ಶಿವಮೊಗ್ಗ:  ಬಾಗಿಲು ಒಡೆದು ಒಳ ನುಗ್ಗಿದ ಅಕ್ಕ ಪಡೆ, ಉಳಿಯಿತು ವಿದ್ಯಾರ್ಥಿನಿ ಜೀವ 

ಹಂಚಿಕೊಳ್ಳಿ
WhatsApp Facebook X Telegram
Shimoga Akka Pade Rescue and Saves Student Life
Shimoga Akka Pade Rescue and Saves Student Life

ಶಿವಮೊಗ್ಗ: ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿ ಸದಾ ಸನ್ನದ್ಧವಾಗಿರುವ ಶಿವಮೊಗ್ಗದ ಅಕ್ಕ ಪಡೆ ಇಂದು ಕೇವಲ ದೌರ್ಜನ್ಯ ತಡೆಯುವುದಷ್ಟೇ ಅಲ್ಲದೆ, ಸಮಯಪ್ರಜ್ಞೆ ಮೆರೆದು ವಿದ್ಯಾರ್ಥಿನಿಯೊಬ್ಬರ  ಪ್ರಾಣ ಉಳಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. 

Shimoga Akka Pade Rescue and Saves Student Life
Shimoga Akka Pade Rescue and Saves Student Life

ಜ.25ರಂದು ಶಿವಮೊಗ್ಗದಲ್ಲಿ ಡಾಗ್​ ಶೋ, ಹೆಸರನ್ನು ನೊಂದಾಯಿಸಲು ಕೊನೆ ದಿನಾಂಕ ಯಾವಾಗ..? 

ಜಯನಗರದ ಮುಖ್ಯರಸ್ತೆಯ ಬಸವನಗುಡಿಯಲ್ಲಿರುವ ಸರ್ವೋದಯ ಕಾಲೇಜಿನಲ್ಲಿ ಇಂದು ಕಾಲೇಜಿನ ವಿಶ್ರಾಂತಿ ಕೊಠಡಿಗೆ ತೆರಳಿದ್ದ ವಿದ್ಯಾರ್ಥಿನಿಯೊಬ್ಬರಿಗೆ ತಲೆಸುತ್ತು ಬಂದಿದ್ದು, ಅವರು ಅಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಈ ವೇಳೆ ಕೊಠಡಿಯ ಬಾಗಿಲು ಒಳಗಿನಿಂದ ಲಾಕ್ ಆಗಿದ್ದರಿಂದ ಕಾಲೇಜು ಸಿಬ್ಬಂದಿ ಆತಂಕಕ್ಕೊಳಗಾಗಿದ್ದರು.

ಘಟನೆಯ ಮಾಹಿತಿ ಸಿಗುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಅಕ್ಕ ಪಡೆಯ ಸದಸ್ಯರು ತಕ್ಷಣವೇ ಸ್ಥಳಕ್ಕೆ ಧಾವಿಸಿದರು.ನಂತರ ವಿಶ್ರಾಂತಿ ಕೊಠಡಿಯ ಬಾಗಿಲನ್ನು ಮುರಿದು ಒಳಪ್ರವೇಶಿಸಿದ್ದಾರೆ.

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವಿದ್ಯಾರ್ಥಿಯನ್ನು ತಕ್ಷಣವೇ ಅಲ್ಲಿಂದ ಹೊರತಂದು, ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸುವ ಮೂಲಕ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಸಕಾಲದಲ್ಲಿ ಸ್ಪಂದಿಸಿದ ಅಕ್ಕ ಪಡೆಯ ಈ ಮಾನವೀಯ ಕಾರ್ಯಕ್ಕೆ ಕಾಲೇಜು ಮಂಡಳಿ ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.

Shimoga Akka Pade Rescue and Saves Student Life

Shimoga Akka Pade Rescue and Saves Student Life

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor