KARNATAKA NEWS/ ONLINE / Malenadu today/ Nov 10, 2023 SHIVAMOGGA NEWS
Politics | ಶಿವಮೊಗ್ಗದ ರಾಜಕಾರಣ ಕೆಪಿಸಿಸಿ ಅಧ್ಯಕ್ಷರವರೆಗೂ ಹೋಗಿ ತಲುಪಿದೆ. ಉಸ್ತುವಾರಿ ಸಚಿವ ಮಧು ಬಂಗಾರಪ್ಪರವರ ವಿರುದ್ಧ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣರವರ ವಿರುದ್ಧ ಬಹಿರಂಗವಾಗಿಯೇ ಹರಿಹಾಯುತ್ತಿದ್ದಾರೆ. ಈ ವಿಚಾರವಾಗಿ ಮಧು ಬಂಗಾರಪ್ಪರವರ ವಿರುದ್ಧ ಮಾತನಾಡುತ್ತಿರುವ ಬೇಳೂರು ಗೋಪಾಲಕೃಷ್ಣರವರ ಬಗ್ಗೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ – ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕಾಂಗ್ರೆಸ್ ಮುಖಂಡರ ನಿಯೋಗವು ದೂರು ನೀಡಿದೆ.
READ : ಜೆಪಿ ನಗರದಲ್ಲಿ ರೌಡಿಶೀಟರ್ಗಳ ನಡುವೆ ಕಾದಾಟ! ಮೂವರಿಗೆ ಇರಿತ! ನಡೆದಿದ್ದೇನು?
ಮಾಜಿ ಎಂಎಲ್‌ಸಿ ಪ್ರಸನ್ನ ಕುಮಾರ್, ಶಿಕಾರಿಪುರ ಕಾಂಗ್ರೆಸ್ ಮುಖಂಡ ನಾಗರಾಜ್‌ಗೌಡ, ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಡಬ ರಾಘವೇಂದ್ರ, ಕೆಪಿಸಿಸಿ ಸದಸ್ಯ ರುದ್ರನಗೌಡ್ರು, ಶಾಂತವೀರ್ ನಾಯಕ್, ಕಲಗೋಡ್ ರತ್ನಾಕರ್, ಎನ್. ರಮೇಶ್ ಸೇರಿದಂತೆ ಹಲವರು ಡಿಕೆಶಿಯವರಿಗೆ ದೂರು ನೀಡಿದ್ದಾರೆ.
ಬೇಳೂರು ಹೇಳಿಕೆಗಳಿಂದ ಪಕ್ಷಕ್ಕೆ ಮುಜುಗರ ಆಗುತ್ತಿದೆ. ಮಧು ಬಂಗಾರಪ್ಪರ ವಿರುದ್ಧ ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಇಲ್ಲವಾದರೆ, ಪಕ್ಷಕ್ಕೆ ಮುಜುಗರವಾಗುತ್ತದೆ. ಎಂದು ನಿಯೋಗ ಮನವಿ ಮಾಡಿದೆ.
READ : ಕರುಳ ಕುಡಿಗಳ ಕೈಗಳನ್ನು ಬಿಕ್ಷೆಗೆ ಒಡ್ಡಿದ ತಾಯಿ! ರಿಪ್ಪನ್ಪೇಟೆಯಲ್ಲಿ ನಡೀತು ಮನಸ್ಸಿಗೆ ನೋವಾಗುವಂತಹ ಘಟನೆ
ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣರವರು ತಮ್ಮ ವಿರುದ್ಧ ಯಾರು ಬೇಕಾದರೂ ದೂರು ನೀಡಲಿ, ಅದಕ್ಕೆಲ್ಲ ಹೆದರಲ್ಲ. ತಮ್ಮ ಹೇಳಿಕೆ ಕುರಿತು ಪಕದ ಮುಖಂಡರು ಸ್ಪಷ್ಟನೆ ಕೇಳಿದರೆ ಅವರಿಗೆ ಉತ್ತರ ನೀಡುತ್ತೇನೆ ಎಂದು ಹೇಳಿದ್ದಾರೆ.