ನಿನ್ನೆ ಕದ್ದ ಇವತ್ತು ಸಿಕ್ಕಿಬಿದ್ದ! ಬೈಕ್​ ಕಳ್ಳತನ ಮಾಡಿದ್ದ ಆರೋಪಿಗೆ ಶಾಕ್ ಕೊಟ್ಟ ಸಾಗರ ಟೌನ್ ಪೊಲೀಸ್​

ಹಂಚಿಕೊಳ್ಳಿ
WhatsApp Facebook X Telegram

SHIVAMOGGA  |  Jan 6, 2024  |  ಶಿವಮೊಗ್ಗ ಜಿಲ್ಲೆ ಸಾಗರ ಉಪವಿಭಾಗದಲ್ಲಿ ಸಾಗರ ಟೌನ್​ ಪೊಲೀಸರು ಬೈಕ್ ಕಳ್ಳತನ ಪ್ರಕರಣ ಒಂದನ್ನು 24 ಗಂಟೆಯಲ್ಲಿ ಭೇದಿಸಿ ದಾಖಲೆ ಮಾಡಿದ್ದಾರೆ.

ಇಲ್ಲಿನ ನೆಹರು ನಗರದಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಒಂದೇ ದಿನದಲ್ಲಿ ಬಯಲಾಗಿದ್ದು, ಆರೋಪಿ ಮಾಲು ಸಮೇತ ಸಿಕ್ಕಿಬಿದ್ದಿದ್ದಾನೆ.

ಹೇಗೆ ಸಿಕ್ಕಿಬಿದ್ದ ಎಂಬುದನ್ನ ಪೊಲೀಸರು ವಿವರಿಸಲಾರರು.ಕಾರಣ ಮತ್ತೊಬ್ಬ ಕಳ್ಳ ಅದರಿಂದ ಹುಷಾರಾದಾನು ಎಂಬುದು ಇಲಾಖೆಯ ಅನುಮಾನ. ಹೀಗಾಗಿ ಪೊಲೀಸರು ಹಿಡಿದ ಆರೋಪಿ ಪ್ರಕರಣದ ವಿವರವನ್ನಷ್ಟೆ ನೀಡುತ್ತಾರೆ. 

ಸಾಗರ ಟೌನ್ ಪೊಲೀಸ್ ಸ್ಟೇಷನ್,Sagar Town Police Station,  

ಸದ್ಯ ಸಾಗರ ಟೌನ್ ಪೊಲೀಸರು ಸಹ ಈ ಸಂಬಂಧ ವಿವರಣೆ ನೀಡಿದ್ದು,  ನೆಹರು ನಗರದ 3ನೇ ಅಡ್ಡರಸ್ತೆಯ ಮನೆಯೊಂದರ ಮುಂಭಾಗ ನಿಲ್ಲಿಸಿದ್ದ ಬೈಕ್ ಕಳವು ಪ್ರಕರಣ ಇದಾಗಿದೆ. ಜನವರಿ 3 ರಂದು ಘಟನೆ ನಡೆದಿತ್ತು. ಸಿಕ್ಕಿಬಿದ್ದ ಆರೋಪಿ ಹೆಸರು ಅಬ್ದುಲ್ ಬಿಲಾಲ್(25) 

ಈತ  60 ಸಾವಿರ ಮೌಲ್ಯದ ಹೊಂಡಾ ಆಕ್ಟೀವಾ 125 ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿದ್ದ.ವಿಶೇಷ ಅಂದರೆ ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿತ್ತು. ಬಳಿಕ ಪ್ರಕರಣದ ಸಂಬಂಧ ತನಿಖೆ ಆರಂಭಿಸಿದ ಪೊಲೀಸರು ಆರೋಪಿಯನ್ನು ಹಿಡಿದು ತಂದಿದ್ದಾರೆ. 

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor