KARNATAKA NEWS/ ONLINE / Malenadu today/ Nov 4, 2023 SHIVAMOGGA NEWS
SHIVAMOGGA | ಮನುಷ್ಯನೊಬ್ಬ ಯಾವ ಪ್ರಾಣಿಯ ಕಾಟವನ್ನಾದರು ಸಹಿಸಿಕೊಳ್ಳುತ್ತಾನೆ. ಅದರಿಂದ ಪಾರಾಗಿ ಹೊರಕ್ಕೆ ಬರುತ್ತಾನೆ. ಆದರೆ ಮನುಷ್ಯರಿಂದಲೇ ಆಗುವ ತೊಂದರೆಯಿಂದ ಹೊರಕ್ಕೆ ಬರಲಾರ. ಇದಕ್ಕೆ ಸಾಕ್ಷಿ ಎಂಬಂತ ಘಟನೆಯೊಂದು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಹೊಸಮನೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದೆ.
READ : ಶಿವಮೊಗ್ಗ ಲೋಕಸಭಾ ಚುನಾವಣೆ | ಬೇಳೂರು ಗೋಪಾಲಕೃಷ್ಣ ಬಳಿಕ ನಾನು ಸಹ ಆಕಾಂಕ್ಷಿ ಎಂದ ಮತ್ತೊಬ್ಬ ಮುಖಂಡ
ದೂರುದಾರರು, ದಾವಣಗೆರೆಯಿಂದ ತಮ್ಮ ಕೆಲಸ ಮುಗಿಸಿಕೊಂಡು ಬಂದು, ಮನೆ ಹತ್ತಿರ ತಮ್ಮ ಬೈಕ್ ನಿಲ್ಲಿಸಿದ್ದರು. ಮಧ್ಯರಾತ್ರಿಯವರೆಗೂ ಬೈಕ್ ಇದ್ದಲ್ಲಿಯೇ ಇರುವುದನ್ನ ಗಮನಿಸಿದ್ದಾರೆ. ಆದರೆ ಆನಂತರ ಬೈಕ್ಗೆ ಇದ್ದಕ್ಕಿದ್ದ ಹಾಗೆ ಬೆಂಕಿ ಬಿದ್ದಿದೆ. ಈ ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಹೋಗಿ ನೋಡಿದರೆ ಬೈಕ್ ಸುಟ್ಟು ಕರಲಾಗಿತ್ತು.
ಇದ್ದಕ್ಕಿದ್ದ ಹಾಗೆ ಆಕಸ್ಮಿಕವಾಗಿ ಬೈಕ್ಗೆ ಬೆಂಕಿ ಬೀಳಲು ಸಾಧ್ಯವಿಲ್ಲ. ಯಾರೋ ಉದ್ದೇಶಪೂರ್ವಕವಾಗಿಯೇ ಈ ಕೃತ್ಯವೆಸಗಿದ್ದಾರೆ ಎಂಬುದು ಗೊತ್ತಾಗಿದೆ. ಈ ಸಂಬಂಧ ಸದ್ಯ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ಬೈಕ್ಗೆ ಬೆಂಕಿ ಇಟ್ಟ ಹಿಂದಿನ ದ್ವೇಷಕಾರರನ್ನು ಹುಡುಕಾಡುತ್ತಿದ್ದಾರೆ.