿಸಿ ಚಿರತೆಯನ್ನು ನಂಜಪ್ಪ ಆಸ್ಪತ್ರೆಗೆ ಕರೆದೊಯ್ದು ಸ್ಕ್ಯಾನಿಂಗ್​ ಮಾಡಿಸಿದ್ದಾರೆ. ನಂತರ ಸ್ಕ್ಯಾನಿಂಗ್​ ಮಾಡಿದ ವೈದ್ಯರು  ಚಿರತೆಗೆ ವಯೋಸಹಜ ಆರೋಗ್ಯ ಸಮಸ್ಯೆ ಉಂಟಾಗಿದ್ದು, ಯಾವುದೇ ಸೋಂಕು ತಗುಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಸ್ಕ್ಯಾನಿಂಗ್ ಬಳಿಕ ಹುಲಿ & ಸಿಂಹಧಾಮದಲ್ಲಿ ಚಿರತೆಗೆ ಚಿಕಿತ್ಸೆ ಮುಂದುವರೆದಿದೆ, 

Leopard MRI Scan at Nanjappa Hospital Shimoga

Leopard MRI Scan at Nanjappa Hospital Shimoga
Leopard MRI Scan at Nanjappa Hospital Shimoga
shivamogga car decor sun control house
shivamogga car decor sun control house
ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor