ಶಿವಮೊಗ್ಗದಲ್ಲಿ ಒಂದೆ ಕಡೆ ಪಟಾಕಿ ಮಾರಾಟ! ಉಳಿದ ಕಡೆ ಸೇಲ್​ ಮಾಡಿದ್ರೆ ಏನ್ಮಾಡ್ತಾರೆ ಗೊತ್ತಾ?

ಹಂಚಿಕೊಳ್ಳಿ
WhatsApp Facebook X Telegram
ಶಿವಮೊಗ್ಗದಲ್ಲಿ ಒಂದೆ ಕಡೆ ಪಟಾಕಿ ಮಾರಾಟ! ಉಳಿದ ಕಡೆ ಸೇಲ್​ ಮಾಡಿದ್ರೆ ಏನ್ಮಾಡ್ತಾರೆ ಗೊತ್ತಾ?

KARNATAKA NEWS/ ONLINE / Malenadu today/ Nov 13, 2023 SHIVAMOGGA NEWS

Shivamogga | ದೀಪಾವಳಿ  ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಎಲ್ಲೆಂದರಲ್ಲಿ ಪಟಾಕಿ ಮಾರುವಂತಿಲ್ಲ. ಪಟಾಕಿಯನ್ನು ಮಾರಲು ಒಂದೆ ಸ್ಥಳದಲ್ಲಿ ಅನುಮತಿ ನೀಡಲಾಗಿದ್ದು, ಶಿವಮೊಗ್ಗದ ಪ್ರೀಡಂಪಾರ್ಕ್ ನಲ್ಲಿನ ಸ್ಟಾಲ್​ಗಳಲ್ಲಿ ಪಟಾಕಿ ಮಾರಾಟ ಮಾಡಲಾಗುತ್ತಿದೆ. 

ಇದರ ನಡುವೆ  ಅಕ್ರಮ ಪಟಾಕಿ ಮಾರಾಟ ಮಳಿಗೆ ಮೇಲೆ ಪೊಲೀಸರು ದಾಳಿ ನಡಸಿದ್ದಾರೆ. ಜನ ವಸತಿ ಪ್ರದೇಶದಲ್ಲಿ ಪಟಾಕಿ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಶಿವಮೊಗ್ಗದ ಗಾಂಧಿ ಬಜಾರ್ ನಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.  

READ :  ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾದ ಅಪ್ರಾಪ್ತ ಬಾಲಕಿ! ನಡೆದಿದ್ದೇನು?

 

ಶಿವಮೊಗ್ಗ ತಹಶಿಲ್ದಾರ್ ನಾಗರಾಜ್ ನೇತೃತ್ವದಲ್ಲಿ ದಾಳಿ ನಡೆಸಿದ ದೊಡ್ಡಪೇಟೆ ಪೊಲೀಸರು, ಅಂಗಡಿಯೊಂದರಲ್ಲಿ ಸಂಗ್ರಹಿಸಿಟ್ಟಿದ್ದ ಪಟಾಕಿಗಳನ್ನು ವಶಕ್ಕೆ ಪಡೆದಿದ್ಧಾರೆ.  

ಪಟಾಕಿ ಮಾರಾಟದ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ತಡೆಯಲು ಫ್ರೀಡಂ ಪಾರ್ಕ್ ನಲ್ಲಿ ಪಟಾಕಿ ಮಾರಾಟ ಮಾಡಲು ಜಿಲ್ಲಾಡಳಿತ ಅವಕಾಶ ನೀಡಿದೆ. ಈ ನಿಯಮ ಮೀರಿ ಗಾಂಧಿಬಜಾರ್​ನಲ್ಲಿ ಪಟಾಕಿ ಮಾರಲು ಮುಂದಾಗಿದ್ದರು. ಅಂತಹ ಅಂಗಡಿ ಮೇಲೆ ದಾಳಿ ನಡೆಸಿ ಪಟಾಕಿ ಜಪ್ತಿ ಮಾಡಲಾಗಿದೆ 

READ : ತುಂಗಾ ನಗರ ಪೊಲೀಸ್ ಸ್ಟೇಷನ್​ ರೌಡಿಶೀಟರ್​ ಬಚ್ಚನ್​ಗೆ ಶಾಕ್​ ! ಕೋರ್ಟ್​ ನಿಂದ ಶಿಕ್ಷೆ ! ಏನಿದು ಪ್ರಕರಣ?

 


ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor