ಮಹಿಳೆಯಿಂದ ಲಂಚ ಪಡೆಯುತ್ತಿರುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS / ONLINE / Malenadu today/ Nov 16, 2023 SHIVAMOGGA NEWS

Shivamogga | Malnenadutoday.com |  ಲಂಚಕ್ಕೆ ಬೇಡಿಕೆಯಿತ್ತ ಬಗನಕಟ್ಟೆ ಗ್ರಾ.ಪಂ. ಪಿಡಿಓ ಮಂಜುನಾಥ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ಸಂಕ್ಲಾಪುರ ವಾಸಿ ಸಾಕಮ್ಮ ಕೋಂ ವೆಂಕಟೇಶಪ್ಪ ಎಂಬುವವರ ಮನೆಯ ಮೇಲ್ಚಾವಣಿ ಮತ್ತು ಗೋಡೆ 2021ರಲ್ಲಿ ಸುರಿದ ಮಳೆಯಿಂದ  ಕುಸಿದು ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಪುನರ್ ನಿರ್ಮಾಣಕ್ಕಾಗಿ ಪರಿಹಾರ ಧನಕ್ಕೆ ಅರ್ಜಿ ಸಲ್ಲಿಸಿದ್ದರು. 

 ಈ ಕುರಿತು ಜಿಪಿಎಸ್‍ನಲ್ಲಿ ಮಾಹಿತಿ ಸಂಗ್ರಹಿಸಿ ವರದಿ ಮಾಡಲು  ಬಗನಕಟ್ಟೆ ಗ್ರಾಮ ಪಂಚಾಯತಿ ಪಿಡಿಓ ಮಂಜುನಾಥನವರು ಸಾಕಮ್ಮರವರಿಂದ ಇಪ್ಪತ್ತು ಸಾವಿರ ರೂ.ಗಳ ಲಂಚಕ್ಕೆ ಬೇಡಿಕೆಯಿಟ್ಟು, ಅದರಲ್ಲಿ ರೂ. 13,000/- ಪಡೆದು ಬಾಕಿ ಹಣವನ್ನು ಪಡೆಯುವಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ  

READ :  ನವೆಂಬರ್​ 16 ಕ್ಕೆ ನಡೆಯಬೇಕಿದ್ದ ‘ಅಡುಗೆ ಬಂದ್’ ಹೋರಾಟ ಕೈ ಬಿಟ್ಟ ಬಿಸಿಯೂಟ ಕಾರ್ಯಕರ್ತೆಯರು ! ಕಾರಣ ಇಲ್ಲಿದೆ

ಸಾಕಮ್ಮರವರಿಗೆ ಮನೆಯ ಪುನರ್ ನಿರ್ಮಾಣ ಕಾರ್ಯಕ್ಕೆ ರಾಜೀವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ ರೂ. 5.00ಲಕ್ಷಗಳ ಪರಿಹಾರ ಧನ ಮಂಜೂರಾಗಿದೆ. ಇನ್ನೊಂದೆಡೆ ಮನೆಯ ಪುನರ್ ನಿರ್ಮಾಣ ಕಾರ್ಯ ಮುಕ್ತಾಯಗೊಂಡಿದೆ.  ನೆರೆ ಸಂತ್ರಸ್ಥರ ಪುನರ್ ವಸತಿ ಯೋಜನೆಯಂತೆ ಕಂತಿನ ಹಣ ರೂ. 1.00 ಲಕ್ಷಗಳನ್ನ ಬಿಡುಗಡೆ ಮಾಡಬೇಕಿತ್ತು. ಈ  ಸಂಬಂಧ ಪಿ.ಡಿ.ಓ ಮಂಜುನಾಥ ಮತ್ತೊಮ್ಮೆ ರೂ. 6000/- ಗಳ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಬೇಸತ್ತು ಸಾಕಮ್ಮನವರು ಶಿವಮೊಗ್ಗ ಲೋಕಾಯುಕ್ತ ಕಚೇರಿಗೆ ದೂರ ಕೊಟ್ಟಿದ್ದರು. ಈ ಬಗ್ಗೆ  ನವೆಂಬರ್​ 15 ರಂದು ಪ್ರಕರಣ ದಾಖಲಾಗಿದೆ. 

ನ. 16 ರಂದು ಬಗನಕಟ್ಟೆ ಗ್ರಾ.ಪಂ. ಪಿಡಿಓ ಮಂಜುನಾಥ ಇವರು ಸಾಕಮ್ಮರವರಿಂದ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ಬಂಧಿಸಿ, ಲಂಚದ ಹಣ ರೂ. 6000/- ವಶಪಡಿಸಿಕೊಂಡು, ಪೊಲೀಸ್ ನಿರೀಕ್ಷಕ ಪ್ರಕಾಶ್‍ರವರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ 


ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor