ಶಿವಮೊಗ್ಗ ವಾಹನ ಸವಾರರೇ ಎಚ್ಚರ ವಹಿಸಿ! ಈಗಲೇ ವೆಹಿಕಲ್ ಫೈನ್ ಚೆಕ್ ಮಾಡ್ಕೊಳ್ಳಿ! ದ್ವಿಚಕ್ರವಾಹನಕ್ಕೆ ಬಿತ್ತು 16,500 ದಂಡ

ಹಂಚಿಕೊಳ್ಳಿ
WhatsApp Facebook X Telegram

Shivamogga Feb 12, 2024ಶಿವಮೊಗ್ಗ ಟ್ರಾಫಿಕ್ ಪೊಲೀಸರು ಬಿಗಿ ದಂಡ ಹಾಕುವುದನ್ನ ಮುಂದುವರಿಸಿದ್ದಾರೆ. ಅತಿಹೆಚ್ಚು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಹೊಂದಿರುವ ಹಾಗೂ ದಂಡ ಕಟ್ಟುವುದನ್ನ ಬಾಕಿ ಉಳಿಸಿಕೊಂಡಿರುವ ಆರೋಪದಲ್ಲಿ  ದ್ವಿಚಕ್ರವಾಹನ ಸವಾರರೊಬ್ಬರಿಗೆ ಬರೋಬ್ಬರಿ 16500 ರೂಪಾಯಿ ದಂಡ ಹಾಕಿದ್ದಾರೆ. 

ಏನಿದು ಪ್ರಕರಣ

ದ್ವಿಚಕ್ರ ವಾಹನ ಸವಾರರೊಬ್ಬರು ಸಂಚಾರಿ ನಿಯಮ ಉಲ್ಲಂಘಿಸಿದ ಸಂಬಂಧ 13 ಐಎಂವಿ ಪ್ರಕರಣಗಳು ದಾಖಲಾಗಿತ್ತು. ಈ ಸಂಬಂಧ ಬರೋಬ್ಬರಿ 16,500/- ರೂ ದಂಡ ಮೊತ್ತ  ಬಾಕಿಯಿತ್ತು. ಪ್ರಕರಣ ಸಂಬಂಧ ವಾಹನ ಮಾಲೀಕರನ್ನ ಪತ್ತೆಮಾಡಿಡ ಸಂಚಾರಿ ಪೊಲೀಸರು ಅವರಿಗೆ ಮಾರುದ್ದದ ರಸೀದಿ ನೀಡಿ 16,500/- ರೂ ದಂಡದ ಹಣವನ್ನು ವಸೂಲಿ ಮಾಡಿದ್ದಾರೆ. 

ಇನ್ನೂ ಬೆಂಗಳೂರು ನಲ್ಲಿ ಇದೇ ವಿಚಾರದಲ್ಲಿ  ಐವತ್ತು ಸಾವಿರಕ್ಕೂ ಅಧಿಕ ಟ್ರಾಫಿಕ್​ ಪೈನ್ ಇದ್ದಲ್ಲಿ ಪೊಲೀಸರು ವಾಹನ ಸವಾರರ ಮನೆಗೆ ಬಂದು ದಂಡ ವಸೂಲಿ ಮಾಡುಲು ನಿರ್ಧರಿಸಿದ್ದಾರೆ. ಅಂದಾಜಿನ ಪ್ರಕಾರ,  2,681ಕ್ಕೂ ಹೆಚ್ಚಿನ ವಾಹನಗಳು 50 ಸಾವಿರಕ್ಕೂ ಅಧಿಕ ದಂಡ ಪಾವತಿ ಬಾಕಿ ಉಳಿಸಿಕೊಂಡಿದೆ ಎಂದು ಹೇಳಲಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. 

ಫೈನ್​ ಚೆಕ್ ಮಾಡುವುದು ಹೇಗೆ

ವಾಹನ ಸವಾರರು ಕರ್ನಾಟಕ ಒನ್​ ಆನ್​ಲೈನ್​ ಪೇಜ್​ಗೆ ಹೋದರೆ, ಅಲ್ಲಿ ತಮ್ಮ ವಾಹನದ ರಿಜಿಸ್ಟ್ರೇಷನ್​ ನಂಬರ್ ದಾಖಲು ಮಾಡಿ ಫೈನ್ ಎಷ್ಟಿದೆ ನೋಡಬಹುದು. ಇದಕ್ಕಾಗಿ ಈ ಲಿಂಕ್​ ಕ್ಲಿಕ್ ಮಾಡಿ, ಕರ್ನಾಟಕ ಒನ್​ ಲಿಂಕ್

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor