ಮಹಿಳೆ ಹಾಗೂ ಇಬ್ಬರು ಮಕ್ಕಳ ಸುಳಿವು ಸಿಕ್ಕರೆ ದೊಡ್ಡಪೇಟೆ ಪೊಲೀಸ್ ಠಾಣೆಗೆ ವಿಷಯ ತಿಳಿಸಿ!

SHIVAMOGGA NEWS / Malenadu today/ Dec 1, 2023 | MALENADU TODAY | MALNAD NEWS 

SHIVAMOGGA |  ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ತನ್ನಿಬ್ಬರು ಮಕ್ಕಳ ಜೊತೆಗೆ ಕಾಣೆಯಾದ ಬಗ್ಗೆ ವರದಿಯಾಗಿದ್ದು ಈ ಸಂಬಂಧ ಪೊಲೀಸ್ ಪ್ರಕಟಣೆಯನ್ನು ನೀಡಲಾಗಿದೆ. 

ಮಹಿಳೆ ಹಾಗೂ ಇಬ್ಬರು ಮಕ್ಕಳು ನಾಪತ್ತೆ

ಇಲ್ಲಿನ  ಬುದ್ದಾನಗರ 01 ಕ್ರಾಸ್ ವಾಸಿ ಮೊಹಮದ್ ಜಾಫರ್ ಎಂಬುವವರ ಪತ್ನಿ ಉಮ್ಮೆ ಹನಿ ಎಂಬ 29 ವರ್ಷದ ಮಹಿಳೆ ತಮ್ಮ 09 ವರ್ಷದ ಮಗಳು ಆಸ್ಪಿಯಾ ಕೌನೈನ್  ಹಾಗೂ 05 ವರ್ಷ ಮಗ ಮೊಹಮದ್ ಸೂಫಿಯಾನ್ ಎಂಬ ಇಬ್ಬರು ಮಕ್ಕಳನ್ನು ಕರೆದುಕೊಂಡು ನ.20 ರಂದು ಮನೆಯಿಂದ ಹೋದವರು ಈವರೆಗೂ ವಾಪಸ್ಸು ಬಂದಿಲ್ಲ

ಉಮ್ಮೆ ಹನಿಯ ಚಹರೆ 5.3 ಅಡಿ ಎತ್ತರ, ದೃಢವಾದ ಮೈಕಟ್ಟು, ಗೋಧಿ ಮೈಬಣ್ಣ, ದುಂಡನೆ ಮುಖ ಹೊಂದಿದ್ದು, ನೀಲಿ ಬಣ್ಣದ ಚೂಡಿದಾರ್ ಧರಿಸಿರುತ್ತಾರೆ. ಆಸ್ಪಿಯಾ ಕೌನೈನ್ ಚಹರೆ 4.00 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡನೆ ಮುಖ ಹೊಂದಿದ್ದು, ಕ್ರೀಂ ಬಣ್ಣದ ಅಂಗಿ ಹಾಗೂ ಕಪ್ಪು ಬಣ್ಣದ ಸ್ಕರ್ಟ್ ಧರಿಸಿರುತ್ತಾಳೆ.

READ : ಸೀದಾ ಮನೆಗೆ ನುಗ್ಗಿದ ಕಾರು! ರಾಷ್ಟ್ರೀಯ ಹೆದ್ದಾರಿಯಲ್ಲಿ ಧರ್ಮಸ್ಥಳಕ್ಕೆ ಹೋಗ್ತಿರುವಾಗ ಘಟನೆ

 ಮೊಹಮದ್ ಸೂಫಿಯಾನ್ ಚಹರೆ 3.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡನೆ ಮುಖ ಹೊಂದಿದ್ದು, ಕ್ರೀಂ ಬಣ್ಣದ ಅಂಗಿ ಹಾಗೂ ಕಪ್ಪು ಬಣ್ಣದ ಚಡ್ಡು ಧರಿಸಿರುತ್ತಾನೆ.   ಈ ಕಾಣೆಯಾದ ವ್ಯಕ್ತಿಗಳ ಮಾಹಿತಿ ದೊರೆತಲ್ಲಿ ದೊಡ್ಡಪೇಟೆ ಪೊಲೀಸ್​ ಠಾಣೆ ಸಂಖ್ಯೆ : 08182-261414/9611761255 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. (ಛಾಯಾಚಿತ್ರ ಲಗತ್ತಿಸಿದೆ)

ಮೆಗ್ಗಾನ್​ ಆಸ್ಪತ್ರೆಯ ಎದುರು ಅಪರಿಚಿತ ಮಹಿಳೆ ಸಾವು

ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಎದುರಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದ ಎ.ಆರ್.ಟಿ ಸೆಂಟರ್ ವಿಭಾಗದ ಬಾಗಿಲಿನ ಹತ್ತಿರದಲ್ಲಿ ಕಟ್ಟಡ ನಿರ್ಮಾಣಕ್ಕೆಂದು ಸಂಗ್ರಹ ಮಾಡಿದ ಸಿಮೆಂಟ್ ಟೈಲ್ಸ್​ಗಳ ಮೇಲೆ ಸುಮಾರು 50 ರಿಂದ 55 ವರ್ಷ ವಯಸ್ಸಿನ  ಮಹಿಳೆ ಸಾವನ್ನಪ್ಪಿದ್ಧಾರೆ 

READ : ಸೀದಾ ಮನೆಗೆ ನುಗ್ಗಿದ ಕಾರು! ರಾಷ್ಟ್ರೀಯ ಹೆದ್ದಾರಿಯಲ್ಲಿ ಧರ್ಮಸ್ಥಳಕ್ಕೆ ಹೋಗ್ತಿರುವಾಗ ಘಟನೆ

ಆಕೆಯನ್ನು ಮೆಗ್ಗಾನ್ ಆಸ್ಪತ್ರೆ ಸಿಬ್ಬಂದಿಯವರ ಸಹಕಾರದಿಂದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ ಬಳಿಕ ವೈದ್ಯರು ಆಕೆ ಸಾವನ್ನಪ್ಪಿರುವುದನ್ನ ದೃಢೀಕರಿಸಿದ್ದಾರೆ.  ಮೃತ ದೇಹವನ್ನು ಮೆಗ್ಗಾನ್ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದ್ದು. ಮೃತದೇಹವೂ ಮೆಗ್ಗಾನ್ ಆಸ್ಪತ್ರೆ ಶವಾಗಾರದಲ್ಲಿಡಲಾಗಿದೆ.

ಮೃತರ ಗುರುತು ಪತ್ತೆಗೆ ಮನವಿ

ಮೃತಳು ಸುಮಾರು 05 ಅಡಿ 08 ಇಂಚು ಎತ್ತರ, ದುಂಡು ಮುಖ. ದೃಢವಾದ ಮೈಕಟ್ಟು ಹೊಂದಿದ್ದು ಮೃತಳ ತಲೆಯಲ್ಲಿ ಸುಮಾರು 10 ಇಂಚು ಉದ್ದದ ಕಪ್ಪು ಕೂದಲು ಇರುತ್ತದೆ. ಮೃತಳ ಮೈಮೇಲೆ  ಕೆಂಪು ಬಣ್ಣದ ಹಳದಿ ಹೂವಿನ ಚಿತ್ರವಿರುವ ನೈಟಿ ಹಾಗೂ ಹಳದಿ ಬಣ್ಣದ ಬ್ಲೌಸ್ ಇರುತ್ತದೆ.

ಮೃತಳ ವಾರಸುದಾರರು ಯಾರಾದರೂ ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ಸಂಖ್ಯೆ : 08182-261414 ಅಥವಾ 9611761255 ನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ. 

 

Leave a Comment