Shivamogga Mar 20, 2024 B.Y. Raghavendra̧ ks Eshwarappa ಶಿವಮೊಗ್ಗ ನಗರದಲ್ಲಿರುವ ಗುಂಡಪ್ಪ ಶೆಡ್ನಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕಾರ್ಯಕರ್ತರ ಸಭೆಯನ್ನು ನಡೆಸಿದ್ದಾರೆ.
ಸಭೆಯಲ್ಲಿ ಮಾತನಾಡ್ತಾ ಸಿಗಂದೂರು ಚೌಡೇಶ್ವರಿ ಸನ್ನಿಧಿಯಲ್ಲಿ ಆದ ಹೂವಿನ ಪ್ರಸಾದದ ಬಗ್ಗೆ ಹೇಳಿದ ಅವರು, ತಮ್ಮ ಸ್ಪರ್ಧೆಯ ಬೆನ್ನಲ್ಲೆ ನಡೆಯುತ್ತಿರುವ ಬೆಳವಣಿಗೆಗಳನ್ನ ವಿವರಿಸಿದ್ದಾರೆ. ಇದರ ವಿವರ ಇಲ್ಲಿದೆ ಓದಿ : ಸಿಗಂದೂರು ನಲ್ಲಿ ವಿಶೇಷ ವಿಧ್ವಾಂಸರನ್ನು ಕರೆಸಿ ಗೌಪ್ಯ ಪೂಜೆ! ದೇವಿಯಿಂದ ಹೂವಿನ ಪ್ರಸಾದ? ಕೆಎಸ್ ಈಶ್ವರಪ್ಪ ಹೇಳಿದ್ದೇನು?
ತಮ್ಮ ಸ್ಪರ್ಧೆಯ ಹಿನ್ನೆಲೆಯಲ್ಲಿ ಹಲವು ಮಠಾಧೀಶರನ್ನು ಭೇಟಿಯಾಗಿದ್ದು ತಮಗೆ ಆಗಿರುವ ಅನ್ಯಾಯವನ್ನು ವಿವರಿಸಿದ್ದಾಗಿ ತಿಳಿಸಿದ ಅವರು, ಮಠಾದೀಶರುಗಳು ಸಹ ತಮಗೆ ಅನ್ಯಾಯವಾಗಿದೆ ಈ ನಿಟ್ಟಿನಲ್ಲಿ ನಿಮ್ಮ ಸ್ಪರ್ಧೆ ಒಳ್ಳೆಯದ್ದೆ ಭಗವಂತ ನಿಮಗೆ ಒಳ್ಳೆಯದು ಮಾಡುತ್ತಾನೆ ಎಂದಿದ್ದಾರೆ.
ಇನ್ನೂ ಇದೇ ವೇಳೇ ತಾವು ಹೋಗಿ ಬಂದ ಸ್ಥಳಗಳಲ್ಲಿ ಭೇಟಿಯಾದ ಮಠಾದೀಶರಿಗೆ ಹಾಗೂ ಧಾರ್ಮಿಕ ಮುಖಂಡರುಗಳಿಗೆ ಸಂಸದ ಬಿವೈ ರಾಘವೇಂದ್ರರವರು ಫೋನ್ ಕಾಲ್ ಮಾಡುತ್ತಿರುವ ವಿಚಾರವನ್ನ ತಿಳಿಸಿದ್ದಾರೆ.ರಾಘಣ್ಣ ಮುಖಂಡರುಗಳಿಗೆ ಕರೆ ಮಾಡಿ, ಇಷ್ಟು ವರ್ಷ ತಮಗೆ ಬೆಂಬಲಿಸಿದ್ದೀರಿ, ಈಗ ಏಕೆ ನಮ್ಮನ್ನು ಕೈ ಬಿಡುತ್ತಿದ್ದೀರಿ ಎಂದು ಕೇಳುತ್ತಿದ್ದಾರೆ. ಇದಕ್ಕೆ ಎಲ್ಲರೂ ಒಂದೊಂದು ಉತ್ತರ ಕೊಡುತ್ತಿದ್ದಾರೆ. ಈಶ್ವರಪ್ಪನವರು ಅನಂತಕುಮಾರ್ ಯಡಿಯೂಪ್ಪನವರ ಜೊತೆಗೆ ನಲವತ್ತು ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿದ್ದಾರೆ. ಅವರು ಪಕ್ಷದ ವಿರುದ್ದ ಎಂದು ಕೂಡ ನಡೆದುಕೊಂಡಿಲ್ಲ. ಅವರಿಗೆ ಅನ್ಯಾಯವಾಗಿದೆ ಎಂಬ ಉತ್ತರವನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು.