ಎನ್​ಕೌಂಟರ್​ ಅಂತಾ ಸುಳ್ಳು ಸುದ್ದಿ ಹರಡುತ್ತಿರುವವರಿಗೆ ಲಾಸ್ಟ್​ ವಾರ್ನಿಂಗ್​ ಕೊಟ್ಟ ಮಿಥುನ್ ಕುಮಾರ್!ಸಾಕ್ಷಿ ಸಮೇತ ಎಸ್​ಪಿ ಹೇಳಿದ್ದೇನು?

KARNATAKA NEWS/ ONLINE / Malenadu today/ Oct 3, 2023 SHIVAMOGGA NEWS

ಶಿವಮೊಗ್ಗದ ರಾಗಿಗುಡ್ಡದಲ್ಲಿ ಯಾವುದೇ ವ್ಯಕ್ತಿಯ ಎನ್​ಕೌಂಟರ್ ಆಗಿಲ್ಲ. ಈ ಬಗ್ಗೆ ಯಾವುದೇ ಫೇಕ್​ ನ್ಯೂಸ್ ಹರಡಬೇಡಿ ಎಂದು ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದಾರೆ. ಈ ಸಂಬಂಧ ಸ್ಪಷ್ಟನೆ ನೀಡಿರುವ ಇಂತಹ ಸುಳ್ಳು ಸುದ್ದಿ ಹರಡಿಸುವ ಪ್ರಯತ್ನ ಮಾಡಿದರೇ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಟ್ರಿಟ್ ಆಗಿ ಹೇಳಿದ್ದಾರೆ. 

ಯಾರೋ ವ್ಯಕ್ತಿಯೊಬ್ಬ  ಎಲ್ಲಿಯೋ ಬಿದ್ದಿರುವ ದೃಶ್ಯವನ್ನು ವಾಟ್ಸಾಪ್ ಮಾಡಿ ಅದು ಎನ್​ಕೌಂಟರ್ ಎಂದು ಸುಳ್ಳು ಹರಡುತ್ತಿದ್ದಾರೆ. ಅದರ ಚಿತ್ರ ಸಮೇತ ಪೋಸ್ಟ್ ಮಾಡಿರುವ ಎಸ್​ಪಿ ಮಿಥುನ್ ಕುಮಾರ್, ಈ ರೀತಿಯ ಫೇಕ್ ನ್ಯೂಸ್ ಯಾರು ಸಹ ಹರಡ ಬಾರದು ಎಂದು ನೇರವಾಗಿ ಹೇಳಿದ್ದಾರೆ ಅಲ್ಲದೆ ಇಂತಹ ಸುಳ್ಳುಸುದ್ದಿ ಹರಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ 

ಇನ್ನೂ ಈಗಾಗಲೇ ಫೋಟೋವೊಂದನ್ನು ಹಂಚಿಕೊಂಡು ಈ ರೀತಿಯಾಗುತ್ತಿದೆ ಎಂದು ಸುಳ್ಳು ಸುದ್ದಿ ಮೂಲಕ ಪ್ರಚೋದನೆ ನೀಡುತ್ತಿದ್ದ ವ್ಯಕ್ತಿವಿರುದ್ದ ಎಫ್ಐಆರ್ ದಾಖಲಿಸುವುದಾಗಿಯು ಎಸ್​ಪಿ ಮಿಥುನ್ ಕುಮಾರ್ ತಿಳಿಸಿದ್ಧಾರೆ 


ಇನ್ನಷ್ಟು ಸುದ್ದಿಗಳು 

  1.  ರಾಗಿಗುಡ್ಡದಲ್ಲಿ ಪರಿಸ್ಥಿತಿ ತಿಳಿಗೊಳಿಸಲು ತೆರಳಿದ್ದ ಎಸ್​ಪಿ ಮತ್ತು ಪೊಲೀಸರ ಮೇಲೆ ಕಲ್ಲು ! ಸ್ಥಳದಲ್ಲಿ 144 ಸೆಕ್ಷನ್​ ಜಾರಿ! ಲಾಠಿ ಪ್ರಹಾರ

  2. ನಮಗೆ ಬೆಲೆ ಇರುತ್ತಲ್ಲ ಎಂದು ಪ್ರಶ್ನಿಸಿದ ಬಾಲಕಿ! ಶಿಕ್ಷಕರ ಹಾಗೆ ವಿದ್ಯಾರ್ಥಿನಿಗೆ ಅರ್ಥ ಮಾಡಿಸಿದ ಸಚಿವ! ವೈರಲ್​ ಆಯ್ತು ವಿಡಿಯೋ!


 

Leave a Comment