ಜುಲೈ ಕೊಲೆಗೆ ಡಿಸೆಂಬರ್​ನಲ್ಲಿ ಸೇಡು! ಭದ್ರಾವತಿ ಟೌನ್​ ನಲ್ಲಿ ನಡೆದಿದ್ದೇನು ಗೊತ್ತಾ? ಕರಿಚಿಕ್ಕಿ ಕೊಲೆಗೆ ಕಾರಣ ಇಲ್ಲಿದೆ! ಆರೋಪಿಗಳು ಯಾರು?

SHIVAMOGGA |  Dec 20, 2023  | ಶಿವಮೊಗ್ಗ ಜಿಲ್ಲೆ ಭದ್ರಾವತಿ ಟೌನ್​ನಲ್ಲಿ ಇವತ್ತು ಮಧ್ಯಾಹ್ನ 12 ಗಂಟೆ ಸುಮಾರಿ ಮರ್ಡರ್ ಆಗಿದೆ. ಯುವಕನೊಬ್ಬನ ತಲೆಯನ್ನೆ ಟಾರ್ಗೆಟ್ ಮಾಡಿ ದುಷ್ಕರ್ಮಿಗಳು ಮಚ್ಚಿನೇಟು ಬೀಸಿದ್ದಾರೆ. ಬಿದ್ದ ಮಚ್ಚಿನ ಹೊಡೆತಕ್ಕೆ ಯುವಕ ಸ್ಥಳದಲ್ಲಿಯೇ ರಕ್ತ ಚೆಲ್ಲಿ ಸಾವನ್ನಪ್ಪಿದ್ದಾರೆ. 

 ಭದ್ರಾ ವೈನ್ಸ್ ಶಾಪ್​ನಲ್ಲಿ ಹೀಗೆ ಕೊಲೆಯಾದವನನ್ನ  ಹೇಮಂತ್ ಅಲಿಯಾಸ್ 35 ವರ್ಷದ ಕರಿ ಚಿಕ್ಕಿ ಎಂದು ಗುರುತಿಸಲಾಗಿದೆ. ಈತನ ಕೊಲೆಗೂ ಕಾರಣವೂ ಸ್ಪಷ್ಟವಾಗಿದೆ. ಅಲ್ಲದೆ ಭದ್ರಾವತಿ ಪೊಲೀಸರು ಈ ಸಂಬಂಧ ಮೂವರನ್ನ  ಅರೆಸ್ಟ್ ಮಾಡಿದ್ದಾರೆ. 

Malenadu Today

ಬಂಧಿತರು!

1 ಸತ್ಯಾನಂದ, ಕುಮಾರ್, ಬೊಮ್ಮನಕಟ್ಟೆ ,

2 ಮುಬಾರಕ್ @ ಮುಬ್ಬು, 26 ವರ್ಷ ಬೊಮ್ಮನಕಟ್ಟೆ 

3 ಖಲೀಲ್  20 ವರ್ಷ, ಬೊಮ್ಮನಕಟ್ಟೆ   

ಅಂದಹಾಗೆ, ಘಟನೆಯ ಹಿಂದಿರೋದು ಹಳೆಯ ದ್ವೇಷ ಎಂಬುದು ಸ್ಪಷ್ಟವಾಗಿದೆ. ಅದೇನೂ ಅಂತಾ ನೋಡುವುದಾದರೆ, 

ದಿನಾಂಕ: 20/07/2023 ರಂದು ರಾತ್ರಿ  ರೌಡಿ ಮುಜ್ಜುವನ್ನ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದರು.

ಭದ್ರಾವತಿ ಪೇಪರ್ ಟೌನ್​ ಲಿಮಿಟ್ಸ್​ನಲ್ಲಿ  ಈ ಘಟನೆ ನಡೆದಿತ್ತು. ತನಗೆ ಬೇಕಾಗಿದ್ದವರು ಮನೆಗೆ ಹೋಗುತ್ತಿದ್ದ ಮುಜ್ಜುವನ್ನ ಅಡ್ಡಗಟ್ಟಿದ್ದ ಆರೋಪಿಗಳು ಹೀನಾಯವಾಗಿ ಆತನನ್ನ ಹೊಡೆದುಹಾಕಿದ್ದರು. ಆತನಿಗೂ ಸಹ ತಲೆಗೆ ಮಚ್ಚಿನೇಟು ನೀಡಲಾಗಿತ್ತು. 

Malenadu Today

ಬೊಮ್ಮನಕಟ್ಟೆ ಬಡಾವಣೆಯ ಸಮೀಪವೇ  ಮುಜಾಯಿದ್ದೀನ್ ಅಲಿಯಾಸ್ ಮುಜ್ಜು ಎಂಬಾತ ಹತ್ಯೆಯಾಗಿದ್ದ. ಈ ಪ್ರಕರಣವನ್ನು ಅಂದು ಭೇದಿಸಿದ್ದ ಪೊಲೀಸರು ಕಡೂರುನಲ್ಲಿದ್ದ ಆರೋಪಿಗಳನ್ನ ಬಂಧಿಸಿ ಕರೆತಂದಿದ್ದರು. 1) ಸಂತೋಷ ಕುಮಾರ್ @ ಗುಂಡ @ ಕರಿಯಾ, 33 ವರ್ಷ, ವಾಸ ಹಿರಿಯೂರು ಭದ್ರಾವತಿ, 2) ಸುರೇಂದ್ರ @ ಆಟೋ ಸೂರಿ, 36 ವರ್ಷ, ಹೊಸಮನೆ, ಭದ್ರಾವತಿ, 3) ಮಂಜುನಾಥ @ ಬಿಡಾ, 33 ವರ್ಷ, ಕುವೆಂಪು ನಗರ, ಹೊಸಮನೆ ಭದ್ರಾವತಿ, 4) ವಿಜಯ್ ಕುಮಾರ್ @ ಪವರ್, 25 ವರ್ಷ, ಭೂತನಗುಡಿ ಭದ್ರಾವತಿ , 5) ವೆಂಕಟೇಶ @ ಲೂಸ್, 23 ವರ್ಷ, ಹಳ್ಳಿಕೆರೆ, ಬಾರಂದೂರು ಭದ್ರಾವತಿ,  ಆಗ ಬಂಧಿತರಾದವರು.. 

Malenadu Today

ಮುಜ್ಜು ಮರ್ಡರ್​ಗೆ ಅಂದು ಕಾರಣವಾಗಿದ್ದು 2019 ರಲ್ಲಿ ರಮೇಶ್​ ಎಂಬಾತನ ಕೊಲೆ ನಡೆದಿತ್ತು, ರೌಡಿ ಮುಜ್ಜು ರಮೇಶ್​ನಿಗೆ ಡ್ರ್ಯಾಗರ್​ನಿಂದ ಚುಚ್ಚಿ ಸಂತೋಷ್ ಹಾಗೂ ಸುರೇಶ್​ ಮೇಲೂ ಅಟ್ಯಾಕ್​ ಮಾಡಿದ್ದ. ಈ ಘಟನೆ ನಂತರ ಮುಜ್ಜು ಜೈಲಿಗೆ ಹೋಗಿ ಬಂದಿದ್ದ. ಇದೇ ವಿಚಾರದಲ್ಲಿ ಮುಜ್ಜುವನ್ನ ಸಂತೋಷ್​ ಹಾಗೂ ಸುರೇಶ್​ ಆ್ಯಂಡ್ ಟೀಂ ಕೊಲೆ ಮಾಡಿತ್ತು. 

ಇದೀಗ ಅಣ್ಣನ ಕೊಲೆಯ ಪ್ರತೀಕಾರವಾಗಿ ಖಲೀಲ್, ಮುಬಾರಕ್ ಮತ್ತು ಸತ್ಯಾನಂದ ಗುಂಡಾನ ತಮ್ಮ ಕರಿಚಿಕ್ಕಿಯನ್ನು ಕೊಲೆ ಮಾಡಿದೆ ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ. ಈ ಬಗ್ಗೆ ಇನ್ನಷ್ಟು ತನಿಖೆ ನಡೆಯುತ್ತಿದೆ. ವೈನ್ ಶಾಪ್​ನಲ್ಲಿದ್ದ ಕರಿಚಿಕ್ಕಿಯನ್ನು ದುಷ್ಕರ್ಮಿಗಳ ಗುಂಪು ಹೊಡೆದು ಹಾಕಿದ್ದು ಹಳೇನಗರ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ. ಇಲ್ಲಿ ಹೊಡೆದವನು ಮುಜ್ಜು ಸಹೋದರ ಆದರೆ, ಸಾವನ್ನಪ್ಪಿರುವವನು ಮುಜ್ಜು ಕೊಲೆ ಆರೋಪಿ ಗುಂಡನ ಸಹೋದರ ಎನ್ನಲಾಗಿದೆ.

 

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು