ಶಿವಮೊಗ್ಗದಲ್ಲಿ ಕಾಂತಣ್ಣ ಕಪ್ ಕ್ರಿಕೆಟ್ ಪಂದ್ಯಾವಳಿ! ಯಾರೆಲ್ಲಾ ಪಾಲ್ಗೊಳ್ಳಬಹುದು ಇಲ್ಲಿದೆ ವಿವರ

ಹಂಚಿಕೊಳ್ಳಿ
WhatsApp Facebook X Telegram

SHIVAMOGGA |  Dec 21, 2023  | ಶಿವಮೊಗ್ಗ: ಮಲ್ನಾಡ್ ಭಾವಸಾರ ಕ್ರಿಕೇಟರ್ಸ್ ವತಿಯಿಂದ ಭಾವಸಾರ, ವಿಶ್ವಕರ್ಮ ಹಾಗೂ ದೈವಜ್ಞ ಸಮಾಜದ ಯುವಕರನ್ನು ಸಂಘಟಿಸುವ ಸಲುವಾಗಿ ಇದೇ ಮೊದಲ ಬಾರಿಗೆ ‘ಕಾಂತಣ್ಣ ಕಪ್’ ಕ್ರಿಕೆಟ್ ಪಂದ್ಯಾವಳಿಯನ್ನು ದಿ.24 ರಂದು ನಗರದ ಸಹ್ಯಾದ್ರಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

READ : BREAKING NEWS | ಶಿವಮೊಗ್ಗದ ಗಾಂಧಿನಗರದಲ್ಲಿ ನೆಳಮಾಳಿಗೆಯಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸ್ ರೇಡ್ 3 ಯುವತಿಯರ ರಕ್ಷಣೆ

ಈ ಪಂದ್ಯಾವಳಿಯ ಅಧ್ಯಕ್ಷತೆಯನ್ನು ಭಾವಸಾರ ಕ್ಷತ್ರಿಯ ಸಮಾಜ ಯುವ ಪರಿಷದ್‌ನ ಅಧ್ಯಕ್ಷರಾದ ವಿನಯ್ ತಾಂದ್ಲೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಮುಖಂಡರಾದ ಎಂ.ಶ್ರೀಕಾಂತ್, ವಿಶ್ವನಾಥ ಕಾಶಿ, ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಗಜೇಂದ್ರನಾಥ, ದೈವಜ್ಞ ಸಮಾಜದ ಅಧ್ಯಕ್ಷ ಪ್ರಕಾಶ್ ಸಿ., ವಿಶ್ವಕರ್ಮ ಸಮಾಜದ ಅಧ್ಯಕ್ಷ ರಾಮು.ಪಿ ಹಾಗೂ ಶ್ರೀ ಕಾಳಿಕಾ ಪರಮೇಶ್ವರಿ ಸೊಸೈಟಿಯ ನಿರ್ದೇಶಕರಾದ ಸತೀಶ್ ಭಾಗವಹಿಸಲಿದ್ದಾರೆ.

ಹೆಚ್ಚಿನ ಮಾಹಿತಿಗೆ ಮೊ.7204563074 ಸಂಪರ್ಕಿಸಬಹುದು ಎಂದು  ವಿನಯ್ ತಾಂದ್ಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor