SHIVAMOGGA NEWS TODAY

ಹೊಸನಗರ: ನಾಳೆಯಿಂದ ಶ್ರೀ ಕ್ಷೇತ್ರ ಮಾರಿಕಾಂಬಾ ದೇವಿಯ ಅದ್ಧೂರಿ ಮಾರಿಜಾತ್ರೆ ಆರಂಭ

Prathapa thirthahalli ನವೀಕರಣ: 19 ಜನ 2026, 4:25 ಅಪರಾಹ್ನ ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಹೊಸನಗರ | ಮಲೆನಾಡಿನ ಇತಿಹಾಸ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾದ ಹೊಸನಗರದ ಮಾರಿಗುಡ್ಡದಲ್ಲಿರುವ ಶ್ರೀಕ್ಷೇತ್ರ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಜನವರಿ 20ರಿಂದ 28ರವರೆಗೆ ಒಂಬತ್ತು ದಿನಗಳ ಕಾಲ ಅದ್ಧೂರಿ ಮಾರಿಜಾತ್ರೆ ಜರುಗಲಿದೆ ಎಂದು ಜಾತ್ರಾ ಸಮಿತಿಯ ಅಧ್ಯಕ್ಷರಾದ ಹೆಚ್.ಎಲ್. ದತ್ತಾತ್ರೇಯ ಅವರು ಮಾಹಿತಿ ನೀಡಿದ್ದಾರೆ. 

ಮೊಬೈಲ್ ಕಳೆದುಹೋಗಿದೆಯೇ? ಈಗ ರಪ್ಪಾ ಸಿಗ್ತದೆ ಫೋನ್​! ಹೀಗಿದೆ ಶಿವಮೊಗ್ಗ ಪೊಲೀಸ್ ಕಾರ್ಯಾಚರಣೆ

ಮಾರಿಗುಡ್ಡದ ದೇವಸ್ಥಾನದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಜಾತ್ರೆಯು ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯೊಂದಿಗೆ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ ಎಂದು ತಿಳಿಸಿದರು.

ಜಾತ್ರೆಯ ಸಂಪ್ರದಾಯದಂತೆ ಜನವರಿ 20ರ ಮಂಗಳವಾರದಂದು ದೇವಿಯ ತಾಯಿಮನೆಯಾದ ಹಳೇ ಸಾಗರ ರಸ್ತೆಯ ದುರ್ಗಾ ದೇವಸ್ಥಾನದ ಆವರಣದಲ್ಲಿ ಉತ್ಸವಕ್ಕೆ ಚಾಲನೆ ಸಿಗಲಿದೆ. ನಂತರ ಬುಧವಾರದಿಂದ ಮಾರಿಯಮ್ಮನ ಗಂಡನ ಮನೆ ಎಂದೇ ಪ್ರಖ್ಯಾತಿ ಪಡೆದಿರುವ ಮಾರಿಗುಡ್ಡದ ಮಾರಿಗುಡಿ ದೇವಸ್ಥಾನದ ಆವರಣದಲ್ಲಿ ಪ್ರಧಾನ ಜಾತ್ರೆ ಆರಂಭವಾಗಲಿದ್ದು, ಸತತ ಎಂಟು ದಿನಗಳ ಕಾಲ ಭಕ್ತಾದಿಗಳಿಗೆ ದರ್ಶನ ಹಾಗೂ ವಿವಿಧ ಸೇವೆಗಳಿಗೆ ಅವಕಾಶವಿರಲಿದೆ.

Hosanagara Marikamba Jatra 2026 Grand Festival
Hosanagara Marikamba Jatra 2026 Grand Festival

ಜಾತ್ರೆಯ ಅಂಗವಾಗಿ ಜನವರಿ 22ರ ಗುರುವಾರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದ್ದು, ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಮಿತಿಯ ಅಧ್ಯಕ್ಷ ಹೆಚ್.ಎಲ್. ದತ್ತಾತ್ರೇಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ, ಪ್ರಮುಖರಾದ ಆರ್.ಎಂ. ಮಂಜುನಾಥ ಗೌಡ, ಕಲಗೋಡು ರತ್ನಾಕರ್ ಹಾಗೂ ನಗರ ಮಹಾದೇವಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ವೇದಿಕೆಯಲ್ಲಿ ಪದ್ಮ ಅನಾಥಾಶ್ರಮದ ವ್ಯವಸ್ಥಾಪಕ ಪ್ರಭಾಕರ್ ಹಾಗೂ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಾಧಕಿ ಕವನಶ್ರೀ ಅವರನ್ನು ಗೌರವಿಸಲಾಗುವುದು ಮತ್ತು ಮಂಜುನಾಥ್ ಜೆ. ಸಂಕೂರು ಅವರಿಂದ ಯೋಧ ಸ್ಮರಣೆ ನಡೆಯಲಿದೆ.

Hosanagara Marikamba Jatra 2026 Grand Festival
Hosanagara Marikamba Jatra 2026 Grand Festival
Hosanagara Marikamba Jatra 2026 Grand Festival
END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.