ಹುತ್ತದ ಜಾತ್ರೆ ಬಗ್ಗೆ ಕೇಳಿದ್ದೀರಾ! ಉತ್ಸವದ ಅಲುಗಾಡುವ ಹುತ್ತದ ಬಗ್ಗೆ ನೋಡಿದ್ದೀರಾ! ಇಲ್ಲಿದೆ ನೋಡಿ

SHIVAMOGGA NEWS / Malenadu today/ Nov 27, 2023 | Malenadutoday.com  

CHIKKAMAGALURU  | ಚಿಕ್ಕಮಗಳೂರು ಜಿಲ್ಲೆಯಲ್ಲಿ ಹುತ್ತದ ಜಾತ್ರೆ ಎಂಬ ಜಾತ್ರೆ ನಡೆಯುತ್ತದೆ. ಈ ಜಾತ್ರೆ ಮಲೆನಾಡಿನಲ್ಲಿಯೇ ವಿಶೇಷವಾಗಿರುತ್ತದೆ. 

ಮೂಡಿಗೆರೆ ತಾಲ್ಲೂಕು

ಇಲ್ಲಿನ ಮೂಡಿಗೆರೆ ತಾಲ್ಲೂಕಿನ  ಬಗ್ಗಸಗೋಡು-ಬಾನಳ್ಳಿ ಗ್ರಾಮದಲ್ಲಿ ನಡೆಯುವ ಉಣ್ಣಕ್ಕಿ ಜಾತ್ರೆಗೇನೆ ಹುತ್ತದ ಜಾತ್ರೆ ಅಂತಾ ಕರೆಯಲಾಗುತ್ತದೆ. ವಿಶೇಷ ಅಂದರೆ, ಇಲ್ಲಿಉರವ  ಉಣ್ಣಕ್ಕಿ ಹುತ್ತ ಜಾತ್ರೆ ಸಂದರ್ಭದಲ್ಲಿ ಪೂಜೆಯ ವೇಳೆಯಲ್ಲಿ ಹುತ್ತ ಅಲುಗಾಡುತ್ತದೆ. 

READ : ಹೊಸನಗರ ಪೊಲೀಸ್ ಸ್ಟೇಷನ್​ ಲಿಮಿಟ್ಸ್​ನಲ್ಲೊಂದು ಪ್ರೀತಿ, ಮದುವೆ & ಆತ್ಮಹತ್ಯೆ ಯತ್ನ ಪ್ರಕರಣ!

ಅಲುಗಾಡುವ ಹುತ್ತ

ಸಹಸ್ರಾರು ಭಕ್ತರು ಅಲುಗಾಡುವ ಹುತ್ತದ ದೃಶ್ಯವನ್ನು ನೋಡಿ ಕೈಮುಗಿಯುತ್ತಾರೆ.  ಮೂರು ಶತಮಾನಗಳ ಹಿಂದೆ ತಲೆಯೆತ್ತಿರುವ ಹುತ್ತ ಇದಾಗಿದೆ ಎಂದು ನಂಬಲಾಗಿದ್ದು, ಜಾತ್ರೆಯ ವೇಳೆಯಲ್ಲಿ ಮಹಾ ಮಂಗಳಾರತಿ ಆಗುತ್ತಿದ್ದಂತೆ ಹುತ್ತವು ಕೆಲ ಸೆಕೆಂಡ್​ಗಳ ನಡುಗುತ್ತದೆ. 

ಈ ವೇಳೆ  ಹುತ್ತಕ್ಕೆ ಮಂಡಕ್ಕಿ ಎರಚಿ ಭಕ್ತರು ಹರಕೆ ತೀರಿಸುತ್ತಾರೆ. ಅಲ್ಲದೆ  ಈ ಹುತ್ತದ ಮಣ್ಣು ಹಲವು ಕಾಯಿಲೆಗಳಿಗೆ ರಾಮಬಾಣ ಅನ್ನುವ ನಂಬಿಕೆ ಇಲ್ಲಿದೆ  

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು