Today Horoscope: January 5 2026 ಶಿವಮೊಗ್ಗ : ವಿಶ್ವಾವಸು ನಾಮಸಂವತ್ಸರದ ದಕ್ಷಿಣಾಯನ ಹೇಮಂತ ಋತುವಿನ ಪುಷ್ಯ ಮಾಸದ ಕೃಷ್ಣ ಪಕ್ಷದ ಬಿದಿಗೆಯ ದಿನವಾದ ಇಂದು ಮಧ್ಯಾಹ್ನ 12.51 ನಂತರ ತದಿಗೆ ಆರಂಭವಾಗಲಿದೆ. ಸಂಜೆ 4.44 ರವರೆಗೆ ಪುಷ್ಯಮಿ ನಕ್ಷತ್ರವಿದ್ದು, ತದನಂತರ ಆಶ್ಲೇಷ ನಕ್ಷತ್ರ ಇರಲಿದೆ.ರಾಹುಕಾಲ ಬೆಳಿಗ್ಗೆ 7.30 ರಿಂದ 9.00 ರವರೆಗೆ ಹಾಗೂ ಯಮಗಂಡ ಕಾಲ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.00 ರವರೆಗೆ ಇರಲಿದೆ. ಅಮೃತ ಘಳಿಗೆ ಬೆಳಿಗ್ಗೆ 10.34 ರಿಂದ ಮಧ್ಯಾಹ್ನ 12.23 ರವರೆಗೆ ಇರಲಿದೆ.
ಇವತ್ತಿನ ರಾಶಿಫಲ
ಮೇಷ : ಕೈಗೆತ್ತಿಕೊಂಡ ಕೆಲಸ ಮಂದಗತಿಯಲ್ಲಿ ಸಾಗಲಿದೆ, ಕುಟುಂಬದ ಸದಸ್ಯರಿಂದ ಒತ್ತಡ. ಜವಾಬ್ದಾರಿ ಹೆಚ್ಚುವ ಸಾಧ್ಯತೆ ಇದ್ದು, ದೈವಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಉದ್ಯೋಗ ಮತ್ತು ವ್ಯಾಪಾರ ಈ ದಿನ ಸಾಧಾರಣವಾಗಿರಲಿದ್ದು, ಆರೋಗ್ಯದಲ್ಲಿ ಅಲ್ಪ ಏರುಪೇರಾಗಬಹುದು.
ವೃಷಭ : ಹೊಸ ವಿಷಯಗ ಕಲಿಯುವ ಅವಕಾಶ, ನಿರುದ್ಯೋಗಿಗಳಿಗೆ ಶುಭ ವಾರ್ತೆ. ಆಕಸ್ಮಿಕ ಧನಲಾಭ, ಹೊಸ ವ್ಯಕ್ತಿಗಳ ಪರಿಚಯ. ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರದಲ್ಲಿನ ಅಡೆತಡೆ ನಿವಾರಣೆಯಾಗಲಿವೆ.
ಮಿಥುನ : ಒಡಹುಟ್ಟಿದವರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ. ಅನಗತ್ಯ ಖರ್ಚು, ಕೆಲಸದಲ್ಲಿ ವಿಳಂಬ. ಅಸ್ವಸ್ಥತೆ, ಉದ್ಯೋಗ ಜೀವನದಲ್ಲಿ ಬದಲಾವಣೆ, ವ್ಯವಹಾರದಲ್ಲಿ ಸಾಮಾನ್ಯ ದಿನ

ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ: ಜನವರಿ 3 2026 ರ ದಿನ ಭವಿಷ್ಯ
Today Horoscope: January 5 2026
ಕರ್ಕಾಟಕ : ಶುಭ ಸಮಾಚಾರ, ಹೆಚ್ಚುವರಿ ಆದಾಯದ ಮೂಲ ಸೃಷ್ಟಿಯಾಗಲಿವೆ. ಪ್ರಮುಖ ನಿರ್ಧಾರ, ಉದ್ಯೋಗಿಗಳಿಗೆ ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ವ್ಯವಹಾರದಲ್ಲಿ ಧನಲಾಭ.
ಸಿಂಹ : ಸ್ನೇಹಿತರೊಂದಿಗೆ ಅಕಾರಣವಾಗಿ ವೈಮನಸ್ಸು, ಎಚ್ಚರಿಕೆ ಅಗತ್ಯ. ಕಲಿಕೆಯಲ್ಲಿ ಒತ್ತಡ ಹೆಚ್ಚಲಿದ್ದು, ಶ್ರಮಕ್ಕೆ ತಕ್ಕ ಫಲಿತಾಂಶ. ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಮಾನ್ಯ ದಿನ
ಕನ್ಯಾ : ಇಂದು ಹೊಸ ಸಂಪರ್ಕ, ದನಾಭಿವೃದ್ಧಿಯಾಗಲಿದೆ, ಆಕಸ್ಮಿಕವಾಗಿ ಹೊಸಬರ ಪರಿಚಯ, ಕುಟುಂಬದವರೊಂದಿಗೆ ಉತ್ತಮ ಬಾಂಧವ್ಯ, ಆಸ್ತಿ ವಿವಾದ ಇತ್ಯರ್ಥವಾಗುವ ಲಕ್ಷಣಗಳಿವೆ, ಉದ್ಯೋಗ ಮತ್ತು ವ್ಯವಹಾರದಲ್ಲಿ ವಿಶೇಷ ದಿನ
ತುಲಾ : ಉದ್ಯೋಗದಲ್ಲಿ ಹೊಸ ಅವಕಾಶ, ಹೊಸತೇನೋ ಹುಡುಕಿಕೊಂಡು ಬರಲಿದೆ, ಆಸ್ತಿ ಕಲಹ ಅಂತ್ಯವಾಗಲಿವೆ. ಅಧ್ಯಾತ್ಮದ ಕಡೆಗೆ ಒಲವು, ಉದ್ಯೋಗದಲ್ಲಿನ ಕಿರಿಕಿರಿಯಿಂದ ಮುಕ್ತಿ. ವ್ಯವಹಾರ ಚೆನ್ನಾಗಿ ನಡೆಯುವುದು

ಸೊರಬದ 16 ಶಾಲೆ, ಶಿವಮೊಗ್ಗ ಡಯಟ್!, ಇನ್ಫೋಸಿಸ್ ಮನಿ!, ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ
ವೃಶ್ಚಿಕ : ವ್ಯವಹಾರಗಳಲ್ಲಿ ಸವಾಲು ಎದುರಾಗಲಿದ್ದು, ಸಂಬಂಧಿಕರೊಂದಿಗೆ ಮನಸ್ತಾಪ ಉಂಟಾಗಬಹುದು. ಆರೋಗ್ಯದಲ್ಲಿ ವ್ಯತ್ಯಾಸ, ದೈವಿಕ ಕಾರ್ಯ ಮಾನಸಿಕ ಶಾಂತಿ ನೀಡಲಿದೆ. ಉದ್ಯೋಗ ಮತ್ತು ವ್ಯವಹಾರ ಎಂದಿನಂತೆ ನಡೆಯುವುದು.
Today Horoscope: January 5 2026
ಧನುಸ್ಸು : ವಿಘ್ನ ಎದುರಿಸಲಿದ್ದು, ಖರ್ಚು ವೆಚ್ಚಗಳ ಬಗ್ಗೆ ನಿಗಾ ಇರಿಸಿಒ. ಜವಾಬ್ದಾರಿಗಳು ಹೆಚ್ಚು ಮತ್ತು ಕೌಟುಂಬಿಕ ಕಲಹ ,ಮಾನಸಿಕ ಒತ್ತಡ , ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಮಾನ್ಯ ದಿನ
ಮಕರ : ಹೊಸ ಕೆಲಸ ಆರಂಭ, ಶುಭ ದಿನ, ಉತ್ತಮ ಸುದ್ದಿ ಬರಲಿವೆ. ಹಠಾತ್ ಧನಲಾಭ ಹಾಗೂ ಆಸ್ತಿ ಲಾಭ, ವೃತ್ತಿ ರಂಗದಲ್ಲಿನ ಸಮಸ್ಯೆ ತಿಳಿಯಾಗಲಿವೆ.
ಕುಂಭ : ಮುಕ್ತವಾಗಿ ಮಾತನಾಡಿ, ಕುಟುಂಬದಲ್ಲಿ ಸೌಹಾರ್ದಯುತ ವಾತಾವರಣ ಇರಲಿದೆ. ಉದ್ಯೋಗದ ಪ್ರಯತ್ ಯಶಸ್ವಿಯಾಗಲಿದ್ದು, ವಿದ್ಯಾರ್ಥಿಗಳಿಗೆ ಅನುಕೂಲಕರ ಫಲಿತಾಂಶ ಸಿಗಲಿವೆ.
ಮೀನ : ಅಡೆತಡೆಗಳು ಎದುರಾಗುವ ಸಾಧ್ಯತೆ ಇದ್ದು, ಆಸ್ತಿ ಮತ್ತು ಸಂಬಂಧಿಕರ ವಿಷಯದಲ್ಲಿ ಜಾಗರೂಕತೆ ಇರಲಿ. ದೈಹಿಕ ಬಳಲಿಕೆ ಉಂಟಾಗಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿಂದ ಶ್ರಮವೇ ಜಾಸ್ತಿ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.

ಇಂದಿನ ರಾಶಿ ಭವಿಷ್ಯ: ಜನವರಿ 5 2026 ದಿನ ಭವಿಷ್ಯ ಮತ್ತು ಪಂಚಾಂಗ, Today Horoscope: January 5 2026 Daily Astrology and Panchangam
