ಶಿವಮೊಗ್ಗ | ಸೋಗಾನೆ ಜೈಲಿಗೆ ಮೊಬೈಲ್, ಬೀಡಿ ಎಸೆದಿದ್ದ ಕಿಲಾಡಿಗಳು ಅಂದರ್ 

ಹಂಚಿಕೊಳ್ಳಿ
WhatsApp Facebook X Telegram
 Shivamogga Police Arrest Three for Throwing Mobile Phones and Bidis
 Shivamogga Police Arrest Three for Throwing Mobile Phones and Bidis

ಶಿವಮೊಗ್ಗ: ನಗರದ ಹೊರವಲಯದ ಸೋಗಾನೆ ಕೇಂದ್ರ ಕಾರಾಗೃಹದ ಆವರಣಕ್ಕೆ ಮೊಬೈಲ್ ಫೋನ್, ಸಿಗರೇಟ್ ಹಾಗೂ ಬೀಡಿಗಳನ್ನು ಅಕ್ರಮವಾಗಿ ಎಸೆದಿದ್ದ ಮೂವರು ಆರೋಪಿಗಳನ್ನು ತುಂಗಾನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಜೈಲಿನ ಭದ್ರತೆಗೆ ಸವಾಲು ಹಾಕಿದ್ದವರ ಹೆಡೆಮುರಿ ಕಟ್ಟಲಾಗಿದೆ ಇಮ್ರಾನ್ ಪಾಷಾ @ ಇಮ್ಮು (25) ಸೈಯ್ಯದ್ ಮಲ್ಲಿಕ್ @ ತಬ್ರೇಜ್ (22)  ಅಲ್ಲಾ ಬಕಶ್ @ ಪೊಟ್ಯಾಟೋ (20) ಬಂಧಿತ ಆರೋಪಿಗಳು

ಘಟನೆಯ ಹಿನ್ನೆಲೆ 

ಜನವರಿ 30ರಂದು ಜೈಲಿನ ಆವರಣದೊಳಗೆ ಕಪ್ಪು ಬಣ್ಣದ ಗಮ್ ಟೇಪ್‌ನಿಂದ ಪ್ಯಾಕ್ ಮಾಡಲಾಗಿದ್ದ ಮೊಬೈಲ್, ಬೀಡಿ ಮತ್ತು ಸಿಗರೇಟ್ ಬಂಡಲ್‌ಗಳನ್ನು ಯಾರೋ ವ್ಯಕ್ತಿಗಳು ಎಸೆದು ಹೋಗಿದ್ದರು. ಈ ಸಂಬಂಧ ಜೈಲಿನ ಮುಖ್ಯ ಅಧೀಕ್ಷಕ ಡಾ. ರಂಗನಾಥ್ ಅವರು ನೀಡಿದ ದೂರಿನ ಮೇರೆಗೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಿಖಿಲ್ ಬಿ. ಐಪಿಎಸ್ ಮತ್ತು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತುಂಗಾನಗರ ಇನ್ಸ್ಪೆಕ್ಟರ್ ಕೆ.ಟಿ. ಗುರುರಾಜ್ ಮತ್ತು ತಂಡ ತನಿಖೆ ನಡೆಸಿ, ಫೆಬ್ರವರಿ 2ರಂದು ಈ ಮೂವರು ಆರೋಪಿಗಳನ್ನು ವಶಪಡಿಸಿಕೊಳ್ಳವಲ್ಲಿ ಮಾಡುವಲ್ಲಿ ಯಶಸ್ವಿಯಾಗಿದೆ. 

 Shivamogga Police Arrest Three for Throwing Mobile Phones and Bidis

 Shivamogga Police Arrest Three for Throwing Mobile Phones and Bidis
 Shivamogga Police Arrest Three for Throwing Mobile Phones and Bidis
shivamogga car decor sun control house
shivamogga car decor sun control house
ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor