Maha Shivratri ಇಂದು ಮಹಾ ಶಿವರಾತ್ರಿ ಅರಕರೆ ರಾಮೇಶ್ವರ ದೇವಾಲಯ ಸೇರಿದಂತೆ ಯಾವೆಲ್ಲಾ ದೇವಸ್ಥಾನದಲ್ಲಿ ಏನೆಲ್ಲಾ ಪೂಜೆಗಳು ನಡೆಯಲಿವೆ? ವಿವರ ಇಲ್ಲಿದೆ

ಹಂಚಿಕೊಳ್ಳಿ
WhatsApp Facebook X Telegram

Shivamogga Mar 8, 2024 ಇವತ್ತು ಮಹಾ ಶಿವರಾತ್ರಿ , ಬೆಳಗ್ಗೆಯಿಂದಲೇ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ಭಕ್ತರು ದೇವಾಲಯಗಳಿಗೆ ತೆರಳಿ ಮಹಾಶಿವನ ದರ್ಶನ ಪಡೆಯುತ್ತಿದ್ದಾರೆ. ಇನ್ನೂ ಶಿವರಾತ್ರಿ ಹಿನ್ನೆಲೆಯಲ್ಲಿ ಶಿವಮೊಗ್ಗದ ಯಾವೆಲ್ಲಾ ದೇವಾಲಯಗಳಲ್ಲಿ ಏನೆಲ್ಲಾ ಕಾರ್ಯಕ್ರಮಗಳು ಇವೆ ಎಂಬುದನ್ನ ನೋಡುವುದಾದರೆ,  ನಗರದ ಪೌರಾಣಿಕ ಪ್ರಸಿದ್ದ ಹರಕೆರೆಯ ಶ್ರೀ ರಾಮೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ನಿಮಿತ್ತ  ವಿಶೇಷ ಪೂಜೆ, ರುದ್ರಾಭಿಷೇಕ, ರುದ್ರಹೋಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 5ರಿಂದ ದೇವರ ದರ್ಶನ ಆರಂಭವಾಗಿದ್ದು  ರಾತ್ರಿ ಹನ್ನೊಂದರವರೆಗೂ ವಿವಿಧ ಕಾರ್ಯಕ್ರಮಗಳು ನಡೆಯಲಿದೆ 

ಶ್ರೀ ಗುಡ್ಡದ ಮಲ್ಲೇಶ್ವರ ದೇವಸ್ಥಾನ

ಇನ್ನೂ ಊರಗಡೂರು ಶಿವದುರ್ಗದ ಶ್ರೀ ಗುಡ್ಡದ ಮಲ್ಲೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ನಿಮಿತ್ತ ವಿಶೇಷ ಪೂಜೆಗಳು ವಿಶಿಷ್ಟ ರೀತಿ ನಡೆಯಲಿವೆ.ಮಾ. ರುದ್ರಾಭಿಷೇಕ, ಪಂಚಾಮೃತ ಸಹಿತ ಬಿಲ್ವಾರ್ಚನೆ ಮತ್ತು ಮಹಾರುದ್ರ ಹೋಮ ಜರುಗಲಿದೆ. ಅಂದು ಸಂಜೆ 6 ಗಂಟೆಗೆ ಗುಡ್ಡೆಮರಡಿಯ ಗುಡ್ಡದ ಸುತ್ತ ಭಜನೆಯೊಂದಿಗೆ ಪರಿಕ್ರಮ ನಡೆಯಲಿದೆ. 

ಶರಾವತಿ ನಗರದ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ  ಜಲಾಭಿಷೇಕ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ,ಪೂಜೆ ಹಮ್ಮಿಕೊಳ್ಳಲಾಗಿದೆ. 

 

ಕೋಟೆ ಶ್ರೀ ಪಾರ್ವತಿ ಭೀಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ನಿಮಿತ್ತ  ಈ ಬಾರಿ ಪಂಚಲಿಂಗದರ್ಶನ ಅಲಂಕಾರ ಇರಲಿದೆ.  ಏಕದಶವಾರ ರುದ್ರಾಭಿಷೇಕ, ಜಾವಪೂಜೆ, ಶಿವಸಹಸ್ರನಾಮ, ಪಂಚಾಮೃತ ಪೂರ್ವಕ ರುದ್ರಾಭಿಷೇಕ ಮತ್ತು ಬಿಲ್ವಾರ್ಚನೆ ವಿಶೇಷ ಸೇವೆಗಳು ಜರುಗಲಿದೆ

ವಿನೋಬನಗರದ ಶಿವಾಲಯದಲ್ಲಿ  ರುದ್ರಾಭಿಷೇಕ ನಡೆಯಲಿದೆ. ಮಂಡ್ಲಿಯ ಶ್ರೀ ಗುರು ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ರಾತ್ರಿ 8 ಗಂಟೆಯಿಂದ ನಿರಂತರ ಮಹಾ ರುದ್ರಾಭಿಷೇಕ ಕ್ಷರಾಭಿಷೇಕ, ಜಲಾಭಿಷೇಕ ಪೂಜೆ,  ಅಷ್ಟೋತ್ತರ ನೈವೇದ್ಯ ರಾಜೋಪಚಾರ ಪೂಜಾ ಕಾರ್ಯ ನಡೆಯಲಿದೆ.

ಪ್ರಹ್ಲಾದ ದೀಕ್ಷಿತ್  ಗಾಯನ 

ಮಹಾ ಶಿವರಾತ್ರಿ ನಿಮಿತ್ತ ನಗರದ ಗೋಪಾಲಗೌಡ ಬಡಾವಣೆ ಕ್ರೀಡಾ ಸಂಕೀರ್ಣ ಎದುರಿನ ಎಫ್ ಬ್ಲಾಕ್ ಷಟಲ್ ಗ್ರೌಂಡ್​ನಲ್ಲಿ ಶಿವಮೊಗ್ಗ ಪ್ರಸಿದ್ದ ಗಾಯಕ ಪ್ರಹ್ಲಾದ ದೀಕ್ಷಿತ್ ಮತ್ತು ಶಿಷ್ಯವೃಂದದಿಂದ ಭಕ್ತಿಗೀತೆಗಳ ಕಾರ್ಯಕ್ರಮ ಆಯೋಜಿಸಲಾಗಿದೆ. 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor