shivamogga Mar 13, 2024 Shimoga Lok Sabha constituency Congress candidate Geeta Shivraj Kumar ಶಿವಮೊಗ್ಗ ಲೋಕಸಭಾ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ಗೀತಾ ಶಿವರಾಜ್ ಕುಮಾರ್ ಬೆಂಗಳೂರಿನಲ್ಲಿ ಮಾತನಾಡಿದ್ದಾರೆ. ಈ ಸಲ ಗೆಲುವು ನನ್ನದೇ ಎಂದಿರುವ ಅವರು, ಶಿವಮೊಗ್ಗದಲ್ಲಿ ಈಗಾಗಲೇ ಚುನಾವಣಾ ಕಾರ್ಯಕ್ಕಾಗಿ ಮನೆ ಮಾಡಲಾಗಿದೆ. ಈ ಸಲ ಗೆದ್ದೆ ಗೆಲ್ಲುತ್ತೇನೆ ಎಂದಿದ್ದಾರೆ. ಒಂಬತ್ತು ವರ್ಷಗಳ ಹಿಂದ ಚುನಾವಣೆಗೆ ಕೇವಲ 17 ದಿನ ಕೆಲಸ ಮಾಡಿದ್ದೆ ಆಕಾರಣದಿಂದ ಸೋಲಾಯ್ತು ಎನಿಸುತ್ತದೆ. ಈ ಸನ್ನಿವೇಶ ಹಾಗಿಲ್ಲ ಓಡಾಟಕ್ಕೂ ಸಮಸ್ಯೆಯಿಲ್ಲ ಎಂದಿದ್ದಾರೆ.
ಇನ್ನೂ ಈ ಸಲ ಹೆಚ್ಚು ಸಮಯವನ್ನು ಶಿವಮೊಗ್ಗದಲ್ಲಿ ಕಳೆಯುತ್ತೇನೆ ಎಂದಿರುವ ಅವರು ನನ್ನ ಸಹೋದರ ನನ್ನ ಬೆಂಬಲಕ್ಕಿದ್ದಾರೆ. ಪತಿ ಶಿವರಾಜ್ ಕುಮಾರ್ ಕೂಡ ಬರುತ್ತಾರೆ ಎಂದಿದ್ದಾರೆ. ಶಿವರಾಜ್ ಕುಮಾರ್ ಕೂಡ ಈ ಬಗ್ಗೆ ಮಾತನಾಡಿದ್ದು ಪತ್ನಿಯ ಚುನಾವಣಾ ಸ್ಪರ್ಧೆ ಬಗ್ಗೆ ಮಾತನಾಡಿದ್ದು ನನ್ನ ಒತ್ತಾಯಕ್ಕೆ ಯಾರು ಸಹ ಪ್ರಚಾರಕ್ಕೆ ಬರುವುದು ಬೇಡ. ಇದು ಚುನಾವಣೆ ನಾನು ಗೆಲ್ಲುತ್ತೇನೆ ಎನ್ನುವ ಭರವಸೆ ಇರಬೇಕು. ನನ್ನ ಬೆಂಬಲ ಖಂಡಿತ ಇರುತ್ತದೆ ಎಂದಿದ್ದಾರೆ.