ಹರಿಗೆ ಬಳಿ ಯುವಕನ ಮೇಲೆ ಅಟ್ಯಾಕ್!‌ ನೆತ್ತಿಯಲ್ಲಿಯೇ ಸಿಲುಕಿಕೊಂಡ ಮಚ್ಚು! ಬೈಕ್‌ನಲ್ಲಿ ಆಸ್ಪತ್ರೆಗೆ ಶಿಫ್ಟ್‌ ಮಾಡಿದ ಸ್ಥಳೀಯರು!

ಹಂಚಿಕೊಳ್ಳಿ
WhatsApp Facebook X Telegram
ಹರಿಗೆ ಬಳಿ ಯುವಕನ ಮೇಲೆ ಅಟ್ಯಾಕ್!‌ ನೆತ್ತಿಯಲ್ಲಿಯೇ ಸಿಲುಕಿಕೊಂಡ ಮಚ್ಚು! ಬೈಕ್‌ನಲ್ಲಿ ಆಸ್ಪತ್ರೆಗೆ ಶಿಫ್ಟ್‌ ಮಾಡಿದ ಸ್ಥಳೀಯರು!

Shivamogga Mar 18, 2024  Young man attacked near Harige  ‌ಶಿವಮೊಗ್ಗ ಪೊಲೀಸ್‌ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಹರಿಗೆಯಲ್ಲಿ ಯುವಕನೊಬ್ಬನ ಮೇಲೆ ಅಟ್ಯಾಕ್‌ ನಡೆದಿದೆ. ಮಚ್ಚುಗಳಿಂದ ಯುವಕನೊಬ್ಬನ ಮೇಲೆ ದಾಳಿ ನಡೆಸಿದ್ದಾರೆ. ದಾಳಿಗೆ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಪೊಲೀಸರಿಂದಲೂ ಮಾಹಿತಿ ಲಭ್ಯವಾಗುತ್ತಿಲ್ಲ. ಪ್ರಕರಣ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಸ್ಟೇಷನ್‌ನಲ್ಲಿ ಕೇಸ್‌ ದಾಖಲಾಗಿದೆ. 

ಶಿವಮೊಗ್ಗ ಹರಿಗೆ ಬಸ್‌ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ನಿನ್ನೆ ರಾತ್ರಿ ನಡೆದ ಘಟನೆಯಲ್ಲಿ ಯುವಕನ ತಲೆಯಲ್ಲಿ ಮಚ್ಚು ಸಿಕ್ಕಿಕೊಂಡಿತ್ತು. ಕೆಲವು ಹೊತ್ತು ನೋಡಿದ ಸ್ಥಳೀಯರು ಆ ಬಳಿಕ ಆತನ ಜೀವ ಉಳಿಸುವುದಕ್ಕಾಗಿ ಬೈಕ್‌ನಲ್ಲಿಯೇ ಆತನನ್ನ ಕೂರಿಸಿಕೊಂಡು ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆಯಲ್ಲಿ  ಆತನ ತಲೆಯಿಂದ ಮಚ್ಚು ತೆಗೆದು,ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. 

ಸದ್ಯ ಯುವಕನ ಸ್ಥಿತಿ ಗಂಭೀರವಾಗಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಬಾರ್‌ ಬೆಂಡಿಂಗ್‌ ಕೆಲಸ ಮಾಡುವ ಪ್ರಶಾಂತ್‌ ಎಂದು ಗುರುತಿಸಲಾಗಿದೆ. ಆತನ ಮೇಲೆ ಏಕೆ ಹಲ್ಲೆಯಾಯ್ತು,? ಹಲ್ಲೆ ಮಾಡಿದವರು ಯಾರು? ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ. 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor