KARNATAKA NEWS/ ONLINE / Malenadu today/ Sep 25, 2023 SHIVAMOGGA NEWS’
ಅತ್ತ ಕಾವೇರಿಗಾಗಿ ಹೋರಾಟ ನಡೆಯುತ್ತಿರುವ ಬೆನ್ನಲ್ಲೆ ಇದೀಗ ಭದ್ರಾ ನೀರಿಗಾಗಿ ಹೋರಾಟ ಆರಂಭವಾಗಿದೆ. ಶಿವಮೊಗ್ಗದ ನೆರೆಯ ಜಿಲ್ಲೆ ದಾವಣಗೆರೆಯಲ್ಲಿಂದ ಭದ್ರಾ ಜಲಾಶಯದಿಂದ ಬಲದಂಡೆ ಮತ್ತು ಎಡದಂಡೆ ನಾಲೆಗಳಿಗೆ ಸತತ 100 ದಿನ ಕಾಲ ನೀರು ಬಿಡದಿರುವ ನಿರ್ಧಾರ ಖಂಡಿಸಿ ಇಂದು ರೈತರು ಪ್ರತಿಭಟನೆ ನಡೆಸಲಿದ್ದಾರೆ. ಅಲ್ಲದೆ ದಾವಣಗೆರೆ ಜಿಲ್ಲಾ ಬಂದ್ಗೆ ಕರೆ ನೀಡಲಾಗಿದೆ
ಭದ್ರಾ ಕಾಡಾ ಸಮಿತಿ 40 ದಿನಕ್ಕೆ ನೀರು ಬಂದ್ ಮಾಡಿ ದಾವಣಗೆರೆ ಜಿಲ್ಲೆಯ ಅಚ್ಚುಕಟ್ಟು ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ರೈತರು ಆರೋಪಿಸಿದ್ದು. 1.25 ಲಕ್ಷ ಎಕರೆಯಲ್ಲಿ ಭತ್ತದ ಬೆಳೆ ಒಣಗಿ ರೈತರು ನಷ್ಟ ಅನುಭವಿಸುವ ಆತಂಕ ಎದುರಾಗಿದೆ ಎಂದು ಆರೋಪಿಸಿದ್ದಾರೆ. ಇದನ್ನು ಖಂಡಿಸಿ ಬಂದ್ ನಡೆಸಲಾಗುತ್ತಿದೆ ಎಂದು ಭಾರತೀಯ ರೈತ ಒಕ್ಕೂಟ ಹೇಳಿಕೊಂಡಿದೆ.
ಬಲದಂಡೆ, ಎಡದಂಡೆನಾಲೆಗಳಿಗೆ ವರ್ಷದಲ್ಲಿ 100 ದಿನ ನೀರು ಹರಿಸಬೇಕು. ಆದರೆ ಈ ಬಾರಿ 40 ದಿನಕ್ಕೇ ನೀರು ಮಾಡಲಾಗಿದೆ. ಇದರಿಂದ 1.25 ಲಕ್ಷ ಎಕರೆ ಪ್ರದೇಶದ ಭತ್ತ ಒಣಗುವ ಆತಂಕ ರೈತರಿಗೆ ಎದುರಾಗಿದೆ.ಹೀಗಾಗಿ ದಾವಣಗೆರೆಯಲ್ಲಿ ಆಕ್ರೋಶ ಬುಗಿಲೆದ್ದಿದೆ. ಭದ್ರಾವತಿ ಭಾಗದ ಅಚ್ಚುಕಟ್ಟು ರೈತರಲ್ಲದವರ ಒತ್ತಡಕ್ಕೆ ಮಣಿದು, ನೀರು ನಿಲ್ಲಿಸಲಾಗಿದೆ ಎಂಬುದು ರೈತ ಒಕ್ಕೂಟದ ಆರೋಪವಾಗಿದೆ
ಭದ್ರಾ ಡ್ಯಾಂನಲ್ಲಿ ಈಗ ಸಂಗ್ರಹವಿರುವ ನೀರಿನಲ್ಲಿ ಮಳೆಗಾಲದ ಬೆಳೆಗೆ ನೀರು ಬಿಟ್ಟರೂ ಬೇಸಿಗೆ ನೀರಿಗೆ ಸಮಸ್ಯೆ ಆಗದು. 8.43 ಟಿಎಂಸಿ ನೀರು ಬಳಕೆಗೆ ಸಿಗಲಿದೆ. ಹಿಂದೆ ಇದಕ್ಕಿಂತಲೂ ಕಡಿಮೆ ನೀರಿದ್ದಾಗಲೂ ಮಳೆಗಾಲದ ಬೆಳೆಗೆ ನೀರು ಬಿಡಲಾಗಿದೆ ಎಂದು ಆರೋಪಿಸಿದ್ದಾರೆ
ಇನ್ನಷ್ಟು ಸುದ್ದಿಗಳು


