ಅಪ್ರಾಪ್ತನಿಗೆ ಏಳು ವರ್ಷ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್! ಕಾರಣವೇನು?

KARNATAKA NEWS/ ONLINE / Malenadu today/ Nov 10, 2023 SHIVAMOGGA NEWS

Shivamogga | ಶಿವಮೊಗ್ಗ ಜಿಲ್ಲೆಯ FTSC-1  ನ್ಯಾಯಾಲಯ ಅಪ್ರಾಪ್ತನಿಗೆ ಅತ್ಯಾಚಾರ ಕೇಸ್​ನಲ್ಲಿ ಏಳು ವರ್ಷ ಶಿಕ್ಷೆ ವಿಧಿಸಿದೆ. 2021 ರ ಸಾಲಿನಲ್ಲಿ ನಡೆದ ಪ್ರಕರಣ ಇದಾಗಿದ್ದು ಅಪ್ತಾಪ್ತನೊಬ್ಬ ಪುಟಾಣಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. (ವೈಯಕ್ತಿಕ ಮಾಹಿತಿ ಗೌಪ್ಯವಾಗಿಡಲಾಗಿದ್ದು ಪೊಲೀಸ್ ಇಲಾಖೆ ಪ್ರಕಟಣೆಯನ್ನಷ್ಟೆ ವರದಿ ಆಧರಿಸಿದೆ )

READ : ಜೆಪಿ ನಗರದಲ್ಲಿ ರೌಡಿಶೀಟರ್​ಗಳ ನಡುವೆ ಕಾದಾಟ! ಮೂವರಿಗೆ ಇರಿತ! ನಡೆದಿದ್ದೇನು?

ಈ ಸಂಬಂಧ ಶಿವಮೊಗ್ಗ ಜಿಲ್ಲೆ ತಾಲ್ಲೂಕು ಒಂದರ ಠಾಣೆ ಪೊಲೀಸರು ಚಾರ್ಜ್​ಶೀಟ್​ ಸಲ್ಲಿಸಿದ್ದರು. ಪ್ರಕರಣ ಸಂಬಂಧ  ಹರಿಪ್ರಸಾದ್ ಮತ್ತು ಶ್ರೀಮತಿ ಮಮತ ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದರು. 

ಶಿವಮೊಗ್ಗದ FTSC-1  ನ್ಯಾಯಲಯದಲ್ಲಿ ಪ್ರಕರಣದ ವಿಚಾರಣೆ ನಡೆದು, ಕಾನೂನು ಸಂಘರ್ಷಕ್ಕೊಳಗಾದ  ಬಾಲಕನ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧಿಶರಾದ ಲತಾ ರವರು ದಿನಾಂಕಃ 09-11-2023 ರಂದು ಕಾನೂನು ಸಂಘರ್ಷಕ್ಕೊಳಗಾದ ಬಾಲಕನಿಗೆ 07 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 10,000/-  ರೂ ದಂಡ, ದಂಡ ಕಟ್ಟಲು ವಿಫಲನಾದಲ್ಲಿ ಹೆಚ್ಚುವರಿ 1 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ.


Leave a Comment