RM ಮಂಜುನಾಥ್​ ಗೌಡರ ವಿರುದ್ಧ ED ಅಸ್ತ್ರಕ್ಕೆ ಕಾರಣವೇನು? ಸಿಕ್ಕಿದ್ದೇನು? ಸಿಗದಿದ್ದೇನು?

KARNATAKA NEWS/ ONLINE / Malenadu today/ Oct 7, 2023 SHIVAMOGGA NEWS

 

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಪ್ತ ಎಂದೇ ಬಿಂಬಿತವಾಗಿರುವ ಆರ್​ ಎಂ ಮಂಜುನಾಥ್ ಗೌಡರ  ನಿವಾಸಗಳ ಮೇಲೆ ಇಡಿ ದಾಳಿಯಾಗಿದೆ. ಈ ದಾಳಿಯನ್ನು ರಾಜಕೀಯ ಪ್ರೇರಿತ ದಾಳಿ ಎಂದು ಕಾಂಗ್ರೆಸ್ ಆರೋಪಿಸಿದೆ . ಇನ್ನೊಂದೆಡೆ ದಾಳಿಯ ರೂಪು ರೇಷೆಗಳ ಕಳೆದ ಜುಲೈನಲ್ಲಿಯಲ್ಲಿಯೇ ತಯಾರಾಗಿತ್ತು ಎಂಬ ಸುದ್ದಿ ಮಲೆನಾಡು ಟುಡೆ ವರದಿ ಮಾಡಿತ್ತು. 

 

R M MANJUNATH GOWDA ರವರ ಮನೆಗಳ ಮೇಲೆ ED ದಾಳಿಗೆ ಕಾರಣವೇನು? ಏನಿದು ಪ್ರಕರಣ?

 

ದಾಳಿ ಹಿಂದಿನ ರಾಜಕಾರಣ/ ಈ ನಿಟ್ಟಿನಲ್ಲಿ ದೇಶ ಹಾಗೂ ರಾಜ್ಯ ಮಟ್ಟದಲ್ಲಿ ತನಿಖಾ ಸಂಸ್ಥೆಗಳನ್ನು ಬಳಕೆ ಮಾಡಿಕೊಂಡು ರಾಜಕೀಯ ಎದು ರಾಳಿಗಳನ್ನು ಹಣಿಯಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿರುವುದರ ಬೆನ್ನಲ್ಲೇ ಶಿವಮೊಗ್ಗ ಜಿಲ್ಲೆಯಲ್ಲಿಯೂ ಅದರ ಪ್ರಯೋಗಾರ್ಥ ಪರೀಕ್ಷೆ ಯನ್ನು ನಡೆಸಲಾಗಿದೆಯಾ ಎಂಬ ಅನುಮಾನವೊಂದು ಮೂಡುತ್ತಿದೆ. 

 

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ್‌ ಗೌಡರ ಮನೆ ಹಾಗೂ ಕಚೇರಿ ಮೇಲೆ ಇಡಿ ದಾಳಿ ನಡೆಸಿ  ಹಗಲು ರಾತ್ರಿ ಶೋಧ ನಡೆಸಿದ್ದರೂ, ಆರ್ಥಿಕ ಅಪರಾಧಕ್ಕೆ ಸಂಬಂಧಿತ ಯಾವುದೇ ದಾಖಲೆ ಸಿಗಲಿಲ್ಲ ಎಂದು ಹೇಳಲಾಗುತ್ತಿದೆ. ಮಂಜುನಾಥ್‌ಗೌಡರ ಕಚೇರಿ, ಶಿವಮೊಗ್ಗ ತೀರ್ಥಹಳ್ಳಿ ಹಾಗೂ ಕರಕುಚ್ಚಿಯ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡಿದ್ದ ಇಡಿ ಅಧಿಕಾರಿಗಳು ಗುರುವಾರ ಹಗಲು ರಾತ್ರಿ ಶೋಧ ಮಾಡಿದ್ದಾರೆ. ಯಾವ ಮನೆಯಲ್ಲಿಯೂ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವುದೇ ದಾಖಲೆ ಸಿಕ್ಕಿಲ್ಲ ಎಂದು ಹೇಳಲಾಗಿದೆ. 

 

ದಾಳಿ ನಡೆಸಿರುವ ಮೂರು ಕಡೆ ಯಾವುದೇ ದಾಖಲೆ ವಶಪಡಿಸಿಕೊಂಡಿಲ್ಲ ಎಂದು ಇಡಿ ಅಧಿಕಾರಿಗಳು ಪತ್ರಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ ರಾಜಕೀಯ ಕಾರಣಕ್ಕೆ ಇಡಿ ದಾಳಿ ನಡೆಸಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಜಿಲ್ಲೆಯಾದ್ಯಂತ ಕಾಂಗ್ರೆಸ್‌ ಕಾರ್ಯಕರ್ತರು ಸೇರಿದಂತೆ ಸಹಕಾರಿ ಕ್ಷೇತ್ರದ ಪ್ರತಿನಿಧಿಗಳು ಕೇಂದ್ರ ಸರಕಾರದ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. 

 

ಮಂಜುನಾಥ್‌ಗೌಡರು ಅಧ್ಯಕ್ಷ ರಾಗಿದ್ದ ಅವಧಿಯಲ್ಲಿ ಡಿಸಿಸಿ ಬ್ಯಾಂಕ್ ನಗರ ಶಾಖೆಯಲ್ಲಿ ನಕಲಿ ಬಂಗಾರ ಅಡವಿಟ್ಟು ಅದರ ಮೇಲೆ ಸಾಲ ನೀಡುವ ಮೂಲಕ ಅಕ್ರಮ ಎಸಗಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಹಿಂದಿನ ಸರಕಾರದ ಅವಧಿಯಲ್ಲಿ ಈ ಪ್ರಕರಣ ಭಾರೀ ಸದ್ದು ಮಾಡಿದ್ದು, ಮಂಜುನಾಥ್ ಗೌಡರ ನಿರ್ದೇಶಕತ್ವವನ್ನೇ ಅನರ್ಹಗೊಳಿಸಲಾಗಿತ್ತು.

 

ನಿರಂತರವಾಗಿ ನಡೆದ ನ್ಯಾಯಾಂಗ ಹೋರಾಟದಲ್ಲಿ ಮಂಜುನಾಥ ಗೌಡರು ಮತ್ತೆ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿದ್ದಲ್ಲದೆ, ಅವಿರೋಧವಾಗಿ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದಾರೆ. ರಾಜ್ಯ ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷರೂ ಆಗಿರುವ ಮಂಜುನಾಥ್‌ ಗೌಡರು ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಹೆಸರು ಹೊಂದಿದ್ದು, ಶಿವಮೊಗ್ಗ ಡಿಸಿಸಿ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಈ ಕಾರಣದಿಂದ ಅವರು ಈಗ ಆರನೇ ಬಾರಿಗೆ ಆ ಬ್ಯಾಂಕಿನ ಅಧ್ಯಕ್ಷರಾಗಿ ದ್ದಾರೆ. 

 

ಮುಂದೆ ?/ ಮಂಜುನಾಥ್ ಗೌಡರು ಮೊದಲು ಎಲ್ಲಾ ರಾಜಕೀಯ ಪಕ್ಷದ ನಾಯಕರೊಂದಿಗೆ ಉತ್ತಮ ಬಾಂದವ್ಯ ಹೊಂದಿದ್ದರು. ಆದರೆ ಅವರೇ ಸ್ವತಃ ರಾಜಕೀಯಕ್ಕೆ ಬಂದ ಮೇಲೆ ಅವರನ್ನು ಕಟ್ಟಿಹಾಕುವ ಪ್ರಯತ್ನ ಮೇಲಿಂದ ಮೇಲೆ ನಡೆಯುತ್ತಿದೆ.  ತೀರ್ಥಹಳ್ಳಿ ವಿಧಾನ ಸಭೆ ಕ್ಷೇತ್ರದಿಂದ ಎರಡು ಬಾರಿ ಗೆಲುವಿನ ಹತ್ತಿರಕ್ಕೆ ಬಂದು ಸೋತವರು  ರಾಜಕೀಯವಾಗಿ ಪ್ರಾಬಲ್ಯ ಹೊಂದಿರುವ ಗೌಡರನ್ನು ಮುಂಬರುವ ಲೋಕ ಸಭೆ ಚುನಾವಣೆ ಹೊತ್ತಲ್ಲಿ ಕಟ್ಟಿಹಾಕುವ ಉದ್ದೇಶದಿಂದಲೇ ಈ ದಾಳಿ ನಡೆದಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. 

ಸಹಕಾರ ಕ್ಷೇತ್ರದ ಮೂಲಕ ಜಿಲ್ಲೆಯಾದ್ಯಂತ ಬೆಂಬಲಿಗರ ಜಾಲ ಹೊಂದಿರುವ ಮಂಜುನಾಥ್‌ ಗೌಡರು ಯಾವುದೇ ಚುನಾವಣೆ  ಪ್ರಮುಖ ಪಾತ್ರನಿರ್ವಹಿಸಬಲ್ಲರು. ಹೀಗಾಗಿ  ಇಡಿ ದಾಳಿ ಮೂಲಕ ಅವರನ್ನು ತಡೆಯುವ ಪ್ರಯತ್ನ ನಡೆದಿದೆ ಎಂಬುದು ಆರೋಪ. ಸದ್ಯ ಈ ರಾಜಕಾರಣ ಯಾವ ಮಜಲು ಪಡೆದುಕೊಳ್ಳುತ್ತದೆ ಎಂಬುದನ್ನ ಕಾದು ನೋಡಬೇಕಿದೆ. 


 

ಇನ್ನಷ್ಟು ಸುದ್ದಿಗಳು 

 

  1.  R M MANJUNATH GOWDA ರವರ ಮನೆಗಳ ಮೇಲೆ ED ದಾಳಿಗೆ ಕಾರಣವೇನು? ಏನಿದು ಪ್ರಕರಣ?

  2. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಮಹತ್ವದ ಪ್ರಕಟಣೆ! ಶಿವಮೊಗ್ಗದಲ್ಲಿಯೇ ನೋಂದಣಿ ಮಾಡಿಕೊಳ್ಳಿ

  3. ಶಿವಮೊಗ್ಗ ಮತ್ತೆ ಆಗುತ್ತಾ ಪವರ್ ಸೆಂಟರ್! ನವರಾತ್ರಿ ನಂತರ ಏನಾಗುತ್ತೆ? ರಾಜ್ಯ ರಾಜಕಾರಣದ ಕುತೂಹಲದ ಸುದ್ದಿ


 

 

Leave a Comment