ಕುವೆಂಪು ವಿಶ್ವವಿದ್ಯಾಲಯ ಅಕಾಡೆಮಿಕ್ ಕ್ಯಾಲೆಂಡರ್ ಹಾಗೂ ಪರೀಕ್ಷೆ ಎರಡೂ ಮುಂದೂಡಿಕೆ

Shivamogga | Feb 3, 2024 |  ಕುವೆಂಪು ವಿಶ್ವ ವಿದ್ಯಾಲಯ ಶೈಕ್ಷಣಿಕ ಅವಧಿ ಹಾಗೂ ಪರೀಕ್ಷೆ ಮುಂದೂಡಿಕೆ ಬಗ್ಗೆ ಒತ್ತಾಯ ಕೇಳಿಬಂದಿತ್ತು. ಕುವೆಂಪು ವಿಶ್ವ ವಿದ್ಯಾಲಯ ವ್ಯಾಪ್ತಿಯಲ್ಲಿ   ಬರುವ ಕಾಲೇಜು ಗಳಲ್ಲಿ ಅತಿಥಿ ಉಪನ್ಯಾಸಕರ ಕೊರತೆಯಿಂದಾಗಿ ವಿದ್ಯಾರ್ಥಿ ಗಳಿಗೆ ಪಾಠ ಪ್ರವಚನಗಳು ಸರಿಯಾಗಿ ನಡೆದಿರುವುದಿಲ್ಲ. ಈ ಹಿನ್ನೆಲೆಯ ಶೈಕ್ಷಣಿಕ ಅವಧಿ ಹಾಗೂ ಪರೀಕ್ಷೆಗಳನ್ನು ಮುಂದೂಡುವಂತೆ ಎನ್​ಎಸ್​ಯುಐ ವಿದ್ಯಾರ್ಥಿ ಸಂಘಟನೆ ಸಹ ಮನವಿ ಮಾಡಿತ್ತು.  

ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳು ನಡೆಯದೇ ಇರುವುದನ್ನು ಗಮನದಲ್ಲಿಟ್ಟುಕೊಂಡು ಅಕಾಡೆಮಿಕ್ ಕ್ಯಾಲೆಂಡರ್ ಅನ್ನು ಫೆಬ್ರವರಿ ತಿಂಗಳ ಅಂತಿಮದಿನದ ವರೆಗೆ ಮಾರ್ಪಡಿಸಬೇಕು  

ಅಥವಾ ವಿದ್ಯಾರ್ಥಿಗಳ ಹಿತಾ ದೃಷ್ಠಿ ಇಂದ ಪರೀಕ್ಷೆಯನ್ನು ಮುಂದೂಡಬೇಕೆಂದು ಎನ್ ಎಸ್ ಯು ಐ  ಪ್ರತಿಭಟನೆ ಸಹ ನಡೆಸಿತ್ತು. ಇದೀಗ ಕುವೆಂಪು ವಿಶ್ವ ವಿದ್ಯಾಲಯ ಒತ್ತಾಯಕ್ಕೆ ಮಣಿದು ವಿದ್ಯಾರ್ಥಿಗಳ ಹಿತದೃಷ್ಠಿಯಿಂ ಅಕಾಡಿಮಿಕ್ ಕ್ಯಾಲೆಂಡರ್ ಹಾಗೂ ಪರೀಕ್ಷೆ ಎರಡನ್ನೂ ಮುಂದೂಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಈ ಸಂಬಂಧ ಪ್ರಕಟಣೆಯನ್ನ ಸಹ ಹೊರಡಿಸಿದೆ. 

Malenadu Today


Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು