ಜಸ್ಟ್ ಒಂದೆ ಗಂಟೆಯಲ್ಲಿ ಆಪರೇಷನ್ ಕರಡಿ ಸಕ್ಸಸ್! ಬಲೆಗೆ ಬಿದ್ದ ಜಾಂಬವಂತ

SHIVAMOGGA  Feb 28, 2024 ಶಿವಮೊಗ್ಗ ಸಿಟಿಯಲ್ಲಿ   ಪ್ರತ್ಯಕ್ಷವಾಗಿರುವ ಕರಡಿ ಸೆರೆಸಿಕ್ಕಿದೆ. ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆಯಲ್ಲಿ  ಇವತ್ತು ಬೆಳಗ್ಗೆ ಕರಡಿಯೊಂದು ಕಾಣಿಸಿಕೊಂಡಿತ್ತು. ಇದು ಆತಂಕಕ್ಕೂ ಕಾರಣವಾಗಿತ್ತು. ನಾಯಿಗಳು ಕರಡಿಯನ್ನು ನೋಡಿ ಬೆರೆಸಾಡುತ್ತಿದ್ದವು. ಈ ನಡುವೆ ಹೆದರಿದ ಕರಡಿಯು ವಾಕಿಂಗ್​ ಮಾಡುತ್ತಿದ್ದ ತುಕಾರಾಂ ಎಂಬವರ ಮೇಲೆ ದಾಳಿ ಮಾಡಿತ್ತು. ಸ್ವಲ್ಪದರಲ್ಲಿಯೇ ಪಾರಾದ ತುಕಾರಾಂರವರಿಗೆ ಕರಡಿ ಪರಚಿದ ಗಾಯವಾಗಿದೆ. 

ಈ ಬಳಿಕ ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿದರು, ಸಿಬ್ಬಂದಿ ಆಪರೇಷನ್​ ಟೂಲ್ಸ್​​ ಜೊತೆಗೆ ಬಂದು ಕರಡಿಗಾಗಿ ಕೂಂಬಿಂಗ್ ಆರಂಭಿಸಿದರು. ಕರಡಿ ಓಡಾಟವಿರುವ ಜಾಗದ ಸುತ್ತ ನಿರ್ಬಂಧ ಹೇರಿ ಜನ ಸಂಚಾರ ತಡೆದರು. ಈ ನಡುವೆ ಕರಡಿಯು ಹೆದರಿಕೊಂಡು ಪೊದೆಯೊಂದರಲ್ಲಿ ಅಡಗಿ ಕುಳಿತಿತ್ತು. 

ಆಪರೇಷನ್ ಕರಡಿ ಆರಂಭಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಪೊದೆಯ ಸುತ್ತಲು ಬಲೆ ಬಳಸಿ ಬೇಲಿ ಮಾಡಿದ್ರು. ಆನಂತರ ಮೇಲಿಂದ ಕರಡಿ ಡಾರ್ಟ್ ಮಾಡಿ ಪ್ರಜ್ಞೆ ತಪ್ಪಿಸಲಾಯ್ತು. ಬಳಿಕ ಅದನ್ನ ಬೋನಿಗೆ ಶಿಫ್ಟ್ ಮಾಡಿ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹದಾಮಕ್ಕೆ ಕೊಂಡೊಯ್ಯಲಾಗಿದೆ. 

ಸುಮಾರು ಆರೇಳು ವರ್ಷ ಇರಬಹುದಾದ ಕರಡಿ ಎಲ್ಲಿಂದ ಬಂದಿದೆ ಎಂಬುದು ತಿಳಿದುಬಂದಿಲ್ಲ. ಅರಣ್ಯ ಅಧಿಕಾರಿಗಳು ಸಹ ಊಹೆ ಮಾಡುತ್ತಿದ್ದು, ಈ ಬಗ್ಗೆ ಪರಿಶೀಲನೆ ನಡೆಸ್ತಿದ್ದಾರೆ. 

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು