ಜ.25ರಂದು ಶಿವಮೊಗ್ಗದಲ್ಲಿ ಡಾಗ್​ ಶೋ, ಹೆಸರನ್ನು ನೊಂದಾಯಿಸಲು ಕೊನೆ ದಿನಾಂಕ ಯಾವಾಗ..? 

ಹಂಚಿಕೊಳ್ಳಿ
WhatsApp Facebook X Telegram
Shimoga
Shimoga

ಶಿವಮೊಗ್ಗ: ನಗರದ ಶ್ವಾನ ಪ್ರೇಮಿಗಳಿಗಾಗಿ ಪಶುಪಾಲನಾ ಇಲಾಖೆ ಹಾಗೂ ಶಿವಮೊಗ್ಗ ಕೆನಲ್ ಕ್ಲಬ್ ವತಿಯಿಂದ ಜನವರಿ 25ರಂದು ಸಾಕು ನಾಯಿಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ. ಸಾಗರ ರಸ್ತೆಯ ಎಪಿಎಂಸಿ ಮಾರುಕಟ್ಟೆ ಸಮೀಪವಿರುವ ಪಶು ಆಸ್ಪತ್ರೆ ಆವರಣದಲ್ಲಿ ಅಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಈ ಪ್ರದರ್ಶನ ನಡೆಯಲಿದೆ. 

ಮೊಬೈಲ್ ಕಳೆದುಹೋಗಿದೆಯೇ? ಈಗ ರಪ್ಪಾ ಸಿಗ್ತದೆ ಫೋನ್​! ಹೀಗಿದೆ ಶಿವಮೊಗ್ಗ ಪೊಲೀಸ್ ಕಾರ್ಯಾಚರಣೆ

Shimoga Dog Show 2026 ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಜನವರಿ 22ರ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಪ್ರತಿ ಶ್ವಾನಕ್ಕೆ 200 ರೂಪಾಯಿ ನೋಂದಣಿ ಶುಲ್ಕ ನಿಗದಿಪಡಿಸಲಾಗಿದ್ದು, 6 ತಿಂಗಳಿಗಿಂತ ಕಡಿಮೆ ವಯಸ್ಸಿನ ಮರಿಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ. 

ವಿಶೇಷವೆಂದರೆ, ಸ್ಪರ್ಧೆ ನಡೆಯುವ ಸ್ಥಳದಲ್ಲಿ ನೇರ ನೋಂದಣಿಗೆ ಅವಕಾಶವಿರುವುದಿಲ್ಲ. ಆದ್ದರಿಂದ ಆಸಕ್ತರು ಮೊದಲೇ ತಮ್ಮ ಶ್ವಾನಗಳ ಮಾಹಿತಿಯನ್ನು ನೀಡಿ ಹೆಸರು ದಾಖಲಿಸಬೇಕಿದೆ. ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ನೀಡಿರುವ ಮಾಹಿತಿಯಂತೆ, ವಿವಿಧ ತಳಿಗಳ ಶ್ವಾನಗಳು ಈ ಪ್ರದರ್ಶನದಲ್ಲಿ ತಮ್ಮ ಕೌಶಲ ಮೆರೆಯಲಿವೆ. 

ನೋಂದಣಿಗಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ ಡಾ. ಪ್ರಸನ್ನ ಕೆ.ಎಂ (9343464008), ಡಾ. ಶಿವರಾಜ್ (9448318878), ಡಾ. ಕೆಂದೇಶ್ (9880043904) ಅಥವಾ ರಾಜೇಂದ್ರ ಕಾಮತ್ (9902191333) ಅವರನ್ನು ಸಂಪರ್ಕಿಸಬಹುದಾಗಿದೆ.

Shimoga Dog Show 2026 Date Registration Details

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor