CM Reply to Belur Gopalakrishna ಡಿಸೆಂಬರ್,02, 2025 : ಮಲೆನಾಡು ಟುಡೆ ಸುದ್ದಿ : ಇವತ್ತು ಡಿಸಿಎಂ ಡಿಕೆ ಶಿವಕುಮಾರ್ ರವರ ಮನೆಯಲ್ಲಿ ಸಿಎಂ ಸಿದ್ದರಾಮಯ್ಯರವರು ನಾಟಿ ಕೋಳಿ ಸಾರು, ಇಡ್ಲಿ ತಿನ್ನುವ ಉಪಹಾರ ಸಭೆ ಸಾಕಷ್ಟು ಕುತೂಹಲ ಕೆರಳಿಸಿತ್ತು. ಆದರೆ ಈ ಸಭೆಯಲ್ಲಿ ಹೀರೋ ಆಗಿದ್ದು ಮಾತ್ರ ನಮ್ಮ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣರವರು. ಇತ್ತೀಚೆಗಷ್ಟೆ ಮಿನಿಸ್ಟರ್ ಗಿರಿ ಕೇಳಿ ಕೇಳಿ ಸಾಕಾಗಿದೆ ಅಂತಾ ಬೇಸರ ಮಾಡಿಕೊಂಡಿದ್ದ ಅವರನ್ನ ಇವತ್ತು ಮೀಡಿಯಾದವರು ಎಳೆದು ಎಳೆದು ಇಂಟರ್ ವ್ಯೂ ಮಾಡಿದ್ರು. ಇದಕ್ಕೆ ಕಾರಣ ಸಿಎಂ ಸಿದ್ದರಾಮಯ್ಯ. ಡಿಕೆ ಶಿವಕುಮಾರ್ ಮನೆಯಿಂದ ಹೊರಬಂದ ಸಿಎಂರನ್ನ ಬೀಳ್ಗೊಡಲು ಅಂತಾ ಬಂದ ಬೇಳೂರು ಗೋಪಾಲಕೃಷ್ಣರು ಸಿಎಂರನ್ನ ಮಾತಿಗೆ ಎಳೆದರು. ಅಷ್ಟೆ ಸಿಎಂ ಸಿದ್ದರಾಮಯ್ಯ ಹೇಳಿದ ಮಾತು ಬ್ರೇಕಿಂಗ್ ನ್ಯೂಸ್ ಆಗೋಯ್ತು. ದೂರದಿಂದಲೆ ಕ್ಯಾಮರಾ ಮೈಕ್ ರೆಕಾರ್ಡ್ ಮಾಡಿದ ಈ ಸಂಭಾಷಣೆಯನ್ನು ಟಿವಿ ಮೀಡಿಯಾಗಳು ಸಿಕ್ಕಾಪಟ್ಟೆ ಸಿಕ್ಕ ಸಿಕ್ಕ ಆಯಾಮಗಳಲ್ಲಿ ವಿಶ್ಲೇಷಣೆ ಮಾಡ್ತಿವೆ.

ರಾಜಕೀಯ ನಮ್ಮಪ್ಪನ ಆಸ್ತಿಯಲ್ಲ, ಏನ್ ಆಗುತ್ತೋ ಆಗಲಿ
ನಮ್ಮ ಸಾಗರದ ಹಾಲಿ ಮಾಜಿ ಇಬ್ಬರು ಸಹ ಮಾತಲ್ಲಿ ಸ್ವಲ್ಪ ಜಾಸ್ತಿ ಜೋರು ಅನ್ನುದರಲ್ಲಿ ಎರಡು ಮಾತಿಲ್ಲ. ಇನ್ನೂ ಹಾಲಿ ಶಾಸಕರು ಬಂಗಾರಪ್ಪರ ಶಿಷ್ಯರು ಬೇರೆ. ಹಾಗಾಗಿ ಅವರದ್ದೆ ಗತ್ತು, ಗಮ್ಮತ್ತು ಎರಡು ಜಾಸ್ತಿ. ಯಾರನ್ನ ಬೇಕಾದ್ರೂ ಮಾತನಾಡಿಸಿ ಬನ್ನಿ ಅಂದರೂ, ಸೈ ಅಂತಾ ಮಾತನಾಡಿ ಬಂದು ಬಿಡ್ತಾರೆ. ಇವತ್ತು ಸಹ ಗಂಭೀರವಾಗಿದ್ದ ಸಿಎಂ ಜೊತೆಗೆ ನೆಗಿಯಾಡ್ತಾನೆ ಮಾತ್ ತೆಗೆದ ಶಾಸಕ ಗೋಪಾಲಕೃಷ್ಣ, ನಾಟಿ ಕೋಳಿ ಸಾರ್ ಹೇಗಿತ್ತು ಸಾರ್? ಅಂದ್ರು. ಸಿಎಂ ಸಿದ್ದರಾಮಯ್ಯರ ತಿರುಗಿ ನೋಡುತ್ತಲೇ ಬೇಳೂರು ಗೋಪಾಲಕೃಷ್ಣರವರು, ತಮ್ಮ ಮಾತನ್ನ ರಾಜಕೀಯಕ್ಕೆ ಎಳೆದುಕೊಂಡು ಬಿಟ್ಟರು. ಅವರೇನು ಕೇಳಿದ್ರು ಅಂತಾ ಕೇಳಿಸಿಲ್ಲ. ಆದರೆ, ರಾಜಕಾರಣದ ಪ್ರಶ್ನೆಗೆ ಸಿದ್ದರಾಮಯ್ಯನವರ ಉತ್ತರ ಮಾತ್ರ ಸಂಪೂರ್ಣ ಗಂಭೀರವಾಗಿತ್ತಷ್ಟೆ ಅಲ್ಲದೆ ಇವತ್ತಿನ ವಿಷಯವಸ್ತುವಾಗಿತ್ತು. ರಾಜಕೀಯ ಶಾಶ್ವತವಲ್ಲ ಗೋಪಾಲಕೃಷ್ಣ. ನಾನು ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳುವುದಿಲ್ಲ. ರಾಜಕೀಯವು ನಮ್ಮಪ್ಪನ ಆಸ್ತಿಯೇನಲ್ಲ. ಮುಂದೆ ಏನೇ ಆದರೂ ಚಿಂತೆ ಇಲ್ಲ ಅಂತಾ ಸಿದ್ದರಾಮಯ್ಯರು ಹೇಳುತ್ತಿದ್ದಾಗೆ, ಬೇಳೂರು ಗೋಪಾಲಕೃಷ್ಣರು ನಿಮ್ಮ ಅನುಭವಕ್ಕೊಂದು ಸಲಾಂ ಎಂಬಂತೆ ಕೈ ಮುಗಿದರು. ಅಷ್ಟರಲ್ಲಿ ಮೀಡಿಯಾ ಕ್ಯಾಮೆರಾಗಳು ಜಸ್ಟ್ ಮಾತ್ ಮಾತನ್ನ ಸ್ಪಷ್ಟವಾಗಿ ರೆಕಾರ್ಡ್ ಮಾಡಿಕೊಂಡು ನ್ಯೂಸ್ ರೂಂಗೆ ಸೆಂಡ್ ಮಾಡಿದ್ದವು.

ಇಲ್ಲಿಂದ ಮುಂದೆ ಬರುತ್ತಲೇ ಸಿದ್ದರಾಮಯ್ಯರನ್ನ ಮತ್ತಾರೋ ಒಬ್ಬರು ಮಾತನಾಡಿಸಿ ಬೇಳೂರುರವರ ಬಗ್ಗೆ ಕೇಳಿದ್ರು. ಏನ್ ಸಾರ್, ಬೇಳೂರುರವರಿಗೆ ಸಲಹೆ ಕೊಡುತ್ತಿದ್ರಿ ಅಂತಾ ಕೇಳಿದ್ದಕ್ಕೆ ಸಿದ್ದರಾಮಯ್ಯ, ಇಲ್ಲಾ, ನಾನ್ ಹೇಳ್ತಿದ್ದೆ. ಬೇಳೂರು ಗೋಪಾಲಕೃಷ್ಣ ಬಹಳ ಕಲರ್ ಪುಲ್ ಆಗಿದ್ಯಲ್ಲಪ್ಪ ಅಂತಾ ಮಾತನಾಡ್ತಿದ್ದೆ ಎಂದರು. ಅದಕ್ಕೆ ಕ್ಯಾಮರಾ ಹಿಂದಿನ ಧ್ವನಿ ಹೌದು ಸರ್ ಹೊಸಬಟ್ಟೆ ಹೊಲಿಸ್ಕೊಂಡು ಬಿಟ್ಟವ್ರೆ, ಮಂತ್ರಿ ಆಗೋಕೆ ಅಂದು ಬಿಟ್ರು. ಇದಕ್ಕೆ ಬೇಳೂರು ಏಯ್ ಅಂತಾ ಗದರಿದ್ರೆ, ಸಿದ್ದರಾಮಯ್ಯರು ಯಾವುದೆ ರಿಯಾಕ್ಷನ್ ಇಲ್ಲದೆ ನೀನೇನು ಹಾಗೆ ಇದ್ದೀಯಾ! ನೀನು ಬಟ್ಟೆ ಹೊಲಿಸ್ಕಂಡಿಲ್ವಾ ಅಂತದ್ರು. ಸಿಎಂ ಮಾತಿಗೆ ತಮ್ಮ ಮಾತನ್ನ ಜೋಡಿಸಿದ ಬೇಳೂರು ಗೋಪಾಲಕೃಷ್ಣರು, ನಾನ್ ಯಾವಾಗಲೂ ಹೀಗೆನಲ್ವಾ ಇರೋದು ಅಂತಾ ಮುಂದಕ್ಕೆ ಹೋದರು.

ಒಟ್ಟಾರೆ, ಈ ಎರಡು ಘಟನೆಗಳು ಇವತ್ತು ಡಿಕೆ ಶಿವಕುಮಾರ್ ನಿವಾಸದ ಬಳಿಯಲ್ಲಿ ಬೇಳೂರು ಗೋಪಾಲಕೃಷ್ಣರನ್ನ ಮೀಡಿಯಾ ನ್ಯೂಸ್ ಟ್ರೆಂಡರ್ ಆಗಿ ಮಾಡಿತ್ತು. ಸಿಎಂ ಏನಂದ್ರು ಎನಂದ್ರು ಅಂತಾ ಒಂದೊಂದೆ ಮೀಡಿಯಾಗಳು ಬೇಳೂರು ಗೋಪಾಲಕೃಷ್ಣರನ್ನ ಕೇಳ್ತಿದ್ರೆ, ಇತ್ತ ಆರ್ ಎಂ ಮಂಜುನಾಥ್ ಗೌಡರು ಎನ್ರಿ ಸೂಪರ್ ಹೀರೋ ಆಗ್ಬಿಟ್ರಲ್ಲಾ ಎನ್ನುವಹಾಗೆ ಬೇಳೂರು ಗೋಪಾಲಕೃಷ್ಣರನ್ನ ನೋಡಿ ನಗುತ್ತಿದ್ರು.(CM Reply to Belur Gopalakrishna) ಇದೆಲ್ಲದರ ನಡುವೆ ಕೆಲವರ ಅಜ್ಞಾನವೋ ಏನೋ ಬೇಳೂರು ಅಂತಾ ಹೆಸರಿದ್ದ ಮಾತ್ರ, ಬೇಳೂರು ಗೋಪಾಲಕೃಷ್ಣರನ್ನು ಹಾಸನದ ಬೇಲೂರು ಶಾಸಕರನ್ನಾಗಿ ಮಾಡಿಬಿಟ್ಟಿದ್ರು. ಸುದ್ದಿಯಲ್ಲಿಯು ಹಾಗೆ ಹಾಕಿ, ತಮ್ಮ ದೌರ್ಬಾಗ್ಯದ ಬುದ್ದಿಯನ್ನು ಪ್ರದರ್ಶಿಸಿದ್ದರು.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ,
