Karimani malika ninalla | ಜೀವ ತೆಗೆದ ಕರಿಮಣಿ ಮಾಲಿಕ ನೀ ನಲ್ಲ ರೀಲ್ಸ್ ! ಹೆಂಡತಿಯ ವಿಡಿಯೋ ನೋಡಿ ಗಂಡ ಆತ್ಮಹತ್ಯೆ! VIRAl STORY

ಹಂಚಿಕೊಳ್ಳಿ
WhatsApp Facebook X Telegram

Shivamogga Feb 16, 2024 | Karimani malika ninalla ಹೆಂಡತಿ ಮಾಡಿದ ‘ಕರಿಮಣಿ ಮಾಲಿಕ ನೀ ನಲ್ಲ.’ ವೈರಲ್ ರೀಲ್‌ಗೆ ಮನನೊಂದ ಪತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮದಲ್ಲಿ ನಡೆದಿದೆ.

ಕಳೆದ ಬುಧವಾರ ರಾತ್ರಿ ನಡೆದಿದ್ದು ಗುರುವಾರ ಬೆಳಗ್ಗೆ ಮಾಹಿತಿ ಲಭ್ಯವಾಗಿದೆ. ಮೃತನ ಸೋದರ ಈ ಸಂಬಂಧ ಇಬ್ಬರ ವಿರುದ್ಧ ದೂರು ನೀಡಿದ್ದಾರೆ. ಮೃತನ ಪತ್ನಿಯು ತನ್ನ ಸೋದರ ಮಾವ ಹಾಗೂ ಸಹೋದರಿ ಜೊತೆ ಸೇರಿ ‘ಕರಿಮಣಿ ಮಾಲಿಕ ನೀ ನಲ್ಲ ಎಂಬ ಹಾಡಿಗೆ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಆಪ್ ಲೋಡ್ ಮಾಡಿದ್ದರು.

ಸ್ನೇಹಿತರು ಇದನ್ನು ಮೃತನ ಗಮನಕ್ಕೆ ತಂದ ವೇಳೆ ದಂಪತಿ ನಡುವೆ ಮಾತಿನ ಚಕಮಕಿ ನಡೆದಿದೆ. ಮನನೊಂದ ಪತಿ ಮನೆ ಮುಂಭಾಗದ ಮರಕ್ಕೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತನಿಖೆ ನಡೆಯುತ್ತಿದೆ. 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor