SHIVAMOGGA Feb 29, 2024 ಕಾಂಗ್ರೆಸ್ನಲ್ಲಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಹಂಚಿಕೆ ಅರ್ಧವಾಗಿತ್ತು, ಇದೀಗ ಪೂರ್ತಿಯಾಗುವುದು ಗ್ಯಾರಂಟಿ ಯಾಗಿದೆ. ಈ ಮೊದಲು ಶಿವಮೊಗ್ಗ ಜಿಲ್ಲೆ ಭದ್ರಾವತಿ ಶಾಸಕ ಸಂಗಮೇಶ್ ಹಾಗೂ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣರಿಗೆ ಸ್ಥಾನ ಲಭಿಸಿತ್ತು
ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತಕ್ಕೆ ಶಿವಮೊಗ್ಗ ಜಿಲ್ಲೆ ಸಾಗರ-ಹೊಸನಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣರನ್ನ ನೇಮಿಸಲಾಗಿದೆ.ಇತ್ತ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಗೆ ನಿರೀಕ್ಷೆಯಂತೆಯೇ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮ/ಲ್ಯಾಂಡ್ ಆರ್ಮಿಯ ಅಧ್ಯಕ್ಷ ಸ್ಥಾನ ನೀಡಲಾಗಿತ್ತು.
ಇದಿಷ್ಟೆ ಅಲ್ಲದೆ ಶಿವಮೊಗ್ಗದಲ್ಲಿ ಕಾರ್ಯಕರ್ತರ ಕೋಟದಲ್ಲಿ ಜಿ.ಪಲ್ಲವಿ, ಹೆಚ್.ಎಸ್.ಸುಂದರೇಶ್ ಹಾಗೂ ಆರ್.ಎಂ.ಮಂಜುನಾಥ್ ಗೌಡರಿಗೆ ಸ್ಥಾನಮಾನ ಸಿಗಲಿದೆ ಎಂದು ಮಲೆನಾಡು ಟುಡೆ ಖಚಿತ ಮೂಲಗಳ ವರದಿಯನ್ನ ಪ್ರಸಾರ ಮಾಡಿತ್ತು. ಇದೀಗ ವರದಿ ನಿಜವಾಗಿದೆ.
ಈ ಸಂಬಂಧ 44 ಕಾಂಗ್ರೆಸ್ ಕಾರ್ಯಕರ್ತರಿಗೆ ಇಂದು ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಪ್ರಕಟವಾಗುವ ನಿರೀಕ್ಷೆಯಿದೆ. ಇದಕ್ಕೆ ಪೂರಕವಾಗಿ ಸಿಎಂ ಸಿದ್ದರಾಮಯ್ಯ ಪಟ್ಟಿಯನ್ನು ಅಂತಿಮಗೊಳಿಸಿ ಸಹಿ ಕೂಡ ಹಾಕಿದ್ದಾರೆ ಎನ್ನಲಾಗಿದೆ.
ಇವತ್ತು ಗುರುವಾರ ಆಯಾ ಇಲಾಖೆಗಳಿಂದ ಸಂಬಂಧಪಟ್ಟವರಿಗೆ ನೇಮಕ ಆದೇಶ ರವಾನೆಯಾಗಲಿದೆ. ಈ ಪೈಕಿ ಶಿವವಮೊಗ್ಗದ ವಿಚಾರವಾಗಿ ನೋಡುವುದಾದರೆ ಆರ್.ಎಂ.ಮಂಜುನಾಥ ಗೌಡರಿಗೆ ಮಲೆನಾಡು ಅಭಿವೃದ್ಧಿ ಮಂಡಳಿ ಹೆಚ್ ಎಸ್ ಸುಂದರೇಶ್, ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಪಲ್ಲವಿ, ಸಾಂಬಾರು ಮಂಡಳಿ ನೀಡುವ ಸಾಧ್ಯತೆ ಇದೆ.