ಮಲೆನಾಡ ಮಣ್ಣಿನ ಕಾಂತಾರ ಕಥೆ ಹೇಳುತ್ತಿದ್ಯಾ ಜಲಪಾತ!? ಏನಿದು ಸಿನಿಮಾ?

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Oct 9, 2023 SHIVAMOGGA NEWS

ಅಪ್ಪಟ ಮಲೆನಾಡಿನ ಚಿತ್ರವೊಂದು ಇದೇ ಅಕ್ಟೋಬರ್ 13 ರಂದು ರಿಲೀಶ್ ಆಗುತ್ತಿದೆ. ಶಿವಮೊಗ್ಗದ ಭಾರತ್ ಸಿನಿಮಾಸ್​ನಲ್ಲಿ ವಿಶೇಷವಾಗಿ ತೀರ್ಥಹಳ್ಳಿಯಲ್ಲಿ ವೆಂಕಟೇಶ್ವರ್ ಚಿತ್ರಮಂದಿರದಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. 

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಕಟ್ಟೆಹಕ್ಕಲಿನ ರವೀಂದ್ರ  ತುಂಬರಮನೆ  ವಿಷಯ ವಿನ್ಯಾಸ ಕೈಗೊಂಡು  ನಿರ್ಮಿಸಿರುವ  ಪರಿಸರ ಕಾಳಜಿಯ ಜಲಪಾತ  ಇದೇ  ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. 

ಮಲೆನಾಡು  ಶೈಲಿಯ  ಚಿತ್ರದಲ್ಲಿ ಮಲ್ನಾಡ್​ ಪ್ರತಿಭೆಗಳ ದೊಡ್ಡ ದಂಡೆ ಅಭಿನಯಿಸಿದೆ.  ನಿರ್ದೇಶಕ  ರಮೇಶ್ ಬೇಗಾರ್ ರವರ ನಿರ್ದೇಶನದಲ್ಲ   ಮಲೆನಾಡಿನ ಪರಿಸರ ನಾಶಕ್ಕೆ ಕಾರಣವಾದ ವಿಚಾರಗಳನ್ನು  ಫ್ಯಾಮಿಲಿ ಡ್ರಾಮಾದ ಮೂಲಕ ಹೇಳಲಾಗಿದೆ. 

 ಪ್ರಸಿದ್ಧ ನಟ ಪ್ರಮೋದ್ ಶೆಟ್ಟಿ ಅವರು ಅತ್ಯಂತ ವಿಭಿನ್ನ ಪಾತ್ರವೊಂದರಲ್ಲಿ ಅಭಿನಯಿಸಿದ್ದು,   ಪದವಿ ಪೂರ್ವ ಸಿನಿಮಾ ಖ್ಯಾತಿಯ  ರಜನೀಶ್  ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ್ದು  ಶೃಂಗೇರಿಯ ರಂಗಪ್ರತಿಭೆ ನಾಗಶ್ರೀ ಬೇಗಾರ್  ನಾಯಕಿಯಾಗಿದ್ದಾರೆ.

 

ಶಶೀರ ಶೃಂಗೇರಿ  – ಛಾಯಾಗ್ರಹಣ  , ಅವಿನಾಶ್  ಶೃಂಗೇರಿ  – ಸಂಕಲನ  , ಸಾದ್ವಿನಿ ಕೊಪ್ಪ  ಸಂಗೀತ ನಿರ್ದೇಶನ ವನ್ನು ಚಿತ್ರ ಹೊಂದಿದೆ.   ಬಿ ಎಲ್ ರವಿಕುಮಾರ್    , ಎ ಎಸ್ ನಯನ , ನಟರಾಜ್ ತೋರಣ ಗದ್ದೆ  , ಎಮ್ ಆರ್ ಸುರೇಶ್ , ರೇಖಾ ಪ್ರೇಂ ಕುಮಾರ್  , ಚಂದ್ರಶೇಖರ ತುಂಬರಮನೆ  , ಸ್ವಾತಿ ಶಶಿ ಭೂಷಣ್  , ಸುನೀತಾ ನವೀನ್  , ವೈಶಾಲಿ  ಮೊದಲಾದ  ರಂಗಭೂಮಿ  ಕಲಾವಿದರು ಬಣ್ಣ ಹಚ್ಚಿದ್ದಾರೆ.

ಚಿತ್ರದ ಪರಿಸರ ಗೀತೆಯೊಂದನ್ನು ಪ್ರಸಿದ್ಧ  ಗಾಯಕ ವಿಜಯಪ್ರಕಾಶ್ ಹಾಡಿದ್ದು ವನಿತಾ ವೆಂಕಟೇಶ್  ಮತ್ತು ಮಧುರ ಕವಿಲುಕೊಡಿಗೆ  ಸಾಹಿತ್ಯವಿದೆ.  


ಇನ್ನಷ್ಟು ಸುದ್ದಿಗಳು 

  1. ಅಭಯ್ ಪ್ರಕಾಶ್ ಸಸ್ಪೆಂಡ್ ಪೊಲೀಸ್ ಇಲಾಖೆಯ ವೈಫಲ್ಯವೇ? ಹೀಗೆ ಮಾಡುವುದಾದರೆ ಹಲವರು ಅಮಾನತ್ತಲ್ಲಿರಬೇಕಿತ್ತಲ್ಲವೇ? ಯಾವ ತಪ್ಪಿಗೆ ಈ ಶಿಕ್ಷೆ? JP ಬರೆಯುತ್ತಾರೆ

  2. FACEBOOK , INSTAGRAM ಪೋಸ್ಟ್ ಹಾಕಬೇಕಾದರೆ ಹುಷಾರ್! ಬೀಳುತ್ತೆ ಕೇಸ್​! social media monitoring ಮಾಡುತ್ತಿದೆ ಶಿವಮೊಗ್ಗ ಪೊಲೀಸ್ ಇಲಾಖೆ

  3. ಈ ಹಾವು ನಿಮ್ಮ ಕಣ್ಣಿಗೆ ಬಿದ್ದಿತ್ತಾ? ಇದನ್ನ ಏನಂದು ಕರೆಯುತ್ತಾರೆ? ಈ ಹಾವಿನ ಮೈಮೇಲೆ ನೀರು ಇಂಗುತ್ತೆ ಗೊತ್ತಾ?


 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor