ಶಿವಮೊಗ್ಗ-ಹೈದರಾಬಾದ್ ವಿಮಾನ ಹಾರಾಟ ರದ್ದಾಗಿದ್ದಕ್ಕೆ ಕಾರಣವೇನು ಗೊತ್ತಾ?

SHIVAMOGGA |  Dec 10, 2023 | ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮತ್ತೆ ಲ್ಯಾಂಡಿಂಗ್ ಪ್ರಾಬ್ಲಮ್ ಆಗಿದ್ದು ನಿನ್ನೆ  ಶಿವಮೊಗ್ಗ-ಹೈದರಾಬಾದ್ ವಿಮಾನ ರದ್ದಾದ ವಿಚಾರ ಬೆಳಕಿಗೆ ಬಂದಿದೆ. 

ಶಿವಮೊಗ್ಗ-ಹೈದರಾಬಾದ್ ವಿಮಾನ ರದ್ದು

ಶಿವಮೊಗ್ಗ: ಹವಾಮಾನ ವೈಪರೀತ್ಯದಿಂದಾಗಿ ಶಿವಮೊಗ್ಗ-ಹೈದ್ರಾಬಾದ್ ನಡುವಿನ ವಿಮಾನ ಸಂಚಾರ ರದ್ದಾಗಿದೆ. ಶನಿವಾರ ಸಂಜೆ 4.30ಕ್ಕೆ ಶಿವಮೊಗ್ಗದಿಂದ ಹೈದರಾಬಾದ್‌ಗೆ ತೆರಳಬೇಕಿದ್ದ ಸ್ಟಾರ್ ಏರ್‌ಲೈನ್ಸ್ ವಿಮಾನ ರದ್ದಾಗಿದೆ. 

READ : ಚಳಿಗೆ ಶಿವಮೊಗ್ಗ ವಿಮಾನ ನಿಲ್ದಾಣ ಗಢಗಢ | ಮತ್ತೆ ಎದುರಾಯ್ತು ಈ ಪ್ರಾಬ್ಲಮ್​!

ಪರಿಣಾಮ ಸುಮಾರು, 65 ಪ್ರಯಾಣಿಕರು ಪರದಾಡುವಂತಾಯಿತು. ಮಧ್ಯಾಹ್ನ 3 ಗಂಟೆಯಿಂದ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರು ಕಾದು ಸುಸ್ತಾಗಿದ್ದರು. ಸ್ಟಾ‌ರ್ ಏರ್‌ಲೈನ್ಸ್‌ಗೆ ಸೇರಿದ ವಿಮಾನಕ್ಕೆ ವಿಸಿಬಿಲಿಟಿ ಕಾರಣ ಸಂಚಾರಕ್ಕೆ ಅಡ್ಡಿಯಾಗಿದೆ 

ವಿಮಾನದಲ್ಲಿ ಕುಳಿತು ಹಾರಾಟ ಆಗದೆ ಪ್ರಯಾಣಿಕರು ವಾಪಸಾಗಿದ್ದಾರೆ. ರನ್ ವೇಗೆ ಸಂಬಂಧಿಸಿದಂತೆ ಇನ್ನೂ ಕೆಲವು ಉಪಕರಣಗಳ ಅಳವಡಿಕೆ ಆಗಬೇಕಿದ್ದು, ಇದರಲ್ಲಿ ವಿಳಂಬವಾಗುತ್ತಿರುವ ಕಾರಣ ಹವಾಮಾನ ವೈಪರೀತ್ಯ ಸಂದರ್ಭದಲ್ಲಿ ಸಮಸ್ಯೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.


 

Leave a Comment