ವೈದ್ಯರೊಬ್ಬರ ಸಮಯ ಪ್ರಜ್ಞೆಯಿಂದ ಬಯಲಾಯ್ತು ದುಷ್ಕೃತ್ಯ! ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾಯ್ತು ಮತ್ತೊಂದು ಪೋಕ್ಶೋ ಕೇಸ್!

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Jul 21, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಂದು ಪೋಕ್ಸೋ ಪ್ರಕರಣ ದಾಖಲಾಗಿದೆ. ಚರ್ಚ್​ ಫಾದರ್​ ವಿರುದ್ದ ದಾಖಲಾಗದ ಲೈಂಗಿಕ ಕಿರುಕುಳ ಕೇಸ್​ನ ಬೆನ್ನಲ್ಲೆ ಇದೀಗ ಮತ್ತೊಂದು ಕೇಸ್  ಶಿವಮೊಗ್ಗ ಜಿಲ್ಲೆಯ ತಾಲ್ಲೂಕಿವೊಂದರಲ್ಲಿ ದಾಖಲಾಗಿದೆ. 

16 ವರ್ಷದ ಅಪ್ರಾಪ್ತೆಯನ್ನು 28 ವರ್ಷದ ಯುವಕನೊಬ್ಬ ಮದುವೆಯಾಗುವುದಾಗಿ ಹೇಳಿ ಪುಸಲಾಯಿಸಿ ಆಕೆಯೊಂದಿಗೆ ನಿರಂತರ ದೈಹಿಕ ಸಂಪರ್ಕ ಹೊಂದಿದ್ದಾನೆ. ಈ ಬಗ್ಗೆ ಫೋಕ್ಸೋ ಕೇಸ್ ದಾಖಲಾಗಿದೆ. ಹೊರಜಿಲ್ಲೆಯ ನಿವಾಸಿ ಮೊಹಮ್ಮದ್​ ಮುಜಾಫರ್​ ಎಂಬಾತ,  ಈ ಕೃತ್ಯೆವಸಗಿದ್ದು, ಹೊರಜಿಲ್ಲೆಯ ವೈದ್ಯರೊಬ್ಬರ ಸಮಯ ಪ್ರಜ್ಞೆಯಿಂದ ಪ್ರಕರಣ ಬೆಳಕಿಗೆ ಬಂದಿದೆ. 

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಅಪ್ರಾಪ್ತೆಯ ಮನೆಗೆ ಪರಿಚಯಸ್ಥನಾಗಿದ್ದ ಆರೋಪಿ ಮುಜಾಫರ್, ಅವರ ಮನೆಗೆ ಆಗಾಗ ಬಂದು ಹೋಗುತ್ತಿದ್ದ. ಈ ವೇಳೆ ಅಪ್ರಾಪ್ತೆಗೆ ನಿನ್ನನ್ನ ಮದುವೆಯಾಗುತ್ತೇನೆ ಎಂದು ಪದೇ ಪದೇ ಹೇಳುತ್ತಿದ್ದನಂತೆ, ಅಲ್ಲದೆ ನಿರಂತರವಾಗಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಮಧ್ಯೆ ಅಪ್ರಾಪ್ತೆಯು ಗರ್ಭಿಣಿಯಾಗಿದ್ದಾಳೆ. ಇದರ ಬಗ್ಗೆ ವಿಚಾರ ತಿಳಿದ ಆರೋಪಿ ಆಕೆಯನ್ನು ಹೊರಜಿಲ್ಲೆಯ ಆಸ್ಪತ್ರೆಯೊಂದಕ್ಕೆ ಹೋಗುವಂತೆ ತಿಳಿಸಿದ್ದಾನೆ.  ಅಲ್ಲಿಗೆ ಹೋದಾಗ ವೈದ್ಯರಿಗೆ ಈಕೆಯ ಬಗ್ಗೆ ಅನುಮಾನ ಬಂದು, ಆಕೆಯ ಪೂರ್ವಪರ ವಿಚಾರಿಸಿದ್ದಾರೆ. ಅಲ್ಲದೆ ಆಕೆ ಅಪ್ರಾಪ್ತೆಯೆಂದು ಗೊತ್ತಾಗಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಪರಿಶೀಲಿಸಿ, ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ವೈದ್ಯರೊಬ್ಬರ ಸಮಯಪ್ರಜ್ಞೆಯಿಂದಾಗಿ ಬಾಲಕಿ ಎಂದು ಗೊತ್ತಿದ್ದರೂ ಆಕೆಯನ್ನ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ ಆರೋಪಿಯ ವಿರುದ್ದ ಫೋಕ್ಸೋ ಕೇಸ್ ದಾಖಲಾಗಿದೆ. ಸದ್ಯ ಆತನನ್ನು ಸಹ ಜೈಲಿಗೆ ಕಳುಹಿಸಲಾಗಿದೆ. 

ಹೆಂಡತಿಯನ್ನೆ ಕೊಂದ ಗಂಡನಿಗೆ ಶಿವಮೊಗ್ಗ ಕೋರ್ಟ್​ ನೀಡಿತು ಕಠಿಣ ಶಿಕ್ಷೆ! ಡಿಶ್​ ಕೇಬಲ್​ ವಯರ್​ ಮರ್ಡರ್​ ಕಥೆಗೆ ತಾರ್ಕಿಕ ಅಂತ್ಯ!

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಕೇಸ್! ಚರ್ಚ್​ ಫಾದರ್​ಗೆ 14 ದಿನ ನ್ಯಾಯಾಂಗ ಬಂಧನ! ತೀವ್ರಗೊಂಡ ಸಂಘಟನೆ , ಸಮುದಾಯದ ಪ್ರತಿಭಟನೆ!

ಶಿವಮೊಗ್ಗ ಜಿಲ್ಲೆ ಚರ್ಚ್​ ಫಾದರ್​ವೊಬ್ಬರ ವಿರುದ್ಧ ದಾಖಲಾಯ್ತು ಫೋಕ್ಸೋ ಕೇಸ್!

ಶಿವಮೊಗ್ಗದ ಸ್ಪಾ ಮೇಲಿನ ರೇಡ್​ಗಳ ಹಿಂದೆ ಪ್ರೀತಿಸಿ ಮದುವೆಯಾದ ನವ ಜೋಡಿಯ ಕಣ್ಣೀರಿನ ಕಥೆ ! ಕೇಳದೇ ನಿಮಗೀಗಾ?

 

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor